ಗದಗ: ನವೆಂಬರ್‌ 27ರಂದು ರಕ್ಷಾ ಸೆಕ್ಯುರಿಟಿ ಸರ್ವಿಸಸ್‌ನಿಂದ ಉದ್ಯೋಗಿಗಳಿಗೆ ನೇರ ನೇಮಕಾತಿ ಸಂದರ್ಶನ

posted in: ರಾಜ್ಯ | 0

ಗದಗ: ಜಿಎಂಆರ್‌ ಗ್ರುಪ್‌ನ ರಕ್ಷಾ ಸೆಕ್ಯುರಿಟಿ ಸರ್ವಿಸಸ್‌‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಸೆಕ್ಯುರಿಟಿಗಳನ್ನು ಕಂಪನಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇದರ ವಾಕ್‌ ಇನ್‌ ಸಂದರ್ಶನ ಗದಗದ ಹತಲಗೇರಿ ನಾಕಾದ ಸಮೀಪದ ಕೆಎಸ್‌ಎಸ್‌ ಆರ್ಟ್ಸ್‌ ಮತ್ತು ಕಾಮರ್ಸ್‌ ಕಾಲೇಜಿನಲ್ಲಿ ನವೆಂಬರ್‌ 27ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.
ನೇಮಕಾತಿ ಸಂದರ್ಶನಕ್ಕೆ ಹಾಜರಾಗುವವರು ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಯಾವುದೇ ಪದವಿಧರರಾಗಿರಬೇಕು. ವಯಸ್ಸು 18ರಿಂದ 35 ವರ್ಷ ಆಗಿರಬೇಕು, ಅಭ್ಯರ್ಥಿ ಎತ್ತರ 167 ಸೆಂಮೀ ಇರಬೇಕು, ತೂಕ 50 ಕಿಗ್ರಾಂ ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕು. ಎದೆ ಅಗಲ 80-85 ಸೆಂಮೀ ಇರಬೇಕು. ವೈದ್ಯಕೀಯ ಪ್ರಮಾಣ ಪತ್ರ ಹಾಗೂ ವಿಮೆ ಹೊಂದಿರಬೇಕು. ಕೆಲಸದ ಪ್ರದೇಶ ಅಖಿಲ ಭಾರತ ಮಟ್ಟದಲ್ಲಿ ಎಂದು ತಿಳಿಸಲಾಗಿದ್ದು, ಆದರೆ ಕರ್ನಾಟಕದವರಿಗೆ ಕರ್ನಾಟಕದಲ್ಲಿಯೇ ಉದ್ಯೋಗದ ಸ್ಥಳ ನಿಗದಿ ಮಾಡಲಾಗುತ್ತದೆ ಎಂದೂ ತಿಳಿಸಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕೆಲಸವು ಹೈದರಾಬಾದ್‌, ದೆಹಲಿ, ಬೀದರ ವಿಮಾನ ನಿಲ್ದಾಣಗಳು, ಹೈವೇ ಟೋಲ್‌ಗೇಟ್‌ಗಳು, ಬೆಂಗಳೂರಿನ ಆಸ್ತ್ರಾ ಝೆಂಕಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಬೆಂಗಳೂರಿನ ಕಾರ್ಪೋರೇಟ್‌ ಆಫೀಸ್‌, ಬೆಂಗಳೂರಿನ ಬಾಶ್‌ ಕಂಪನಿ, ಕೃಷ್ಣಗಿರಿ ಎಸ್‌ಇಝಡ್‌, ವಿದ್ಯುತ್‌ ಘಟಕಗಳು ಹಾಗೂ ಕಾರ್ಗೋ ಸೇವೆಗಳು ಕೆಲಸದ ಸ್ಥಳದಲ್ಲಿ ಸೇರಿವೆ ಎಂದು ತಿಳಿಸಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಮಹಾರಾಷ್ಟ್ರದಲ್ಲಿ ಮತ್ತೆ ಧ್ವನಿಸಿದ ಕರ್ನಾಟಕ ಸೇರ್ಪಡೆ ಕೂಗು

ಉಚಿತ ಊಟ ಹಾಗೂ ವಸತಿ ನೀಡಲಾಗುತ್ತದೆ. ಪ್ರಯಾಣದ ವೆಚ್ಚ, ಉಚಿತ ಸಮವಸ್ತ್ರ, ಬೂಟು ಇತ್ಯಾದಿ ನೀಡಲಾಗುತ್ತದೆ. ವೈದ್ಯಕೀಯ ವೆಚ್ಚ ಹಾಗೂ ವಿಮೆ ಸಹ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ ಬೇಕಾದವರು ಮೊಬೈಲ್‌ ಸಂಖ್ಯೆ-6363101143, 7975111674 ಸಂಪರ್ಕಿಸಬಹುದಾಗಿದೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement