ಆನೆ ದಾಳಿಗೆ ಮಹಿಳೆ ಸಾವು: ಸಾಂತ್ವನ ಹೇಳಲು ಬಂದ ಶಾಸಕರ ಮೇಲೆ ಹಲ್ಲೆ

posted in: ರಾಜ್ಯ | 0

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ನಂತರ ಹಲ್ಲೆ ನಡೆಸಿರುವ ಆರೋಪಿತ ಘಟನೆ ಮೂಡಿಗೆರೆ ತಾಲೂಕಿನ ತಾಲೂಕಿನ ಕುಂದೂರಿನಲ್ಲಿ ನಡೆದಿದೆ.
ಕುಂದೂರಿನ ತೋಟದಲ್ಲಿ ಭಾನುವಾರ ಆನೆದಾಳಿಯಿಂದ ಶೋಭಾ (45) ಎಂಬುವರು ಮೃತಪಟ್ಟಿದ್ದರು. ವಿಷಯ ತಿಳಿದು ಶಾಸಕ ಎಂ.ಪಿ. ಕುಮಾರಸ್ವಾಮಿ ಅವರೂ ಸ್ಥಳಕ್ಕೆ ಆಗಮಿಸಿದರು. ಆಗ ಉದ್ರಿಕ್ತರು ಅವರಿಗೆ ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಪೊಲೀಸರು ಲಾಠಿ ಹಿಡಿದು ಉದ್ರಿಕ್ತರನ್ನು ಚದುರಿಸಬೇಕಾಯಿತು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಅಲ್ಲದೆ, ಶಾಸಕ ಕುಮಾರಸ್ವಾಮಿ ಅವರನ್ನು ಅರಣ್ಯ ಇಲಾಖೆಯ ಜೀಪು ಹತ್ತಿಸಿದರು. ಈ ಸಂದರ್ಭದಲ್ಲಿ ನೂಕಾಟದಲ್ಲಿ ಕುಮಾರಸ್ವಾಮಿ ಅವರ ಅಂಗಿ ಹರಿಯಿತು. ಉದ್ರಿಕ್ತ ಜನರು ಜೀಪನ್ನು ಸ್ವಲ್ಪ ದೂರದವರೆಗೆ ಹಿಂಬಾಲಿಸಿಕೊಂಡು ಹೋದರು. ಪೊಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟರು. ಶಾಸಕರು ಜೀಪಿನಿಂದ ಇಳಿಯಬೇಕು ಎಂದು ಜನರು ಪಟ್ಟು ಹಿಡಿದರು. ನಂತರ ಜೀಪಿನ ಮೇಲೆ ಕಲ್ಲು ತೂರಾಟವನ್ನೂ ನಡೆಸಿದರು.
ಘಟನೆಯ ಬಳಿಕ, ಅಂಗಿ ಹರಿದ ಸ್ಥಿತಿಯಲ್ಲಿ ವೀಡಿಯೊ ಸಂದೇಶವನ್ನು ಹರಿಬಿಟ್ಟ ಶಾಸಕ ಕುಮಾರಸ್ವಾಮಿ ಅವರು, ‘ಪ್ರತಿಭಟನಾ ಸ್ಥಳದಲ್ಲೇ ಇರಲು ಬಯಸಿದ್ದೆ. ಆದರೆ, ಪೊಲೀಸರು ನನ್ನನ್ನು ಅಲ್ಲಿಂದ ಕಳುಹಿಸಿದರು. ಇದು ಪೊಲೀಸರು ಮಾಡಿದ ತಪ್ಪು. ಉದ್ದೇಶ ಪೂರ್ವಕವಾಗಿ ನನ್ನ ಮೇಲೆ ಹಲ್ಲೆ ಮಾಡಿಸಲಾಗಿದೆ. ಇದರಲ್ಲಿ ಪೊಲೀಸರ ವೈಫಲ್ಯವೂ ಇದೆ ಎಂದು ಆರೋಪಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಹೊನ್ನಾವರ : ಮನೆಯ ಬಾಗಿಲ ಮುಂದೆಯೇ ಪ್ರತ್ಯಕ್ಷವಾದ ಚಿರತೆ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement