ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

225 ಮೀಟರ್ ಆಳಕ್ಕೆ ಇಳಿದು ಭೂಗತ ಗಣಿ ವೀಕ್ಷಣೆ ಮಾಡಿದ ಮೊದಲ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಚಿವ ಪ್ರಹ್ಲಾದ ಜೋಶಿ

ನವದೆಹಲಿ: ಕೇಂದ್ರ ಸರ್ಕಾರ ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಪಶ್ಚಿಮ ಬಂಗಾಳದ ಝಂಜ್ರಾ ಭೂತಳ (ಭೂಗತ) ಗಣಿ ಪ್ರದೇಶಕ್ಕೆ ಗುರುವಾರ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಭೇಟಿ ನೀಡಿದರು.
ಈ ಗಣಿಯು ಭೂಮಿಯ ಮೇಲ್ಮೈನಿಂದ 225 ಮೀಟರ್ ಆಳದಲ್ಲಿದ್ದು ವಾರ್ಷಿಕ 35 ಲಕ್ಷ ಟನ್ ಸಾಮರ್ಥ್ಯದಲ್ಲಿ ಭಾರತದ ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯಾಂತ್ರೀಕೃತ ಭೂಗತ ಗಣಿಯಾಗಿದೆ.
ಇದೇ ಮೊದಲ ಬಾರಿಗೆ ಅವರು 225 ಮೀಟರ್ ಆಳದ ಭೂಗತ ಗಣಿಯೊಳಗೆ ಪ್ರವೇಶಿಸಿ ಗಣಿಗಾರಿಕೆ ವೀಕ್ಷಿಸಿದರು. ಸಚಿವ ಪ್ರಲ್ಹಾದ ಜೋಶಿ ಅವರು ರಕ್ಷಣಾ ಕವಚ ಧರಿಸಿ ಗಣಿ ಇಲಾಖೆ ಅಧಿಕಾರಿಗಳೊಂದಿಗೆ 225 ಮೀಟರ್ ಆಳದ ಭೂಗತ ಗಣಿ ವೀಕ್ಷಣೆ ಮಾಡಿದರು. ಇದುವರೆಗೂ ಯಾವುದೇ ಗಣಿ ಸಚಿವರು ಇಂತಹ ಸಾಹಸಕ್ಕೆ ಒಡ್ಡಿಕೊಂಡಿರಲಿಲ್ಲ. ಪ್ರಲ್ಹಾದ ಜೋಶಿ ಅಷ್ಟು ಆಳಕ್ಕೆ ಹೋಗಿ ಗಣಿ ಕಾರ್ಯ ವೀಕ್ಷಣೆ ಮಾಡಿದ್ದಾರೆ.

ಈ ಸಮಯದಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಮಾತನಾಡಿ, ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಳ ಮಾಡಲು, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸೂಚಿಸಿದರು. ಈ ಸಮಯದಲ್ಲಿ ಕಡಿಮೆ ಆಳದ ಎರಡು ನಿರಂತರ ಗಣಿಗಾರಿಕೆಯನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದರು.
5 ಮೆಟ್ರಿಕ್ ಟನ್ ಸಾಮರ್ಥ್ಯದ ಕಲ್ಲಿದ್ದಲು ಹೊರತೆಗೆಯುವಿಕೆಯನ್ನು ಹೆಚ್ಚಿಸಲು ರೈಲ್ವೆ ಕಾರಿಡಾರ್ ನಿರ್ಮಾಣ ಹಂತದಲ್ಲಿದೆ.
ಝಾಜ್ರಾ ಕಲ್ಲಿದ್ದಲು ಗಣಿಯು ಭೂಗತ ಗಣಿಯಾಗಿದ್ದು, ಕೋಲ್ ಇಂಡಿಯಾದ ಅಂಗಸಂಸ್ಥೆಯಾದ ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುತ್ತದೆ, ಇದು ವಾರ್ಷಿಕ 35 ಲಕ್ಷ ಟನ್‌ಗಳನ್ನು ಕಲ್ಲಿದ್ದಲು ಉತ್ಪಾದಿಸುತ್ತದೆ,.
ಝಾಜ್ರಾ ಕಂಪನಿಯ ಅತಿದೊಡ್ಡ ಭೂಗತ ಗಣಿಯಾಗಿದೆ. ಒಟ್ಟು 200 ಮಿಲಿಯನ್ ಟನ್ ಕಲ್ಲಿದ್ದಲು ಮೀಸಲು ಹೊಂದಿದೆ. ಈ ಗಣಿ ಅಭಿವೃದ್ಧಿಯನ್ನು 1980 ರ ದಶಕದಲ್ಲಿ ಪ್ರಾರಂಭಿಸಲಾಯಿತು. ಭೂಗತ ಗಣಿಗಾರಿಕೆಗೆ ಹೋಲಿಸಿದರೆ ಇದು ಪರಿಸರ ಸ್ನೇಹಿಯಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಂಧಿತ ಪ್ರಮುಖ ಆರೋಪಿಗಳು 10 ದಿನ ಎನ್‌ಐಎ ವಶಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement