ರಾಜ್ಯ ಸರ್ಕಾರದ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ..ಪಟ್ಟಿ ಇಲ್ಲಿದೆ

posted in: ರಾಜ್ಯ | 0

ಬೆಂಗಳೂರು:  ರಾಜ್ಯ ಸರ್ಕಾರ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಟಿಸಿದೆ.  ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪಟ್ಟಿಯಲ್ಲಿ ಒಟ್ಟು 19 ರಜೆಗಳು ಜೊತೆಗೆ ಎಲ್ಲ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ನೌಕರರು ರಜೆಗಳು ಲಭ್ಯವಾಗಲಿವೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜನವರಿ 15), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 23), ನರಕ ಚತುರ್ದಶಿ (ನವೆಂಬರ್ 12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅಕ್ಟೋಬರ್ 14), ಹಾಗೂ ನಾಲ್ಕನೇ ಶನಿವಾರದಂದು ಬರುವ ಕುತುಬ್ ಎ ರಂಜಾನ್ (ಏಪ್ರಿಲ್ 22) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 28) ಇವುಗಳನ್ನು ರಜೆಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ.
ವರ್ಷದ ಕೊನೆಯ ತಿಂಗಳ ಸಮೀಪದಲ್ಲಿರುವ ಸರ್ಕಾರಿ ನೌಕರರು 2023 ಹೊಸ ವರ್ಷ ಸ್ವಾಗತಿಸಲಿದ್ದು, ಸರ್ಕಾರ 2023ರ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಸಲ್ಮಾನ್ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಆಗದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವಂತ 2023ನೇ ಸಾಲಿನ ರಜೆಗಳ ಪಟ್ಟಿಯಲ್ಲಿ 19 ಸಾರ್ವತ್ರಿಕ ರಜೆಗಳಿವೆ ಹಾಗೂ 17 ಪರಿಮಿತ ರಜೆಗಳನ್ನು ಒಳಗೊಂಡಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಚುನಾವಣೆ ಸನಿಹದಲ್ಲೇ ಬಿಜೆಪಿಯ ವಿಧಾನ ಪರಿಷತ್‌ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರು ರಾಜೀನಾಮೆ : ಮುಂದಿನ ನಡೆ..?

2023ರ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ
ಜನವರಿ 26 – ಗುರುವಾರ – ಗಣರಾಜ್ಯೋತ್ಸವ
ಫೆಬ್ರವರಿ 18 – ಶನಿವಾರ – ಮಹಾಶಿವರಾತ್ರಿ
ಮಾರ್ಚ್ 3 – ಬುಧವಾರ – ಯುಗಾದಿ ಹಬ್ಬ
ಏಪ್ರಿಲ್ 4 – ಸೋಮವಾರ – ಮಹಾವೀರ ಜಯಂತಿ
ಏಪ್ರಿಲ್ 7 – ಶುಕ್ರವಾರ – ಗುಡ್ ಫ್ರೈಡೆ
ಏಪ್ರಿಲ್ 14 – ಶುಕ್ರವಾರ – ಡಾ. ಬಿ.ಆರ್. ಅಂಬೇಡ್ಕರ ಜಯಂತಿ
ಮೇ 1 – ಸೋಮವಾರ – ಕಾರ್ಮಿಕ ದಿನಾಚರಣೆ
ಜೂನ್ 29 – ಗುರುವಾರ – ಬಕ್ರೀದ್
ಜುಲೈ 29 – ಶನಿವಾರ – ಮೊಹರಂ ಕಡೆ ದಿನ
ಆಗಸ್ಟ್ 15 – ಮಂಗಳವಾರ – ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 18 – ಸೋಮವಾರ – ವರಸಿದ್ಧಿ ವಿನಾಯಕ ವೃತ
ಸೆಪ್ಟೆಂಬರ್ 28 – ಗುರುವಾರ – ಈದ್ ಮಿಲಾದ್
ಅಕ್ಟೋಬರ್ 2 – ಸೋಮವಾರ – ಗಾಂಧಿ ಜಯಂತಿ
ಅಕ್ಟೋಬರ್ 23 – ಸೋಮವಾರ – ಮಹಾನವಮಿ – ಆಯುಧ ಪೂಜೆ
ಅಕ್ಟೋಬರ್ 24 – ಮಂಗಳವಾರ – ವಿಜಯದಶಮಿ
ನವೆಂಬರ್ 1 – ಬುಧವಾರ – ಕನ್ನಡ ರಾಜ್ಯೋತ್ಸವ
ನವೆಂಬರ್ 14 – ಮಂಗಳವಾರ – ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 30 – ಗುರುವಾರ – ಕನಕದಾಸ ಜಯಂತಿ
ಡಿಸೆಂಬರ್ 25 – ಸೋಮವಾರ – ಕ್ರಿಸ್ಮಸ್

ಇಂದಿನ ಪ್ರಮುಖ ಸುದ್ದಿ :-   7 ನೂತನ ವಿಶ್ವ ವಿದ್ಯಾಲಯಗಳಿಗೆ ಕುಲಪತಿಗಳ ನೇಮಕ

 

2023ನೇ ಸಾಲಿನ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿ

30-01-2023 – ಸೋಮವಾರ, ಮಧ್ವನವಮಿ
07-03-2023 – ಮಂಗಳವಾರ, ಷಬ್ ಎ ಬರಾತ್
08-03-2023 – ಬುಧವಾರ, ಹೋಳಿ ಹಬ್ಬ
30-03-2023 – ಗುರುವಾರ, ಶ್ರೀರಾಮನವಮಿ
18-04-2023 – ಮಂಗಳವಾರ, ಷಬ್ ಎ ಖದರ್
21-04-2023 – ಶುಕ್ರವಾರ, ಜುಮತ್ ಉಲ್ ವಿದಾ
25-04-2023 – ಮಂಗಳವಾರ, ಶ್ರೀಶಂಕರಾಚಾರ್ಯ ಜಯಂತಿ, ಶ್ರೀರಾಮಾನುಜಾಚಾರ್ಯ ಜಯಂತಿ
05-05-2023 – ಶುಕ್ರವಾರ, ಬುದ್ಧಪೂರ್ಣಿಮ
25-08-2023 – ಶುಕ್ರವಾರ, ಶ್ರೀ ವರಮಹಾಲಕ್ಷ್ಮೀ ವ್ರತ
29-08-2023 – ಮಂಗಳವಾರ, ಋಗ್ ಉಪಕರ್ಮ, ತಿರು ಓಣಂ
30-08-2023 – ಬುಧವಾರ, ಯಜುರ್ ಉಪಕರ್ಮ
31-08-2023 – ಗುರುವಾರ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ
06-09-2023 – ಬುಧವಾರ, ಶ್ರೀ ಕೃಷ್ಣ ಜನ್ಮಾಷ್ಠಮಿ
08-09-2023 – ಶುಕ್ರವಾರ, ಕನ್ಯಾಮರಿಯಮ್ಮ ಜಯಂತಿ
18-10-2023 – ಬುಧವಾರ, ತುಲಾ ಸಂಕ್ರಮಣ
27-11-2023 – ಸೋಮವಾರ, ಗುರುನಾನಕ್ ಜಯಂತಿ
28-11-2023 – ಮಂಗಳವಾರ, ಹುತ್ತರಿ ಹಬ್ಬ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement