ಶ್ರದ್ಧಾ ಕೊಲೆ ಪ್ರಕರಣ: ಅಫ್ತಾಬ್‌ನ ಸುಳ್ಳನ್ನು ಭೇದಿಸಿ ಐದಾರು ತಿಂಗಳ ಹಿಂದೆ ನಡೆದ ಭೀಕರ ಕೊಲೆ ಪ್ರಕರಣವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದು ಹೀಗೆ..

ನವದೆಹಲಿ: ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣದ ಆರೋಪಿ, ಬಂಧಿತ ಆಫ್ತಾಬ್ ಅಮೀನ್ ಪೂನಾವಾಲಾ ತನಿಖೆಯ ಆರಂಭದಲ್ಲಿ ದೆಹಲಿ ಮತ್ತು ಮುಂಬೈ ಪೊಲೀಸರನ್ನು ದಿಕ್ಕುತಪ್ಪಿಸಲು ಯತ್ನಿಸಿದ್ದ.
ಅಫ್ತಾಬ್ ಭೌತಿಕ ಪುರಾವೆಗಳನ್ನು ನಾಶ ಮಾಡುವ ಮೂಲಕ ಶ್ರದ್ಧಾ ಹತ್ಯೆಯನ್ನು ಮರೆಮಾಚಲು ಪ್ರಯತ್ನಿಸಿದ್ದ, ಆದಾಗ್ಯೂ, ಪೊಲೀಸರು ಡಿಜಿಟಲ್ ಪುರಾವೆಗಳ ಮೂಲಕ ಭೀಕರ ಕೊಲೆ ಪ್ರಕರಣವನ್ನು ಭೇದಿಸಿದರು.
ದೆಹಲಿ ಪೊಲೀಸರು ತನಿಖೆ ಆರಂಭಿಸಿದಾಗ, ತನ್ನ ಜೊತೆ ಜಗಳವಾದ ನಂತರ ಶ್ರದ್ಧಾ ವಾಕರ್‌ ಮೇ 22ರಂದು (ಮೇ 18ರಂದು ಶ್ರದ್ಧಾ ಕೊಲ್ಲಲ್ಪಟ್ಟರು) ಮನೆಯಿಂದ ಹೊರಟು ಹೋಗಿದ್ದಳು ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದ. ಅವಳು ತನ್ನ ಫೋನ್ ಅನ್ನು ಮಾತ್ರ ತನ್ನೊಂದಿಗೆ ಕೊಂಡೊಯ್ದಿದ್ದಾಳೆ ಮತ್ತು ಅವಳ ವಸ್ತುಗಳನ್ನು ಫ್ಲಾಟ್‌ನಲ್ಲಿ ಬಿಟ್ಟು ಹೋಗಿದ್ದಾಳೆ ಎಂದು ಆತ ಪೊಲೀಸರಿಗೆ ತಿಳಿಸಿದ್ದ. ಪೊಲೀಸ್ ಮೂಲಗಳ ಪ್ರಕಾರ, ಆತ ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಮತ್ತು ಅಂದಿನಿಂದ ಅವನಿಗೆ ಅವಳ ಸಂಪರ್ಕಕ್ಕೆ ಇರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.
ಆದರೆ, ಪೊಲೀಸರು ಇವರಿಬ್ಬರ ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಮತ್ತು ಅವರ ಫೋನ್‌ ಲೊಕೇಶನ್‌ ಬಗ್ಗೆ ತನಿಖೆ ಮಾಡಿದಾಗ ಅವರಿಗೆ ಈತನ ಮೇಲೆ ಸಂಶಯ ಬಂದಿದೆ.
ನಂತರ ಪೊಲೀಸರು ಮೇ 26ರಂದು ಶ್ರದ್ಧಾಳ ನೆಟ್ ಬ್ಯಾಂಕಿಂಗ್ ಖಾತೆ ಅಪ್ಲಿಕೇಶನ್‌ನಿಂದ ಆಫ್ತಾಬ್ ಖಾತೆಗೆ 54,000 ರೂ.ಗಳ ಹಣ ವ್ಯವಹಾರವಾಗಿದ್ದರ ಬಗ್ಗೆ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದ ನಂತರ ತನಿಖೆಯಲ್ಲಿ ಅವರಿಗೆ ತನಿಖೆಯಲ್ಲಿ ಮಹತ್ವದ ಪ್ರಗತಿ ಸಿಕ್ಕಿದೆ. ಈ ವ್ಯವಹಾರವು ಅಫ್ತಾಬ್‌ನ ಎಲ್ಲ ಸುಳ್ಳುಗಳನ್ನು ಬಹಿರಂಗಪಡಿಸಿದೆ.
ಯಾಕೆಂದರೆ ಮೇ 26 ರಂದು ನಡೆದ ಅವಳ ಮೊಬೈಲ್‌ ಬ್ಯಾಂಕ್ ಖಾತೆ ವರ್ಗಾವಣೆಯ ಸ್ಥಳವೂ ದೆಹಲಿಯಲ್ಲಿ ಅವರಿದ್ದ ಫ್ಲ್ಯಾಟ್‌ ನ ಮೆಹ್ರೌಲಿ ಪೊಲೀಸ್ ಠಾಣೆ ಪ್ರದೇಶವಾಗಿದೆ. ಹೀಗಾಗಿ ಪೊಲೀಸರು ತನಿಖೆ ಸರಿ ಹಾದಿಯಲ್ಲಿ ಸಾಗುತ್ತಿದೆ ಎಂದು ಕಂಡುಕೊಂಡರು.

ಅಲ್ಲದೇ, ಮೇ 31ರಂದು ಶ್ರದ್ಧಾಳ ಇನ್‌ಸ್ಟಾಗ್ರಾಮ್ ಖಾತೆಯಿಂದ ಅವರ ಸ್ನೇಹಿತನೊಂದಿಗೆ ಚಾಟ್ ಇತ್ತು. ಶ್ರದ್ಧಾ ಫೋನ್ ಇರುವ ಸ್ಥಳವನ್ನು ಪೊಲೀಸರು ಟ್ರ್ಯಾಕ್‌ ಮಾಡಿದಾಗ ಅದು ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಇದೆ ಎಂದು ತಿಳಿದುಬಂದಿದೆ.ಶ್ರದ್ಧಾ ತನ್ನ ಫೋನ್ ಅನ್ನು ತನ್ನೊಂದಿಗೆ ಕೊಂಡೊಯ್ದಿದ್ದರೆ, ಫೋನ್‌ ಲೊಕೇಶನ್‌ ಯಾಕೆ ಆತನ ಮನೆ ಇರುವ ಪ್ರದೇಶವನ್ನು ತೋರಿಸುತ್ತಿತ್ತು ಎಂಬ ಪೊಲೀಸರ ಪ್ರಶ್ನೆಗೆ ಅಫ್ತಾಬ್ ಉತ್ತರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಫ್ತಾಬ್‌ಗೆ ಸತ್ಯ ಬಾಯ್ಬಿಡುವುದು ಅನಿವಾರ್ಯವಾಯಿತು. ತನಿಖೆ ಮುಂದುವರಿದಂತೆ, ಪೊಲೀಸರು ಅಫ್ತಾಬ್‌ನ ನಾರ್ಕೊ ವಿಶ್ಲೇಷಣೆ ಪರೀಕ್ಷೆಯನ್ನು ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಶ್ರದ್ಧಾಳ ಕುಟುಂಬವು ಅವಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಕುಟುಂಬದವರು ಮಹಾರಾಷ್ಟ್ರದ ಮಾಣಿಕಪುರ ಪೊಲೀಸ್ ಠಾಣೆಯಲ್ಲಿ ಅವಳು ಕಾಣೆಯಾದ ಬಗ್ಗೆ ದೂರನ್ನು ದಾಖಲಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸ್ ಮೂಲಗಳು ತಿಳಿಸಿವೆ. ದೂರಿನ ನಂತರ, ಅಫ್ತಾಬ್‌ನನ್ನು ವಿಚಾರಣೆಗಾಗಿ ಮಾಣಿಕ್‌ಪುರ ಪೊಲೀಸ್ ಠಾಣೆಗೆ ಎರಡು ಬಾರಿ ವಿಚಾರಣೆಗೆ ಕರೆಸಲಾಗಿತ್ತು, ಕಳೆದ ತಿಂಗಳು ಒಂದು ಬಾರಿ ಮತ್ತು ನವೆಂಬರ್ 3 ರಂದು ಎರಡನೇ ಬಾರಿಗೆ. ಶ್ರದ್ಧಾ ಬಗ್ಗೆ ಕೇಳಿದಾಗ, ಶ್ರದ್ಧಾ ತಾನು ವಾಸಿಸುತ್ತಿದ್ದ ಸ್ಥಳವನ್ನು ತೊರೆದು ಹೋಗಿದ್ದಾಳೆ ಮತ್ತು ತಾವಿಬ್ಬರು ಈಗ ಒಟ್ಟಿಗೆ ವಾಸಿಸುವುದಿಲ್ಲ ಎಂದು ಹೇಳಿದ್ದಾನೆ. ವಿಚಾರಣೆ ವೇಳೆ ಆತ ತನ್ನ ಮುಖದಲ್ಲಿ ಆತಂಕದ ಯಾವುದೇ ಭಾವವನ್ನೂ ತೋರಿಸಲಿಲ್ಲ, ಎರಡನೇ ಬಾರಿ ಆತನನ್ನು ವಿಚಾರಣೆಗೆ ಕರೆದಾಗ ಮಹಾರಾಷ್ಟ್ರ ಪೊಲೀಸರು ಎರಡು ಪುಟಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು ಎಂದು ಮಹಾರಾಷ್ಟ್ರ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

ಹತ್ಯೆಗೆ ಒಂದು ವಾರದ ಮೊದಲು (ಮೇ 18) ಶ್ರದ್ಧಾಳನ್ನು ಕೊಲ್ಲಲು ತಾನು ಮನಸ್ಸು ಮಾಡಿದ್ದಾಗಿ ದೆಹಲಿ ಪೊಲೀಸರ ಮುಂದೆ ಆಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾಗುವ ಒಂದು ವಾರಕ್ಕೂ ಮುನ್ನ (ಮೇ 18) ಶ್ರದ್ಧಾಳನ್ನು ಕೊಲ್ಲಲು ಮನಸ್ಸು ಮಾಡಿದ್ದೆ. ಅಂದು ಕೂಡ ಶ್ರದ್ಧಾ ಮತ್ತು ನನ್ನ ನಡುವೆ ಜಗಳವಾಗಿತ್ತು, ಆಕೆ ಇದ್ದಕ್ಕಿದ್ದಂತೆ ಭಾವುಕಳಾಗಿ ಅಳಲು ತೋಡಿಕೊಂಡಾಗ ನಾನು ಅವಳನ್ನು ಕೊಲ್ಲಲು ನಿರ್ಧರಿಸಿದೆ. ನಾನು ನಂತರ ತಡೆದುಕೊಂಡೆ. ನಾನು ಆಗಾಗ್ಗೆ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡಿದರೆ ನಮ್ಮ ಸಂಬಂಧದ ಕುರಿತು ನನ್ನ ಬದ್ಧತೆಯ ಬಗ್ಗೆ ಅವಳು ಅನುಮಾನಿಸುತ್ತಿದ್ದಳು. ಅವಳು ತುಂಬಾ ಕೋಪಗೊಳ್ಳುತ್ತಿದ್ದಳು ಎಂದು ಆಫ್ತಾಬ್ ದೆಹಲಿ ಪೊಲೀಸರಿಗೆ ತಿಳಿಸಿದ್ದಾನೆ.
ಮೇ 18ರಂದು ಜಗಳವಾಡಿದ ನಂತರ ಶ್ರದ್ಧಾಳನ್ನು ಕೊಂದೆ. ನಂತರ ಶವವನ್ನು ಎಲ್ಲಿಯಾದರೂ ಎಸೆದರೆ ಸಿಕ್ಕಿಬೀಳಬಹುದೆಂದು ತಿಳಿದು ನನಗೆ ಭಯವಾಯಿತು. ಶವವನ್ನು ವಿಲೇವಾರಿ ಮಾಡುವ ಮಾರ್ಗಗಳನ್ನು ಹುಡುಕಲು ನಾನು ರಾತ್ರಿಯಿಡೀ ಗೂಗಲ್ ಬ್ರೌಸ್ ಮಾಡಿದೆ ಮತ್ತು ಅನುಮಾನ ಬರದಂತೆ ದೇಹವನ್ನು ಹೇಗೆ ತುಂಡು ಮಾಡಬೇಕು ಎಂಬುದರ ಕುರಿತು ನಾನು ಇಂಟರ್ನೆಟ್‌ಲ್ಲಿ ಹುಡುಕಿದೆ ಎಂದು ಅಫ್ತಾನ್‌ ಹೇಳಿದ್ದಾನೆ ಎಂದು ದೆಹಲಿ ಪೊಲೀಸ್ ಮೂಲಗಳು ಹೇಳಿವೆ.
ಅಪರಾಧಕ್ಕೆ ಸಂಬಂಧಿಸಿದ ವೆಬ್ ಸರಣಿಗಳು ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸಲು ಇಷ್ಟಪಡುವುದಾಗಿ ಆಫ್ತಾಬ್ ಒಪ್ಪಿಕೊಂಡಿದ್ದಾನೆ ಮತ್ತು ಈ ಕಾರ್ಯಕ್ರಮಗಳಿಂದಲೇ ಕತ್ತರಿಸಿದ ದೇಹದ ಭಾಗಗಳನ್ನು ಸಂರಕ್ಷಿಸುವ ಮತ್ತು ನಂತರ ಅವುಗಳನ್ನು ವಿಲೇವಾರಿ ಮಾಡುವ ಐಡಿಯಾ ಪಡೆದಿರುವುದಾಗಿ ಹೇಳಿದ್ದಾನೆ. ನನಗೆ ಅಪರಾಧದ ವೆಬ್ ಸರಣಿಗಳು ಮತ್ತು ಧಾರಾವಾಹಿಗಳನ್ನು ನೋಡುವುದು ತುಂಬಾ ಇಷ್ಟ ಮತ್ತು ಈ ಕಾರ್ಯಕ್ರಮಗಳನ್ನು ನೋಡಿದ್ದರಿಂದ ದೇಹದ ಅಂಗಗಳನ್ನು ಸಂರಕ್ಷಿಸುವ ಮತ್ತು ಅವಳ ಕುಟುಂಬ ಮತ್ತು ಸ್ನೇಹಿತರ ದೃಷ್ಟಿಯಲ್ಲಿ ಶ್ರದ್ಧಾಳನ್ನು ಜೀವಂತವಾಗಿದ್ದಾಳೆಂದು ಯಾವುದೇ ಅನುಮಾನ ಬಾರದಂತೆ ಬಿಂಬಿಸುವ ಬಗ್ಗೆ ನನಗೆ ಆಲೋಚನೆಗಳು ಬಂತು. ಕೊಲೆಯ ನಂತರ ಶ್ರದ್ಧಾಳ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ನಾನು ಪೋಸ್ಟ್ ಮಾಡುತ್ತಲೇ ಇದ್ದೆ. ನಾನೇ ಎಲ್ಲವನ್ನೂ ಮಾಡಿದ್ದೇನೆ ಎಂದು ಆರೋಪಿ ದೆಹಲಿ ಪೊಲೀಸರಿಗೆ ತಿಳಿಸಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಯೋಧ್ಯೆಯಲ್ಲಿ ರಾಮನವಮಿ ದಿನ ಬಾಲರಾಮನ ಹಣೆಗೆ ʼಸೂರ್ಯ ರಶ್ಮಿಯ ತಿಲಕ ʼ ; ಅದ್ಭುತ ದೃಶ್ಯ ಕಣ್ತುಂಬಿಕೊಂಡ ಭಕ್ತ ಸಾಗರ

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಮೊದಲು ಆಕೆಯ ಯಕೃತ್ತು ಮತ್ತು ಕರುಳನ್ನು ಕೊಚ್ಚಿದ ನಂತರ ವಿಲೇವಾರಿ ಮಾಡಿದ್ದಾನೆ. ಅವನು ತರಬೇತಿ ಪಡೆದ ಬಾಣಸಿಗನಾಗಿದ್ದರಿಂದ, ಅವಳ ಮಾಂಸವನ್ನು ತುಂಡು ಮಾಡಲು ಚಾಕುವನ್ನು ಹೇಗೆ ಉಪಯೋಗಿಸಬೇಕು ಎಂಬುದು ಅವನಿಗೆ ತಿಳಿದಿತ್ತು. ಯಕೃತ್ತು ಮತ್ತು ಕರುಳನ್ನು ಸಮೀಪದ ಚತ್ತರ್‌ಪುರ ಮತ್ತು ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಪೊಲೀಸರು ಇವರಿಬ್ಬರು ಮೊದಲು ಭೇಟಿಯಾದ ಬಂಬಲ್‌ ಡೇಟಿಂಗ್ ಅಪ್ಲಿಕೇಶನ್‌ಗೆ ಬರೆದು ಮತ್ತಷ್ಟು ವಿವರಗಳನ್ನು ಪಡೆಯಬಹುದು. ಅಫ್ತಾಬ್‌ನ ಪ್ರೊಫೈಲ್ ಮತ್ತು ಕೊಲೆಯ ನಂತರ ಅವನು ಭೇಟಿ ಮಾಡಿದ ಮಹಿಳೆಯರ ವಿವರಗಳನ್ನು ಕೋರಬಹುದು. ಯಾಕೆಂದರೆ ಆ್ಯಪ್‌ನಲ್ಲಿ ಈತನ ಜೊತೆ ಡೇಟ್ ಮಾಡಿರುವ ಯಾವುದೇ ಮಹಿಳೆ ಅಫ್ತಾಬ್ ಶ್ರದ್ಧಾಳನ್ನು ಕೊಲ್ಲಲು ಕಾರಣವೇ ಎಂದು ದೆಹಲಿ ಪೊಲೀಸರು ಖಚಿತಪಡಿಸಿಕೊಳ್ಳಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಶ್ರದ್ಧಾಳ ತಂದೆ ಮಂಗಳವಾರ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದು, ಘಟನೆಯ ಹಿಂದೆ ‘ಲವ್ ಜಿಹಾದ್’ ಇರಬಹುದು ಎಂದು ಶಂಕಿಸಿದ್ದಾರೆ. ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಲು ಆಫ್ತಾಬ್‌ಗೆ ಸಾಕಷ್ಟು ಸಮಯ ಸಿಕ್ಕಿದೆ ಎಂದು ಶ್ರದ್ಧಾ ತಂದೆ ಹೇಳಿದ್ದಾರೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement