ಚಕ್ರವರ್ತಿ ಸೂಲಿಬೆಲೆ ಸವಾಲಿಗೆ ಸತೀಶ ಜಾರಕಿಹೊಳಿ ಕೊಟ್ಟ ಉತ್ತರ ಹೀಗಿದೆ..

ಬೆಳಗಾವಿ: 50% ಸುಳ್ಳು ಹೇಳುವವರ ವಿರುದ್ಧ ಚರ್ಚೆ ಮಾಡಬಹುದು. ಆದರೆ, ಚಕ್ರವರ್ತಿ ಸೂಲಿಬೆಲೆ ರಾಜ್ಯದಲ್ಲಿ ಸುಳ್ಳಿನ ಯುನಿವರ್ಸಿಟಿಯ ವಿಸಿ. ಅಂಥವರ ಜತೆ ಚರ್ಚೆ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ನೂರಕ್ಕೆ.. ಸಾವಿರದಷ್ಟು .. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅಂಥವರ ಜತೆ ಚರ್ಚೆ ಮಾಡುವುದು ಬೇಡ ಎಂಬುದು ನನ್ನ ಹಾಗೂ ನನ್ನ ಹಿತೈಷಿಗಳ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.
ಚಕ್ರವರ್ತಿ ಸೂಲಿಬೆಲೆ ಸವಾಲಿಗೆ ಉತ್ತರಿಸಲು ನಾನು ಸಿದ್ಧನಿದ್ದೇನೆ. ಹಿಂದೂ ಪದ ಎಲ್ಲಿಂದ ಹೇಗೆ ಬಂತು ಎಂಬುದರ ಬಗ್ಗೆ ಚರ್ಚೆ ನಡೆಯಲಿ, ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಕಾತರ ನನಗೂ ಇದೆ. ಆದರೆ, ಈ ಸುಳ್ಳಿನ ಸರದಾರರ ಜತೆ ಚರ್ಚೆ ಮಾಡುವುದು ಎಷ್ಟು ಸರಿ ಎಂಬುದರ ಬಗ್ಗೆಯೂ ನಮಗೆ ಗೊತ್ತಿದೆ ಎಂದು ಹೇಳಿದರು.

ಸೂಲಿಬೆಲೆ ಅವರು 10 ವರ್ಷಗಳ ಹಿಂದೆ ಹೇಳಿರುವ ಹೇಳಿಕೆಯನ್ನು ನಾವು ಕೂಡ ಪರಿಶೀಲನೆ ಮಾಡುತ್ತಿದ್ದೇವೆ. ಚಿನ್ನದ ರಸ್ತೆ ಎಲ್ಲಿದೆ ಎಂಬುದನ್ನು ಹುಡುಕಬೇಕಿದೆ. ಬೆಂಗಳೂರಿನಿಂದ ಮಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ರಾತ್ರಿ ಊಟಕ್ಕೆ ಬೆಂಗಳೂರು ಬರಬೇಕು. ಡಾಲರ್‌ ಹಾಗೂ ಆಸ್ಪತ್ರೆಗಳನ್ನು ಲ್ಯಾಪ್‌ಟಾಪ್‌ನಲ್ಲಿ ಹುಡುಕಿ ರೋಗಿಯ ಸ್ಥಿತಿಗತಿ ನೋಡುವುದನ್ನು ಎಲ್ಲಿ ಮಾಡಿದ್ದಾರೆ ಎಂಬುದನ್ನು ನೋಡಬೇಕಿದೆ. ಅವರು ಹೇಳಿದರಲ್ಲಿ ಯಾವುದಾದರೂ ಒಂದು ಸತ್ಯವಿದ್ದರೂ ಚರ್ಚೆಗಿಳಿಯಲು ಸಿದ್ಧ. ಆದರೆ ಅವರು ಸುಳ್ಳನ್ನೇ ಹೇಳುತ್ತಾರೆ ಎಂದರು.

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ | ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

ವಿಜಯಪುರದಲ್ಲಿ ನಿಮ್ಮ ಸಮಾವೇಶ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯಪುರದಲ್ಲಿ ಸಮಾವೇಶ ಮಾಡಬೇಕೆಂಬ ಸನ್ನಿವೇಶ ನಮಗಿಲ್ಲ, ನಮ್ಮದೇ ಆದ ವೇದಿಕೆಗಳು ಸಾಕಷ್ಟಿವೆ. ವಿರೋಧಿಗಳಿಗೆ ತಕ್ಕ ಉತ್ತರವನ್ನು ಎಲ್ಲಿ ನಿಂತು ಹೇಳಿದರೂ ಅದು ಅವರಿಗೆ ತಟ್ಟುತ್ತದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದಲೇ ಅಭ್ಯರ್ಥಿಯಾಗಿ ಪುನಃ ಕಣಕ್ಕಿಳಿಯಲಿದ್ದೇನೆ. ಪಕ್ಷ ಸಂಘಟನೆಗಾಗಿ ನಾನು ಸದಾ ಸಿದ್ಧನಾಗಿದ್ದೇನೆ. ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ ಎಂದರು.

2 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement