ಮಂಗಳೂರು ಆಟೋ ಸ್ಫೋಟ ಘಟನೆ: ಶಾರಿಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಆಗಮಿಸಿದ ಹೆತ್ತವರು

ಮಂಗಳೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ಶಾರೀಕ್‌‌ನ ಗುರುತು ಪತ್ತೆ ಹಚ್ಚಲು ಕುಟುಂಬಸ್ಥರನ್ನು ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಪೊಲೀಸರು ಕರೆತಂದಿದ್ದಾರೆ.
ಶಂಕಿತ ಶಾರೀಕ್ ಗುರುತು ಪತ್ತೆಗೆ ಮೂವರು ಮಹಿಳೆಯರು ಆಗಮಿಸಿದ್ದು, ಮಹಿಳೆಯಯೊಂದಿಗೆ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗ್ಡೆ ಕೂಡ ಆಗಮಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿರುವ ಶಾರೀಕ್ ಕುಟುಂಬಸ್ಥರು ಗುರುತು ಪತ್ತೆ ಹಚ್ಚಲಿದ್ದಾರೆ.

ಶೇ.45 ರಷ್ಟು ಶಾರೀಕ್ ದೇಹ ಸುಟ್ಟು ಹೋಗಿದ್ದರಿಂದ ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುಖ ಬಾವು ಬಂದಿರುವ ಕಾರಣ ಪೊಲೀಸರು ಆತ ಶಾರಿಕ್‌ ಎಂಬುದನ್ನು ಕುಟುಂಬಸ್ಥರಿಂದಲೇ ದೃಢೀಕರಣ ಬಯಸಿದ್ದಾರೆ. ಹೀಗಾಗಿ ಕುಟುಂಬಸ್ಥರನ್ನು ಕರೆತಂದಿದ್ದಾರೆ. ಅವರಿಗೂ ಗೊಂದಲ ಉಂಟಾದರೆ ಕೊನೆಗೆ ಡಿಎನ್‌ಎ ಪರೀಕ್ಷೆಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಎಡಿಜಿಪಿ ಅಲೋಕಕುಮಾರ್ ಅವರು ಮಂಗಳೂರಿಗೆ ಆಗಮಿಸಿದ್ದು ಘಟನಾ ಸ್ಥಳ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ, ಶಾರಿಕ್ ಹೆತ್ತವರನ್ನೂ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement