ಮದರಸಾಗೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ ಕಿರಾತಕನ ಬಂಧನ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾಸರಗೋಡು: ಮದರಸಾಕ್ಕೆ ತೆರಳಲು ನಿಂತಿದ್ದ 8ರ ಹರೆಯದ ಬಾಲಕಿಯನ್ನು ಎತ್ತಿ ರಸ್ತೆಗೆ ಎಸೆದ 31 ವರ್ಷದ ವ್ಯಕ್ತಿಯನ್ನು ಈ ಜಿಲ್ಲೆಯ ಮಂಜೇಶ್ವರದಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಎಂಟು ವರ್ಷದ ಬಾಲಕಿ ತನ್ನನ್ನು ಕರೆದುಕೊಂಡು ಹೋಗಲು ಬರುವ ಚಿಕ್ಕಪ್ಪನಿಗಾಗಿ ಮದರಸಾದ ಹೊರಗೆ ಕಾಯುತ್ತಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಆರೋಪಿ ಸ್ಥಳೀಯ ನಿವಾಸಿ ಅಬೂಬಕರ್ ಸಿದ್ದಿಕ್ ಎಂಬಾತನನ್ನು ನಂತರ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆಘಾತಕ್ಕೊಳಗಾದ ಹುಡುಗಿ ರಸ್ತೆಬದಿಯಲ್ಲಿ ನಿಂತಿದ್ದಾಗ ಯಾರೋ ತನಗೆ ಹೊಡೆದಿದ್ದಾರೆ ಎಂದು ತಿಳಿಸಿದಾಗ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಕೆಯ ಸಂಬಂಧಿಕರು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ, ಆರೋಪಿ ಸಿದ್ದಿಕ್, ರಸ್ತೆಯ ಇನ್ನೊಂದು ಬದಿಯಲ್ಲಿ ನಿಂತಿದ್ದ ಹುಡುಗಿಯ ಕಡೆಗೆ ನಡೆದುಕೊಂಡು ಬರುತ್ತಾನೆ ಹಾಗೂ ಅವಳನ್ನು ಹಿಡಿದು ಎತ್ತಿ ನೆಲಕ್ಕೆ ಅಪ್ಪಳಿಸುವುದು ವೀಡಿಯೊದಲ್ಲಿ ಕಂಡುಬಂದಿದೆ.

ನಂತರ ಆತ ಏನೂ ನಡೆದೇ ಇಲ್ಲ ಎಂಬಂತೆ ಪುನಃ ಬಂದ ದಾರಿಯಲ್ಲೇ ಹಿಂದಕ್ಕೆ ಹೋಗುತ್ತಿರುವುದನ್ನು ನೋಡಬಹುದು.
ಬಾಲಕಿಯ ಚಿಕ್ಕಪ್ಪ ಘಟನೆಯಿಂದ ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ. ರಸ್ತೆಬದಿಯಲ್ಲಿ ನಿಂತಿದ್ದಾಗ ಯಾರೋ ತನಗೆ ಹೊಡೆದರು ಎಂದು ಆಕೆ ಹೇಳಿದಳು. ಹೀಗಾಗಿ, ನಾನು ಹಿಂತಿರುಗಿ ಹೋಗಿ ಶಾಲೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದೆ ಮತ್ತು ದೃಶ್ಯಗಳನ್ನು ನೋಡಿ ನಾನು ಆಘಾತಕ್ಕೊಳಗಾದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

https://twitter.com/NadippinNayaka/status/1593267548191358976?ref_src=twsrc%5Etfw%7Ctwcamp%5Etweetembed%7Ctwterm%5E1593267548191358976%7Ctwgr%5E0a91b6b12f5b424d4125e63e561c97b33bf73a6d%7Ctwcon%5Es1_&ref_url=https%3A%2F%2Fpublictv.in%2Fman-lifts-and-throws-8-year-old-girl-to-ground-in-manjeshwara-kerala%2F

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯ ವಾಹಿನಿಗಳು ದೃಶ್ಯಗಳನ್ನು ಪ್ರಸಾರ ಮಾಡಲು ಆರಂಭಿಸಿದ್ದರಿಂದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) 307 (ಕೊಲೆಗೆ ಯತ್ನ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಗೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ, ಆದರೂ ವಿವರವಾದ ತಪಾಸಣೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement