ನಂದಿನಿ ಹಾಲು-ಮೊಸರಿನ ಬೆಲೆ ಹೆಚ್ಚಳ: ನಾಳೆಯಿಂದ ಜಾರಿ

ಬೆಂಗಳೂರು: ಕೆಎಂಎಫ್(KMF) ನಂದಿನಿ ಹಾಲಿನ (Nandini Milk) ಬೆಲೆ ಹೆಚ್ಚಳ ಮಾಡಿದೆ. ನಾಳೆಯಿಂದ ಅನ್ವಯವಾಗಲಿದೆ ಎಂದು ಕೆಎಂಎಫ್‌ (KMF) ತಿಳಿಸಿದೆ.
ಪ್ರತಿ ಲೀಟರ್​ ಹಾಲಿನ ಬೆಲೆ 2 ರೂ.ಗಳಷ್ಟು ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದ್ದಾರೆ. ಕೆಎಂಎಫ್ ಸಭೆ ಮುಕ್ತಾಯದ ಬಳಿಕ ಇಂದು ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿಯಲ್ಲಿ, ಹಾಲು, ಮೊಸರಿನ ದರ ಏರಿಕೆಯ ಕುರಿತು ತಿಳಿಸಿದ್ದಾರೆ. ಈ ದರವನ್ನು ನೇರವಾಗಿ ರೈತರಿಗೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೆಎಂಎಫ್​ ಹಾಲಿನ ದರವನ್ನು ಲೀಟರ್‌ಗೆ 3 ರೂ.ಗಳನ್ನು ಹೆಚ್ಚಿಸಿತ್ತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ನಂತರ ಸಭೆ ಸೋಮವಾರ ಸಭೆ ನಡೆಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಉತ್ಪಾದಕರಿಗೆ ನಷ್ಟವಾಗದಂತೆ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ಪರಿಶೀಲಿಸಿ ದರ ನಿಗದಿ ಮಾಡಲು ಸೂಚಿಸಿದ್ದರು. ಅದರಂತೆ ಇಂದು ಬುಧವಾರ ಸಭೆ ನಡೆಸಿದ ನಂತರ ಕೆಎಂಎಫ್​ ಅಂತಿಮವಾಗಿ ನಂದಿನಿ ಹಾಲು ಹಾಗೂ ಮೊಸರಿನ ದರ ಹೆಚ್ಚಿಸಿದೆ.
ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37ರಿಂದ 39 ರೂ.ಗಳಿಗೆ ಏರಿಕೆ
ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರಿಂದ 40 ರೂ.ಗಳಿಗೆ ಹೆಚ್ಚಳ
ಹೋಮೋಜಿನೈಸ್ಡ್ ಹಸುವಿನ ಹಾಲು 42ರಿಂದ 44 ರೂ.ಗಳಿಗೆ ಹೆಚ್ಚಳ,
ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43ರಿಂದ 45 ರೂ.ಗಳಿಗೆ ಹೆಚ್ಚಳ,
ಹೋಮೋಜಿನೈಸ್ಡೇ ಸ್ಟ್ಯಾಂಡರ್ಡ್ ಹಾಲು 44ರಿಂದ 46 ರೂ.ಗಳಿಗೆ ಹೆಚ್ಚಳ
* ನಂದಿನಿ ಸಮೃದ್ಧಿ ಹಾಲು 48ರಿಂದ 50 ರೂ.ಗಳಿಗೆ ಏರಿಕೆ
ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50ರಿಂದ 52 ರೂ.ಗಳಿಗೆ ಏರಿಕೆ
ಮೊಸರು ಒಂದು ಲೀಟರ್ ಗೆ 45ರಿಂದ 47 ರೂ.ಗಳಿಗೆ ಏರಿಕೆ

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement