ವೋಟರ್‌ ಐಡಿ ಹಗರಣ: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ

ಬೆಂಗಳೂರು : ವೋಟರ್ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ರಾಜ್ಯ ಸರ್ಕಾರವು ಆದೇಶ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ಮತದಾರರ ಐಡಿಗೆ ಸಂಬಂಧಿಸಿದಂತೆ ಏನೇ ಅಕ್ರಮ ನಡೆದರೂ ಅದನ್ನು ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ಮಾತ್ರ ಅಧಿಕಾರ ಇದೆ ಎಂದು ಅದು ಸ್ಪಷ್ಟಪಡಿಸಿದೆ.ಮತದಾರರ ಪಟ್ಟಿಗಳ ನಿರ್ವಹಣೆ, ಚುನಾವಣೆಗಳನ್ನು ನಡೆಸುವುದು, ಚುನಾವಣಾ ವಿಷಯಗಳಲ್ಲಿ ಅಕ್ರಮ ಆರೋಪ ಬಂದಾಗ ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ಮಾತ್ರ ಅಧಿಕಾರವಿದೆಯೇ ಹೊರತು ಅವುಗಳ ಬಗ್ಗೆ ತನಿಖೆ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ತಿಳಿಸಿದೆ.

ಸರ್ಕಾರ ಮತದಾರರ ಐಡಿ ಮಾಹಿತಿ ಕಲೆ ಹಾಕಿದ ಖಾಸಗಿ ಸಂಸ್ಥೆ ವಿರುದ್ಧ ತನಿಖೆಗ ಆದೇಶಿಸಿದ್ದು ಕಾಡುಗೋಡಿ ಮತ್ತು ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತದ ಚುನಾವಣಾ ಆಯೋಗ ಸ್ವತಂತ್ರ ಅಂಗವಾಗಿದ್ದು ಮತದಾರರ ಪಟ್ಟಿಗಳ ತಯಾರಿ, ಪ್ರಕಟಣೆ ಮತ್ತು ಪರಿಷ್ಕರಣೆ ಕೈಗೊಳ್ಳುತ್ತದೆ. ಭಾರತದ ಚುನಾವಣಾ ಆಯೋಗದ ನಿರ್ದೇಶನದೊಂದಿಗೆ ಎಲ್ಲಾ ಚಟುವಟಿಕೆಗಳನ್ನು ನೇರವಾಗಿ ಅಧೀಕ್ಷಕರ ಅಡಿಯಲ್ಲಿ ನಡೆಸಲಾಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಇದರಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರ ಪಾಲಾದ ಇಬ್ಬರು ಪ್ರವಾಸಿಗರು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement