75ರ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ ಹು-ಧಾ ಪಾಲಿಕೆ ಮಾಜಿ ಮೇಯರ್

posted in: ರಾಜ್ಯ | 0

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಬಡಿ‌.ಕೆ ಚವ್ಹಾಣ ತಮ್ಮ 75ನೇ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ತಮ್ಮ ಮೃತ ಪತ್ನಿ ಶಾರದಾ ಅವರ ಅಕ್ಕ ಅನಸೂಯಾ ಅವರನ್ನು ಅವರು ಮದುವೆಯಾಗಿದ್ದು ಇಳಿವಯಸ್ಸಿನಲ್ಲಿ ತಮ್ಮ ಜೀವನದ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೊದಲ ಪತ್ನಿ ಶಾರದಾ ಮೂರು ತಿಂಗಳ ಹಿಂದೆ ತೀರಿಕೊಂಡಿದ್ದರು. ಪತ್ನಿ ತೀರಿದ ಮೂರು ತಿಂಗಳ ನಂತರ ಪತ್ನಿಯ ಸಹೋದರಿ ಅನಸೂಯಾ ಅವರನ್ನು ಡಿ.ಕೆ. ಚವ್ಹಾಣ ಮದುವೆಯಾಗಿದ್ದಾರೆ. ಅನಸೂಯಾ ಅವರಿಗೆ ಇದು ಮೊದಲ ಮದುವೆಯಾಗಿದೆ. ಮದುವೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಮದುವೆ ಶಾಸ್ತ್ರೋಕ್ತವಾಗಿ ನಡೆದಿದೆ. ಮದುವೆ ಕಾರ್ಯಕ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು.
ಮಕ್ಕಳು ಉದ್ಯೋಗದ ನಿಮಿತ್ತ ಬೇರೆ-ಬೇರೆ ಕಡೆಗಳಲ್ಲಿದ್ದಾರೆ. ಹೀಗಾಗಿ ಡಿ.ಕೆ. ಚವ್ಹಾಣ ಅವರನ್ನು ಮನೆಯಲ್ಲಿ ಯಾರು ನೋಡಿಕೊಳ್ಳಲು ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಸಂಬಂಧಿಕರು ಸೇರಿ ಚರ್ಚಿಸಿ ಎಲ್ಲರ ಒಪ್ಪಿಗೆ ಮೇರೆಗೆ ಡಿ.ಕೆ. ಚವ್ಹಾಣ ಅವರಿಗೆ ಮತ್ತೊಂದು ಮದುವೆ ಮಾಡಿದ್ದಾರೆ ಎನ್ನಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಇಂದಿನ ಪ್ರಮುಖ ಸುದ್ದಿ :-   ಬಿಜೆಪಿ ಸಂಸದರ ಎಚ್ಚರಿಕೆ ನಂತರ ಮೈಸೂರು-ಊಟಿ ರಸ್ತೆಯ ಬಸ್ ಶೆಲ್ಟರ್‌ನ ಎರಡು ಗುಮ್ಮಟ ತೆರವು

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement