ಚುನಾವಣೆಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಸ್ಪರ್ಧಿಸುವುದು ಬೇಡ, ಇದು ನನ್ನ ವೈಯಕ್ತಿಕ ಅಭಿಪ್ರಾಯ : ಸಂತೋಷ ಲಾಡ್ ಹೀಗೆ ಹೇಳಿದ್ದು ಯಾಕಂದ್ರೆ…

ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಸ್ಪರ್ಧೆ ಮಾಡುವುದು ಬೇಡ‌. ಅವರು ಸ್ಪರ್ಧೆ ಮಾಡಿ ಒಂದು ಕ್ಷೇತ್ರಕ್ಕೆ ಸೀಮಿತವಾಗುವುದರ ಬದಲು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಬಲಪಡಿಸುವ ಕಾರ್ಯಮಾಡಲಿ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪಕ್ಷ ಬಲಪಡಿಸಲು ರಾಜ್ಯ ಸುತ್ತಬೇಕಾಗಿರುವುದರಿಂದ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅಲ್ಲಿಗೆ ಸೀಮಿತವಾಗುತ್ತಾರೆ. ಆಗ ರಾಜ್ಯಾದ್ಯಂತ ಓಡಾಡಲು ಅವರಿಗೆ ಕಷ್ಟವಾಗುತ್ತದೆ. ಹೀಗಾಗಿ ಅವರು ಸ್ಪರ್ಧಿಸುವುದು ಒಳ್ಳೆಯದಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಪಕ್ಷದ ಅಭಿಪ್ರಾಯವಲ್ಲ. ಅದೇ ರೀತಿ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ ಸಹ ಸ್ಪರ್ಧೆ ಮಾಡಿ ಒಂದೇ ಕ್ಷೇತ್ರಕ್ಕೆ ಸೀಮಿತವಾಗುವುದರ ಬದಲು ರಾಜ್ಯಾದ್ಯಂತ ಪ್ರವಾಸ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ರಾಜ್ಯ ಸುತ್ತಾಟ ಮಾಡಿ ಪಕ್ಷದ ಪ್ರಚಾರದಲ್ಲಿ ಇಬ್ಬರು ನಾಯಕರು ತೊಡಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸ್ಪರ್ಧಿಸದೆ ಅಧಿಕಾರಕ್ಕೆ ಬರಲು ಅವಕಾಶವಿದೆ ಎಂದರು.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ನನಗೆ ಸಿದ್ದರಾಮಯ್ಯ ಅವರು ಬಳ್ಳಾರಿ ಹೋಗಿ ಎಂದು ಹೇಳಿಲ್ಲ. ನಾಗರಾಜ ಛಬ್ಬಿ ಅವರು ಸಿದ್ದರಾಮಯ್ಯ ಬಳಿ ಹೋಗಿ ಸಂತೋಷ ಲಾಡ ಅವರು ಬಳ್ಳಾರಿ ಬಳ್ಳಾರಿಗೆ ಹೋಗುತ್ತಾರೆ ಎಂದು ಹೇಳಿದ್ದರೆಂಬ ವಿಚಾರವನ್ನು ಸಿದ್ದರಾಮಯ್ಯ ಅವರು ನನಗೆ ಹೇಳಿದ್ದಾರೆ. ನಾಗರಾಜ ಛಬ್ಬಿ ನನ್ನ ಸ್ನೇಹಿತ. ಅವರು ಯಾಕೆ ಹಾಗೆ ಹೇಳಿದ್ದಾರೆಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಕಲಘಟಗಿ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದರು.
ನಾಗರಾಜ ಛಬ್ಬಿ ಅವರು ಪ್ರತಿ ಚುನಾವಣೆಯಲ್ಲಿ ಒಂದೊಂದು ಕ್ಷೇತ್ರ ಹುಡುಕಾಟ ಮಾಡುತ್ತಾರೆ. ಈಗ ಕಲಘಟಗಿ ಕ್ಷೇತ್ರಕ್ಕೆ ಬಂದು ಕುಕ್ಕರ್ ಹಂಚಿಕೆ‌ ಮಾಡುತ್ತಿದ್ದಾರೆ. ಇದಕ್ಕೆ ನನ್ನ ತಕರಾರೇನೂ ಇಲ್ಲ. ಆದರೆ ಕಲಘಟಗಿಯಲ್ಲಿ ಬಂದು ಅಡ್ಡಾಡಿದರೆ ಅಲ್ಲಿ ಎಂತಹ ವಾತಾವರಣವಿದೆ ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಅಂಥಹ ವಿಚಾರವೇ ಇಲ್ಲ. ಹಾಗೂ ಅಂತಹ ಪ್ರಸ್ತಾಪವೇ ಇಲ್ಲ. ಬಿಜೆಪಿಯವರು ಯಾರೂ ನನ್ನನ್ನೂ ಸಂಪರ್ಕಿಸಿಲ್ಲ. ಆದರೂ ಈ ಪ್ರಶ್ನೆ ಯಾಕೆ ಬಂತು ಎಂಬುದು ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement