ಬ್ಥಹತ್‌ ಆನೆ ಬೆನ್ನಟ್ಟಿದ ನಂತರ ಬಸ್ಸನ್ನು 8 ಕಿಮೀ ರಿವರ್ಸ್ ಗೇರ್‌ನಲ್ಲಿ ಹಿಮ್ಮುಖವಾಗಿ ಓಡಿಸಿದ ಬಸ್ ಚಾಲಕ | ವೀಕ್ಷಿಸಿ

ತ್ರಿಶೂರ್: ಆತಂಕಗೊಂಡ ಪ್ರಯಾಣಿಕರಿಂದ ತುಂಬಿದ್ದ ಬಸ್…ಕಾಡಿನ ಮಧ್ಯದ ರಸ್ತೆಯಲ್ಲಿ ಬೃಹತ್‌ ಆನೆ…! ಅಂಕುಡೊಂಕಾದ ರಸ್ತೆಯಲ್ಲಿ ಬಸ್ ಓಡಿಸುವಾಗ ಚಾಲಕನ ಕತೆ ಏನಾಗಬೇಡ..?
ಕೇರಳದಲ್ಲಿ ‘ಕಬಾಲಿ’ ಎಂಬ ಹೆಸರಿನ ಕಾಡಾನೆ ಬಸ್ ಒಂದರ ಮೇಲೆ ಅಟ್ಯಾಕ್ ಮಾಡಲು ಹೋಗಿದ್ದು, ಬಸ್ ಚಾಲಕ ಬಸ್ ಅನ್ನು ರಿವರ್ಸ್ ಗೇರ್‌ನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗಿ ಪ್ರಯಾಣಿಕರ ಜೀವನನ್ನು ಕಾಪಾಡಿದ್ದಾನೆ. ವಿಚಲಿನಾಗದ ಚಾಲಕ 8 ಕಿಮೀಗೂ ಹೆಚ್ಚು ದೂರ ವಾಹನವನ್ನು ಹಿಮ್ಮುಖವಾಗಿ ಓಡಿಸಿದ್ದಾರೆ. ಅರಣ್ಯ ರಸ್ತೆಯಲ್ಲಿನ ಕಡಿದಾದ ತಿರುವುಗಳಲ್ಲಿ ಎಚ್ಚರಿಕೆಯಿಂದ ಹಿಮ್ಮುಖದಲ್ಲಿ ವಾಹನ ಓಡಿಸಿ 40 ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಘಟನೆ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.
ಈ ಜಿಲ್ಲೆಯ ಚಾಲಕುಡಿಯ ವಾಲ್ಪಾರೈ ಮಾರ್ಗದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಕೆಲವು ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ಬಳಸಿ ಚಿತ್ರೀಕರಿಸಿದ್ದಾರೆ ಎಂದು ನಂಬಲಾದ ವೀಡಿಯೊದಲ್ಲಿ, ಖಾಸಗಿ ಬಸ್‌ನ ವಿರುದ್ಧ ದಿಕ್ಕಿನಿಂದ ಬೃಹತ್‌ ಆನೆ ಬರುತ್ತಿರುವುದು ಕಂಡುಬಂದಿದೆ.

ಇಕ್ಕಟ್ಟಾದ ಅರಣ್ಯದ ಹಾದಿಯಲ್ಲಿ ಸಂಚರಿಸಲು ಮತ್ತು ಬಸ್‌ನ್ನು ಆನೆಯ ಪಕ್ಕದಲ್ಲಿ ಓಡಿಸಲು ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ ಗಾಬರಿಗೊಂಡ ಪ್ರಯಾಣಿಕರು ಬಸ್ ಅನ್ನು ಹಿಮ್ಮುಖಗೊಳಿಸುವಂತೆ ಚಾಲಕನನ್ನು ಕೇಳಿಕೊಂಡರು.
ಪಳಗಿದ ಚಾಲಕ ಅಂಬುಜಾಕ್ಷನ್, ವಾಹನದೊಂದಿಗೆ ಹೆಜ್ಜೆ ಹಾಕುತ್ತಿದ್ದ ಆನೆ ರಸ್ತೆ ತೊರೆಯುವವರೆಗೂ ಅಂಬಲಪಾರದಿಂದ ಅನಕ್ಯಾಯಂಗೆ ರಿವರ್ಸ್ ಗೇರ್‌ನಲ್ಲಿ ಬಸ್ ಓಡಿಸಿ ಸಾಹಸ ಮಾಡಿದ್ದಾರೆ.
ಇದೊಂದು ಮರೆಯಲಾಗದ ಅನುಭವ… ಎಲ್ಲರೂ ಭಯದ ಹಿಡಿತದಲ್ಲಿದ್ದರು… ಎಂಟು ಕಿಲೋಮೀಟರ್‌ಗೂ ಹೆಚ್ಚು ದೂರ ರಿವರ್ಸ್‌ ಗೇರ್‌ನಲ್ಲಿ ಬಸ್‌ ತೆಗೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.

ಸುಮಾರು ಒಂದು ಗಂಟೆಗಳ ಕಾಲ ಬಸ್ ಹಿಂದೆ ಬಂದಿದ್ದ ಒಂಟಿ ಆನೆ ಅನಕ್ಕಯಂ ತಲುಪುವಷ್ಟರಲ್ಲಿ ಕಾಡಿಗೆ ಹೊಗಿದ್ದು. ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಆತಂಕದ ಕ್ಷಣಗಳನ್ನು ಉಂಟುಮಾಡಿದ ಆನೆ ಎರಡು ವರ್ಷಗಳಿಂದ ಆಗಾಗ್ಗೆ ಈ ಸ್ಥಳಕ್ಕೆ ಬರುತ್ತಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆಯ ಜೀಪಿನ ಮೇಲೆ ದಾಳಿ ನಡೆಸಿತ್ತು. ಅಂಬಲಪ್ಪರ ಕೆಎಸ್‌ಇಬಿ ಕಚೇರಿ ಮೇಲೂ ಆನೆ ದಾಳಿ ಮಾಡಿದೆ. ಎರಡು ವರ್ಷಗಳಿಂದ ಆನೆ ಈ ಪ್ರದೇಶಕ್ಕೆ ಆಗಾಗ ಬರುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಿಂದ ಆನೆಗೆ ರಜನಿಕಾಂತ್ ಅಭಿನಯದ ಚಲನಚಿತ್ರದ ಶೀರ್ಷಿಕೆ ಪಾತ್ರವಾದ ‘ಕಬಾಲಿ’ ಎಂದು ಹೆಸರಿಸಲಾಯಿತು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement