ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಹಿಂದೂ ಸಂಪ್ರದಾಯದಂತೆ ಹಂಪಿಯ ಗೈಡ್‌ ಜೊತೆ ಸಪ್ತಪದಿ ತುಳಿದ ಬೆಲ್ಜಿಯಂ ಯುವತಿ

ಹೊಸಪೇಟೆ (ವಿಜಯನಗರ) : ಹಂಪಿಯ ಯುವಕನ ಜೊತೆ ಬೆಲ್ಜಿಯಂ ಯುವತಿ  ಹಿಂದೂ ಸಂಪ್ರಾದಾಯದಂತೆ ಹಂಪಿ ವಿರೂಪಾಕ್ಷನ ಸನ್ನಿಧಿಯಲ್ಲಿ ಸಪ್ತಪದಿ ತುಳಿದಿದ್ದಾಳೆ.
ಹಂಪಿಯ ನಿವಾಸಿ ಅನಂತರಾಜು ಹಾಗೂ ಬೆಲ್ಜಿಯಂ ದೇಶದ ಕೆಮಿಲ್ ಇಬ್ಬರು ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಬುಧವಾರ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಈ ಜೋಡಿ, ಇಂದು, ಶುಕ್ರವಾರಬೆಳಿಗ್ಗೆ 8:30 ರಿಂದ 9:30ರ ಕುಂಭ ಶುಭ ಮುಹೂರ್ತದಲ್ಲಿ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.
ಹಂಪಿಯ ಜನತಾ ಪ್ಲಾಟ್‌ ನಿವಾಸಿ ಅಂಜೀನಪ್ಪ ಅವರ ಪುತ್ರ ಅನಂತರಾಜು ಅವರು ಹಂಪಿ ಗೈಡ್‌ ಆಗಿ ಕೆಲಸ ಮಾಡುತ್ತಾರೆ. ಜೊತೆಗೆ ಆಟೋ ಸಹ ನಡೆಸುತ್ತಾರೆ.

ವಿಜಯನಗರದ ಗತವೈಭವದ ಬಗ್ಗೆ ಪ್ರವಾಸಿಗರಿಗೆ ಹೇಳುತ್ತಾರೆ. ಕೆಮಿಲ್ ಅವರು ಬೆಲ್ಜಿಯಂನಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಕಳೆದ ನಾಲ್ಕೈದು ವರ್ಷದ ಹಿಂದೆ ಜೀಪ್ ಫಿಲಿಪ್ಪೆ ಕುಟುಂಬ ಸಮೇತ ಹಂಪಿ ಗತವೈಭವ ಅರಿಯಲು ಬಂದಿದ್ದಾಗ ಪರಿಚಯವಾಗಿದೆ.
ಅನಂತರಾಜು ಉತ್ತಮ ಗೈಡ್‌ ಆಗಿ ಅವರ ಮನಗೆದ್ದಿದ್ದಾರೆ. ದಿನ ಕಳೆದಂತೆ ಕೆಮಿಲ್ ಅವರ ಪರಿವಾರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಸಂಪರ್ಕದಲ್ಲಿದ್ದ ಗೈಡ್‌ ಅನಂತರಾಜು ಹಾಗೂ ಕೆಮಿಲ್‍ ನಡುವೆ ಪ್ರೇಮಾಂಕುರವಾಗಿದೆ. ಮೂರು ವರ್ಷದ ಹಿಂದೆಯೇ ಮದುವೆಯಾಗಬೇಕಿದ್ದ ಈ ಜೋಡಿಗೆ ಕೊರೊನಾ ಅಡ್ಡಿಯಾಗಿತ್ತು. ಈಗ ಕೆಮಿಲ್‌ ಕುಟುಂಬದವರು ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬದ 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮದುಮಕ್ಕಳನ್ನು ಆಶೀರ್ವದಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​ 18ರ ವರೆಗೆ ಮಳೆ ಸಾಧ್ಯತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement