ಮದ್ಯದ ವ್ಯಾಪಾರ ಬಿಟ್ಟುಬಿಡಿ, 1 ಲಕ್ಷ ರೂ.ಬಹುಮಾನ ಪಡೆಯಿರಿ: ಮದ್ಯ ನಿಷೇಧ ಬಲಪಡಿಸಲು ಹೊಸ ಯೋಜನೆ ಜಾರಿಗೆ ಮುಂದಾದ ಬಿಹಾರ ಸರ್ಕಾರ

ಪಾಟ್ನಾ: ಬಿಹಾರದಲ್ಲಿ ಮದ್ಯಪಾನ ನಿಷೇಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ರಾಜ್ಯದಲ್ಲಿ ಅಕ್ರಮ ಮತ್ತು ನಕಲಿ ಮದ್ಯ ವ್ಯಾಪಾರದ ಹಾವಳಿ ತಡೆಗೆ ಹೊಸ ವಿಧಾನವನ್ನು ಹೊರತಂದಿದ್ದಾರೆ. ಜೀವನೋಪಾಯಕ್ಕಾಗಿ ಮದ್ಯದ ವ್ಯವಹಾರವನ್ನು ತ್ಯಜಿಸುವವರಿಗೆ ತಮ್ಮ ಸರ್ಕಾರ 1 ಲಕ್ಷ ರೂಪಾಯಿ ನೀಡಲಿದೆ ಎಂದುಅವರು ಪ್ರಕಟಿಸಿದ್ದಾರೆ.
ಬಿಹಾರದಲ್ಲಿ ಮದ್ಯ ನಿಷೇಧದ ಹಿನ್ನೆಲೆಯಲ್ಲಿ ಈ ಯೋಜನೆ ಬಂದಿದೆ. ಮದ್ಯ ನಿಷೇಧ ಕಾನೂನನ್ನು 2016ರಲ್ಲಿ ಜಾರಿಗೊಳಿಸಲಾಯಿತು ಮತ್ತು ಕಾನೂನು ಮಂಡಿಸಿದ ನಂತರ ಸುಮಾರು ನಾಲ್ಕು ಲಕ್ಷ ಜನರನ್ನು ಆರೋಪಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಡ್ರಗ್ ಡಿ-ಅಡಿಕ್ಷನ್ ಡೇ” ಸಂದರ್ಭದಲ್ಲಿ, ನಿತೀಶ್ ಕುಮಾರ್ ಅವರು ‘ಆರೋಗ್ಯಕರ ಮತ್ತು ಸಂತೋಷದ’ ಬಿಹಾರದ ಕಡೆಗೆ ತಮ್ಮ ಸಂಕಲ್ಪದ ಬಗ್ಗೆ ಹೇಳಿದ್ದಾರೆ. ಮಾದಕ ವ್ಯಸನ ಮುಕ್ತ ದಿನಾಚರಣೆಯಂದು ಎಲ್ಲಾ ರೀತಿಯ ಮಾದಕ ವಸ್ತುಗಳಿಂದ ಮುಕ್ತಿ ಹೊಂದುವ ಪ್ರತಿಜ್ಞೆ ಮಾಡೋಣ ಮತ್ತು ಸಮೃದ್ಧ, ಆರೋಗ್ಯ ಮತ್ತು ಸಂತೋಷದ ಬಿಹಾರಕ್ಕಾಗಿ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರವನ್ನು ವಹಿಸೋಣ ಎಂದು ಕರೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ನಾವು ಬಿಹಾರದಲ್ಲಿ ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದೇವೆ. ಸುಸ್ಥಿರ ಜೀವನೋಪಾಯ ಯೋಜನೆಯಡಿ, ಮದ್ಯದ ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ಮತ್ತೊಂದು ಉದ್ಯೋಗವನ್ನು ಪ್ರಾರಂಭಿಸಲು ನೆರವು ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ” ಎಂದು ಅವರು ಹೇಳಿದರು.
ಅಕ್ರಮ ಮದ್ಯದ ದಂಧೆ ಕೈಬಿಡುವವರಿಗೆ 1 ಲಕ್ಷ ರೂ.ಗಳನ್ನು ನೀಡುವ ಯೋಜನೆ ಕುರಿತು ಮಾತನಾಡಿದ ನಿತೀಶಕುಮಾರ್, ಇದು ಕೇವಲ ಮದ್ಯ ಮಾರಾಟಗಾರರಿಗೆ ಮಾತ್ರವಲ್ಲದೆ ಕಳ್ಳಬಟ್ಟಿ ವ್ಯಾಪಾರ ಮಾಡುವವರಿಗೂ ಅನ್ವಯಿಸುತ್ತದೆ ಎಂದು ಹೇಳಿದರು.
ಬಿಹಾರದ ಮುಖ್ಯಮಂತ್ರಿಗಳು ಗ್ರಾಹಕರ ಬದಲಿಗೆ ಮದ್ಯದ ವ್ಯಾಪಾರಿಗಳನ್ನು ಬಂಧಿಸುವಂತೆ ಇಲಾಖೆಗೆ ಸೂಚಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement