ರಾಹುಲ್ ಗಾಂಧಿಯವರೇ ಇದೇನು? ಭಾರತ ಜೋಡೊ ಯಾತ್ರೆಯಲ್ಲಿ ರಾಷ್ಟ್ರಗೀತೆ ಬದಲಿಗೆ ಬೇರೆ ಹಾಡು ಪ್ಲೇ ಮಾಡಿದ್ದಕ್ಕೆ ಬಿಜೆಪಿ ವಾಗ್ದಾಳಿ

ನವದೆಹಲಿ: ಮಹಾರಾಷ್ಟ್ರದ ವಾಶಿಮ್‌ನಲ್ಲಿ ಭಾರತ್ ಜೋಡೋ ಯಾತ್ರಾ ಕಾರ್ಯಕ್ರಮದ ವೇಳೆ ರಾಷ್ಟ್ರಗೀತೆಯ ಬದಲಿಗೆ ಬೇರೆ ಹಾಡನ್ನು ತಪ್ಪಾಗಿ ಪ್ಲೇ ಮಾಡಿದ ನಂತರ ಭಾರತೀಯ ಜನತಾ ಪಕ್ಷವು ಬುಧವಾರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ತಪ್ಪಿಗೆ ಬಿಜೆಪಿ ನಾಯಕರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆಯೇ ಕೆಲ ನಿಮಿಷಗಳ ಕಾಲ ರಾಷ್ಟ್ರಗೀತೆಯ ಬದಲು ಬೇರೆ ಹಾಡನ್ನು ಪ್ಲೇ ಮಾಡಿದ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ಮುಖಂಡ ಅಮರ್ ಪ್ರಸಾದ್ ರೆಡ್ಡಿ ಅವರು ಈ ವೀಡಿಯೋ ಶೇರ್ ಮಾಡಿದ್ದು, “ರಾಹುಲ್ ಗಾಂಧಿಯವೇ, ಇದು ಏನು? ಎಂದು ಪ್ರಶ್ನಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಭಾರತ ಜೋಡೋ ಯಾತ್ರೆ ವೇಳೆ ನಡೆದ ಸಭೆಯಲ್ಲಿ ಭಾಷಣ ಮಾಡಿದ ನಂತರ ರಾಹುಲ್ ಗಾಂಧಿ ಕಾರ್ಯಕ್ರಮದ ಮುಕ್ತಾಯಕ್ಕಿಂತ ಮೊದಲು ರಾಷ್ಟ್ರಗೀತೆಯನ್ನು ನುಡಿಸಲು ಕೇಳಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರು ನಿಂತಿದ್ದಾಗ ಸಂಗೀತ ಮೊಳಗಿತು. ನಂತರ ರಾಹುಲ್ ಗಾಂಧಿ ನಾಯಕರಿಗೆ ಸನ್ನೆ ಮಾಡಿ ಸಂಗೀತವನ್ನು ನಿಲ್ಲಿಸುವಂತೆ ಸೂಚಿಸಿದರು.

ಯಾಕೆಂದರೆ ಅವರು ಪ್ಲೇ ಮಾಡಿದ್ದು ರಾಷ್ಟ್ರಗೀತೆಯಾಗಿರದೆ ಬೇರೆ ಹಾಡಾಗಿತ್ತು. ಮತ್ತು ಈ ವಿದ್ಯಮಾನ ನಡೆದ ನಂತರ ರಾಷ್ಟ್ರಗೀತೆ ಜನ ಗಣ ಮನ ನುಡಿಸಲಾಯಿತು.
ಸೆಪ್ಟೆಂಬರ್‌ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಜೋಡೋ ಯಾತ್ರೆ ಇದುವರೆಗೆ ಆರು ರಾಜ್ಯಗಳ 28 ಜಿಲ್ಲೆಗಳನ್ನು ಸುತ್ತಿ ಪ್ರಸ್ತುತ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿದೆ. ನವೆಂಬರ್ 20ರಂದು ಮಧ್ಯಪ್ರದೇಶ ಪ್ರವೇಶಿಸಲಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಜೈಲಿನೊಳಗೆ ಮಸಾಜ್, ಅದ್ದೂರಿ ಊಟದ ನಂತರ ಹೊರಬಿದ್ದ ಸತ್ಯೇಂದ್ರ ಜೈನ್ ಸೆಲ್‌ಗೆ ರೂಂ ಸೇವೆ ಮಾಡಿದ ವೀಡಿಯೊ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement