ಜೈಲಲ್ಲಿರುವ ದೆಹಲಿ ಸಚಿವ ಜೈನ್‌ಗೆ ಮಸಾಜ್ ಮಾಡಿದ್ದು ಜೈಲಿನಲ್ಲಿರುವ ಅತ್ಯಾಚಾರದ ಆರೋಪಿ: ಬಿಜೆಪಿ ಗಂಭೀರ ಆರೋಪ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮೇಲಿನ ವಾಗ್ದಾಳಿ ಹೆಚ್ಚಿಸಿರುವ ಬಿಜೆಪಿ ವೈರಲ್ ಆಗಿರುವ ವೀಡಿಯೊದಲ್ಲಿ ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ಫಿಸಿಯೋಥೆರಪಿಸ್ಟ್ ಅಲ್ಲ, ಆದರೆ ಅತ್ಯಾಚೃದ ಆರೋಪಿ ಎಂದು ಗಂಭೀರ ಆರೋಪ ಮಾಡಿದೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ವೀಡಿಯೊಗಳಲ್ಲಿ ಮಸಾಜ್ ಮಾಡುವವರು ರಿಂಕು ಎಂಬ ವ್ಯಕ್ತಿಯಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಆರೋಪಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅತ್ಯಾಚಾರ ಆರೋಪಿ ರಿಂಕು ಎಂಬಾತ ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡುತ್ತಿದ್ದ. ಪೋಕ್ಸೊ ಮತ್ತು ಐಪಿಸಿ 376 ರ ಅಡಿಯಲ್ಲಿ ರಿಂಕು ಆರೋಪಿ. ಇದನ್ನು ಏಕೆ ಸಮರ್ಥಿಸಿಕೊಂಡರು ಮತ್ತು ಫಿಸಿಯೋಥೆರಪಿಸ್ಟ್‌ಗಳನ್ನು ಏಕೆ ಅವಮಾನಿಸಿದರು ಎಂಬುದಕ್ಕೆ ಕೇಜ್ರಿವಾಲ್ ಉತ್ತರಿಸಬೇಕು ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ವಿರುದ್ಧ ಟ್ವೀಟ್ ಮಾಡಿದ್ದು, “ಎಎಪಿ ರಾಜಕೀಯವನ್ನು “ಪುನರ್ ವ್ಯಾಖ್ಯಾನಿಸುತ್ತಿದೆ. ಪೋಕ್ಸೋ ಅಡಿ ಪ್ರಕರಣ ದಾಖಲಾದ ಫಿಸಿಯೋಗಳು, ಾಕ್ರಮ ಹಣ ವರ್ಗಾವಣೆ ಮಂತ್ರಿಗಳು, ಮದ್ಯದ ಲಾಬಿ ಆಡಳಿತವನ್ನು ವಶಪಡಿಸಿಕೊಂಡಿದೆ. ಭ್ರಷ್ಟಾಚಾರದ ವಿರುದ್ಧ ಅದು ಖಂಡಿತವಾಗಿಯೂ ಬಹಳ ದೂರವಿದೆ. ಮತ್ತು ಬಹಳಷ್ಟು ಜನರನ್ನು ಮೂರ್ಖರನ್ನಾಗಿಸುತ್ತದೆ ಎಂದು ಹೇಳಿದ್ದಾರೆ.
ತೀವ್ರ ವಿವಾದದ ನಡುವೆ, ಭಾರತೀಯ ಯುವ ಕಾಂಗ್ರೆಸ್ ಮುಖಂಡ ಬಿವಿ ಶ್ರೀನಿವಾಸ್ ಅವರು ಸಹ ಎಎಪಿ ವಿರುದ್ಧ ಟ್ವೀಟ್‌ ಮಾಡಿ ವಾಗ್ದಾಳಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

ಪೊಲೀಸರು ಏನು ಹೇಳುತ್ತಾರೆ
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ರಿಂಕುವಿನ ಸ್ವಂತ ಅಪ್ರಾಪ್ತ ಮಗಳು ಆತನ ಅತ್ಯಾಚಾರದ ಆರೋಪ ಮಾಡಿದ ನಂತರ 2021 ರಲ್ಲಿ ಆತನನ್ನು ಬಂಧಿಸಲಾಯಿತು. ವಿಚಾರಣೆಗಾಗಿ ಕಾಯುತ್ತಿರುವ ಆತನನ್ನು ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಸಚಿವ ಜೈನ್ ಮಸಾಜ್ ಪಡೆಯುತ್ತಿರುವುದನ್ನು ಮತ್ತು ಅವರ ಜೈಲು ಕೋಣೆಯಲ್ಲಿ ಸಂದರ್ಶಕರನ್ನು ಭೇಟಿಯಾಗುತ್ತಿರುವುದನ್ನು ತೋರಿಸುವ ವೀಡಿಯೊಗಳು ಹೊರಬಂದ ನಂತರ ಎಎಪಿಯು ಟೀಕೆಗೆ ಗುರಿಯಾಯಿತು ಮತ್ತು ಕಳೆದ ಶನಿವಾರ ಬಿಜೆಪಿಯು ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಪ್ರಸಾರ ಮಾಡಿತು.

ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಜೈನ್ ಅವರ ವಜಾ ಮಾಡುವಂತೆ ಒತ್ತಾಯಿಸಿವೆ ಮತ್ತು ಜೈಲು ನಿಯಮಗಳ ಉಲ್ಲಂಘನೆಗಾಗಿ ಅವರ ವಿರುದ್ಧ ತನಖೆಗೆ ಒತ್ತಾಯಿಸಿವೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೆಹಲಿ ಸಚಿವರ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಜೈಲಿನಲ್ಲಿ ಜೈನ್‌ಗೆ ವಿಶೇಷ ಟ್ರೀಟ್‌ಮೆಂಟ್‌ ನೀಡಲಾಗುತ್ತಿದೆ ಎಂದು ಜಾಮೀನು ವಿಚಾರಣೆಯ ಸಂದರ್ಭದಲ್ಲಿ ಈ ಹಿಂದೆ ಕೋರ್ಟ್‌ಗೆ ತಿಳಿಸಿತ್ತು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

ಎಎಪಿಯ ಸಮರ್ಥನೆ…
ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಜೈನ್ ಅವರ ಜೈಲಿನ ಸೆಲ್‌ನಿಂದ ಸಿಸಿಟಿವಿ ದೃಶ್ಯಗಳನ್ನು ಬಿಜೆಪಿ ಸೋರಿಕೆ ಮಾಡಿದೆ ಎಂದು ಆರೋಪಿಸಿದ್ದರು ಮತ್ತು ಎಎಪಿ ನಾಯಕನಿಗೆ ಬೆನ್ನುಮೂಳೆಯ ಸಮಸ್ಯೆಯ ಕಾರಣ “ಫಿಸಿಯೋಥೆರಪಿ” ಅಗತ್ಯವಿರುವುದರಿಂದ ವೈದ್ಯರ ಸೂಚನೆಯಂತೆ ಮಾಡಲಾಗಿತ್ತು ಎಂದು ಸಮರ್ಥಿಸಿಕೊಂಡಿದ್ದರು.
ಗಾಯಾಳುವಿನ ಚಿಕಿತ್ಸೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸೋರಿಕೆ ಮಾಡುವ ಮೂಲಕ ಬಿಜೆಪಿ ಮಾತ್ರ ಕ್ರೂರ ಹಾಸ್ಯ ಮಾಡಲು ಸಾಧ್ಯ… ಅವರ (ಸತ್ಯೇಂದ್ರ ಜೈನ್) ಬೆನ್ನುಮೂಳೆಯು ಹಾನಿಗೊಳಗಾಗಿದೆ, ಇದು ದಾಖಲೆಯಲ್ಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಜೈನ್ ಅವರನ್ನು ಸಮರ್ಥಿಸಿಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜೈಲಿನಲ್ಲಿ ಪೂರ್ಣ ಶರೀರದ ಮಸಾಜ್ ಮತ್ತು ವಿಐಪಿ ಟ್ರೀಟ್‌ಮೆಂಟ್‌ ನೀಡುತ್ತಿದ್ದೇವೆ ತಮ್ಮ ಮೇಲೆ ದಾಳಿ ಮಾಡಲಾಗುತ್ತಿದೆ, ಆದರೆ ವಾಸ್ತವದಲ್ಲಿ ಇದು ಕೇವಲ ಫಿಸಿಯೋಥೆರಪಿಯಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ತನ್ನ ಜೈಲಿನ ಸೆಲ್‌ನ ಸಿಸಿಟಿವಿ ದೃಶ್ಯಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಆರೋಪದ ಮೇಲೆ ಇಡಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸತ್ಯೇಂದ್ರ ಜೈನ್ ಸಲ್ಲಿಸಿದ ಮನವಿಯನ್ನು ದೆಹಲಿ ನ್ಯಾಯಾಲಯ ಇಂದು, ಮಂಗಳವಾರ ವಿಚಾರಣೆ ನಡೆಸಲಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement