ಗುಜರಾತ್ ಚುನಾವಣೆ: 12 ಜನ ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ ಬಿಜೆಪಿ

ಅಹಮದಾಬಾದ್‌: ಏಳು ಬಂಡಾಯ ನಾಯಕರ ಮೇಲೆ ಚಾಟಿ ಬೀಸಿದ ಕೆಲವೇ ದಿನಗಳ ನಂತರ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಬಿಜೆಪಿ ಮತ್ತೆ 12 ಮಂದಿಯನ್ನು ಅಮಾನತುಗೊಳಿಸಿದೆ.
ಎಲ್ಲ 12 ಬಂಡಾಯ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿದೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಾರೆ.
ಶಿಸ್ತು ಕ್ರಮ ಕೈಗೊಂಡಿರುವ ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ ಅವರು ಪತ್ರಿಕಾ ಟಿಪ್ಪಣಿಯಲ್ಲಿ 12 ಬಂಡಾಯ ನಾಯಕರನ್ನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣಕ್ಕಾಗಿ ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಪಕ್ಷದಿಂದ ಶಿಕ್ಷೆಗೆ ಗುರಿಯಾದ 12 ಮಂದಿಯಲ್ಲಿ ಪಾದ್ರಾದ ಮಾಜಿ ಶಾಸಕ ದಿನು ಪಟೇಲ್ ಮತ್ತು ಬಯಾದ್‌ನ ಮಾಜಿ ಶಾಸಕ ಧವಲಸಿನ್ಹ ಝಾಲಾ ಕೂಡ ಸೇರಿದ್ದಾರೆ. ಅಲ್ಲದೆ, ಕುಲದೀಪಸಿನ್ಹ ರೌಲ್ (ಸಾವ್ಲಿ), ಖತುಭಾಯಿ ಪಾಗಿ (ಶೆಹ್ರಾ), ಎಸ್‌ಎಂ ಖಂತ್ (ಲುನವಾಡ), ಜೆಪಿ ಪಟೇಲ್ (ಲುನವಾಡ), ರಮೇಶ ಝಲಾ (ಉಮ್ರೆತ್), ಅಮರ್ಷಿ ಝಲಾ (ಖಂಭತ್), ರಾಮಸಿನ್ಹ್ ಠಾಕೋರ್ (ಖೇರಾಲು), ಮಾವ್ಜಿ ದೇಸಾಯಿ (ಧನೇರಾ) ಮತ್ತು ಲೆಬ್ಜಿ ಠಾಕೋರ್ (ದೀಸಾ ಕ್ಷೇತ್ರ).
ಗುಜರಾತ್‌ನ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತ್ತು ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಆಭರಣಗಳ ಅಂಗಡಿಯಿಂದ 10 ಲಕ್ಷ ಮೌಲ್ಯದ ಚಿನ್ನದ ಸರ ಕದ್ದೊಯ್ದ ಚಾಲಾಕಿ ಅಜ್ಜಿ : ಅಜ್ಜಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆ : ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement