ಕಿತವಾಡ್ ಫಾಲ್ಸ್: ಸೆಲ್ಫಿ ತೆಗೆಯುವಾಗ ಜಾರಿ ಬಿದ್ದು ಬೆಳಗಾವಿ ನಾಲ್ವರು ಯುವತಿಯರು ನೀರುಪಾಲು

ಬೆಳಗಾವಿ: ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಚಂದಗಡ ತಾಲೂಕಿನ ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು ಬೆಳಗಾವಿ ನಗರದ ನಾಲ್ವರು ಯುವತಿಯರು ಮೃತಪಟ್ಟಿದ್ದು, ಓರ್ವ ಯುವತಿ ಗಂಭೀರ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದ ವರದಿಯಾಗಿದೆ.
ಮೃತರನ್ನು ಬೆಳಗಾವಿ ಉಜ್ವಲ ನಗರದ ಅಸೀಯಾ ಮುಜಾವರ (17 ), ತಸ್ಮೀಯಾ (20 ), ಅನಗೋಳದ ಕುದಶೀಯಾ ಹಾಸಂ‌ ಪಟೇಲ (20 ) ಹಾಗೂ ಝಟ್ ಪಟ್ ಕಾಲೋನಿಯ ರುಕ್ತಶೀರ್ ಬಿಸ್ತಿ (20 ) ಎಂದು ಗುರುತಿಸಲಾಗಿದೆ. ಓರ್ವ ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಬೆಳಗಾವಿಯಿಂದ ಪ್ರವಾಸಕ್ಕೆಂದು 50 ಜನ ವಿದ್ಯಾರ್ಥಿಗಳ ತಂಡ ಕಿತವಾಡ ಫಾಲ್ಸ್‌ಗೆ ತೆರಳಿತ್ತು. ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಐವರು ವಿದ್ಯಾರ್ಥಿನಿಯರು ಬಿದ್ದಿದ್ದಾರೆ. ಈ ಪೈಕಿ ನಾಲ್ವರು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಚಂದಗಡ ತಾಲೂಕಿನ ಕಿತವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement