ಆಗ್ರಾ : ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡು ಸಂಗ್ರಹಿಸಿ ಇರಿಸಿದ್ದ 500 ಕೆಜಿಗೂ ಹೆಚ್ಚು ಮಾದಕ ವಸ್ತುಗಳನ್ನು ಇಲಿಗಳು ತಿಂದು ಹಾಕಿವೆ ಎಂದು ಉತ್ತರ ಪ್ರದೇಶದ ಮಥುರಾ ಪೊಲೀಸರು ಮಾದಕವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ವಿಶೇಷ ಕೋರ್ಟ್‌ಗೆ ತಿಳಿಸಿದ್ದಾರೆ.
ಶೇರಗಡ ಮತ್ತು ಹೈವೇ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಡ್ರಗ್ಸ್‌ಗಳನ್ನು ಇಲಿಗಳು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ 586 ಕಿಲೋಗ್ರಾಂಗಳಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅದನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರಿಗೆ ತಿಳಿಸಿದಾಗ, ಪೊಲೀಸರು ಈ ಉತ್ತರ ನೀಡಿದ್ದಾರೆ.
ಎರಡು ಪ್ರಕರಣಗಳಲ್ಲಿ 386 ಕೆಜಿ ಮತ್ತು 195 ಕೆಜಿ ಗಾಂಜಾವನ್ನು ಶೇರ್ಗಢ್ ಮತ್ತು ಹೈವೇ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಇಲಿಗಳಿಂದ ಸುರಕ್ಷಿತವಾಗಿಡಲು ಸ್ಥಳಾವಕಾಶವಿಲ್ಲ ಎಂದು ಪೊಲೀಸ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಇಲಿಗಳು ತಿನ್ನದೇ ಉಳಿದಿದ್ದ ಭಾಗವನ್ನು ಪೊಲೀಸ್ ಅಧಿಕಾರಿಗಳು ನಾಶಪಡಿಸಿರುವುದಾಗಿ ತಿಳಿಸಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
195 ಕೆಜಿ ಗಾಂಜಾವನ್ನು ಇಲಿಗಳು ಧ್ವಂಸ ಮಾಡಿದ್ದಕ್ಕೆ ಸಂಬಂಧಿಸಿದ ಹೈವೇ ಪೊಲೀಸ್ ಠಾಣೆಯ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಲಯವು, ಇಲಿಗಳನ್ನು ನಿರ್ಮೂಲನೆ ಮಾಡಲು ಮತ್ತು ಇಲಿಗಳು ನಿಜವಾಗಿಯೂ 581 ಕೆಜಿ ಗಾಂಜಾವನ್ನು ತಿಂದಿವೆ ಎಂಬುದಕ್ಕೆ ಪುರಾವೆಯನ್ನು ಒದಗಿಸುವಂತೆ ಎಸ್‌ಎಸ್‌ಪಿ ಮಥುರಾಗೆ ಆದೇಶಿಸಿದೆ. ನವೆಂಬರ್ 26 ರೊಳಗೆ ಈ ಬಗ್ಗೆ ಪುರಾವೆ ಸಲ್ಲಿಸಲು ಪೊಲೀಸ್ ತಂಡವನ್ನು ಕೇಳಲಾಗಿದೆ. ಪೊಲೀಸ್ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಗಾಂಜಾವನ್ನು ಹೇಗೆ ಹರಾಜು ಅಥವಾ ವಿಲೇವಾರಿ ಮಾಡಬಹುದು ಎಂಬುದರ ಕುರಿತು ನ್ಯಾಯಾಲಯವು ನಿರ್ದೇಶನವನ್ನು ನೀಡಿದೆ.
ಡ್ರಗ್ಸ್ ಕಣ್ಮರೆಯಾಗುವುದಕ್ಕೆ ಇಲಿಗಳನ್ನು ದೂಷಿಸುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ, ಬಿಹಾರದ ಪೊಲೀಸರು ವಶಪಡಿಸಿಕೊಂಡ 1,000 ಲೀಟರ್ ಮದ್ಯವನ್ನು ಇಲಿಗಳು ಸೇವಿಸಿವೆ ಎಂದು ಹೇಳಿದ್ದರು. ಅಸ್ಸಾಂನಲ್ಲಿ 12 ಲಕ್ಷಕ್ಕೂ ಅಧಿಕ ಮೌಲ್ಯದ ನೋಟುಗಳನ್ನು ಇಲಿಗಳು ನಾಶಪಡಿಸಿದ ಆರೋಪ ಕೇಳಿಬಂದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ