ಕಾಂಗ್ರೆಸ್‌ ಮೈತ್ರಿ ತೊರೆದು ಶಿವಸೇನೆ ದೂರವಾಗಲಿದೆಯೇ? ಸಾವರ್ಕರ್-ಹಿಂದುತ್ವದಲ್ಲಿ ರಾಜಿ ಇಲ್ಲ ಎಂದು ರಾವತ್ ಹೇಳಿಕೆ ನಂತರ ಹರಡಿದ ಊಹಾಪೋಹ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮಹಾ ವಿಕಾಸ್ ಅಘಾಡಿ (ಎಂವಿಎ) ಯ ಭಾಗವಾಗಿದ್ದರೂ ಸಹ ವೀರ್‌ ಸಾವರ್ಕರ್ ಮತ್ತು ಹಿಂದುತ್ವದ ಪ್ರಮುಖ ಸೈದ್ಧಾಂತಿಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಸೇನೆ ರಾಜ್ಯಸಭಾ ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.
ಶಿವಸೇನೆಯ ಈ ನಿಲುವು ಕಾಂಗ್ರೆಸ್ ಜೊತೆಗಿನ ಮೈತ್ರಿಯ ಮೇಲೆ ಪರಿಣಾಮ ಬೀರಲಿದೆಯೇ? ರಾವತ್ ಹೇಳಿಕೆಯು ರಾಜ್ಯದ ರಾಜಕೀಯ ವಲಯದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಯ ಬಗ್ಗೆ ವದಂತಿಗಳಿಗೆ ಕಾರಣವಾಗಿದೆ. ಆದಾಗ್ಯೂ, ತಮ್ಮ ಪಕ್ಷವು ಭಿನ್ನಾಭಿಪ್ರಾಯಗಳ ಹೊರತಾಗಿಯೂ ದೀರ್ಘಕಾಲದವರೆಗೆ ಭಾರತೀಯ ಜನತಾ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು ಮತ್ತು ಅದು ಸುಗಮವಾಗಿ ಅನೇಕ ವರ್ಷಗಳ ಕಾಲ ನಡೆದಿತ್ತು ಎಂದು ಅವರು ಹೇಳಿದರು.
ಶಿವಸೇನೆಯು ರಾಜಿ ಮಾಡಿಕೊಳ್ಳಲಾಗದ ಕೆಲವು ವಿಷಯಗಳಿವೆ. ಇದರಲ್ಲಿ ವೀರ್ ಸಾವರ್ಕರ್ ಮತ್ತು ಹಿಂದುತ್ವದ ವಿಷಯವೂ ಸೇರಿದೆ. ನಮ್ಮ ಪಕ್ಷವು ಒಂದು ಸಿದ್ಧಾಂತದ ಮೇಲೆ ಕಟ್ಟಲ್ಪಟ್ಟಿದೆ ಮತ್ತು ನಾವು ಅದನ್ನು ಕೈಬಿಡುವ ಪ್ರಶ್ನೆಯೇ ಇಲ್ಲ” ಎಂದು ಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾವತ್ ಹೇಳಿದ್ದಾರೆ. .

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಕಳೆದ ವಾರ, ಸಾವರ್ಕರ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕಾತ್ಮಕ ಕಾಮೆಂಟ್‌ಗಳು ವಿವಾದಕ್ಕೆ ಕಾರಣವಾದ ನಂತರ ಶಿವಸೇನೆ ರಕ್ಷಣಾತ್ಮಕವಾಗಿದೆ ಮತ್ತು ಸಾವರ್ಕರ್ ಅವರ ಬಗ್ಗೆ ಇಂತಹ ಕಾಮೆಂಟ್‌ಗಳು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಎಂವಿಎ ಮೈತ್ರಿಯಲ್ಲಿ ಬಿರುಕು ಉಂಟುಮಾಡಬಹುದು ಎಂದು ರಾವತ್ ಎಚ್ಚರಿಸಿದ್ದರು.
ದೀರ್ಘಾವಧಿಯಲ್ಲಿ ಮೈತ್ರಿ ಉಳಿಯುತ್ತದೆಯೇ ಎಂಬ ಪ್ರಶ್ನೆಗೆ ರಾವತ್, ದೇಶಕ್ಕೆ ಅಗತ್ಯವಿದ್ದರೆ ಅದು ಉಳಿಯುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.‘ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಂವಿಧಾನ ಕಾಪಾಡಬೇಕಾದರೆ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು’ ಎಂದರು.
ಮಂಗಳವಾರ ನವದೆಹಲಿಯಲ್ಲಿದ್ದ ರಾವತ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ-ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಹೇಳಿಕೆಯ ವಿವಾದದಲ್ಲಿ, ಸೇನಾ ನಾಯಕ ಕೊಶ್ಯಾರಿ ಅವರನ್ನು ತಮ್ಮ ಸ್ಥಾನದಿಂದ ವಜಾಗೊಳಿಸಬೇಕೆಂದು ರಾಜ್ಯಾದ್ಯಂತ ಬೇಡಿಕೆಯಿದೆ ಎಂದು ಹೇಳಿದರು.
ವೀರ್‌ ಸಾವರ್ಕರ್ ಅವರ ಬಗ್ಗೆ ಇಂತಹ ವಿಷಯಗಳನ್ನು ನೀವು ಹೇಗೆ ಸಹಿಸಿಕೊಳ್ಳುತ್ತೀರಿ ಎಂದು ಬಿಜೆಪಿಯವರು ಪ್ರಶ್ನಿಸಿದರೆ ನಿಮ್ಮ ರಾಜ್ಯಪಾಲರು ಛತ್ರಪತಿ ಶಿವಾಜಿ ವಿರುದ್ಧ ಈ ರೀತಿ ಮಾತನಾಡುವುದನ್ನು ಹೇಗೆ ಸಹಿಸಿಕೊಳ್ಳುತ್ತೀರಿ ಎಂದು ನಾವು ಕೇಳಬೇಕಾಗುತ್ತದೆ, ಆಗ ಅವರ ಬಳಿಯೂ ಯಾವುದೇ ಉತ್ತರವಿರುವುದಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ನೇಮಕಗೊಂಡ ಹೆಚ್ಚಿನ ರಾಜ್ಯಪಾಲರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು, ಆದರೆ ಅವರು ರಾಜ್ಯಪಾಲರ ಹುದ್ದೆ ಅಲಂಕರಿಸಿದಾಗ, ಅವರು ರಾಜಭವನವನ್ನು ಬಿಜೆಪಿ ಪಕ್ಷದ ಕಚೇರಿಯನ್ನಾಗಿ ಮಾಡುವ ಬದಲು ತಟಸ್ಥವಾಗಿ ವರ್ತಿಸಬೇಕು ಎಂದು ರಾವತ್ ಹೇಳಿದರು.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement