2023ರ ಬಜೆಟ್‌ನಲ್ಲಿ 400 ಹೊಸ ವಂದೇ ಭಾರತ ರೈಲುಗಳ ಘೋಷಣೆ ಸಾಧ್ಯತೆ : ವರದಿ

ನವದೆಹಲಿ: ಸಚಿವಾಲಯದ ಮೂಲಗಳ ಪ್ರಕಾರ, ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸರಿಸುಮಾರು 300 ರಿಂದ 400 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸಬಹುದು.
2024ರ ಮೊದಲ ತ್ರೈಮಾಸಿಕದಲ್ಲಿ ಸ್ಲೀಪರ್ ಕೋಚ್‌ಗಳೊಂದಿಗೆ ಮೊದಲ ವಂದೇ ಭಾರತ್ ರೈಲನ್ನು ಹೊರತರಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಮಾಧ್ಯಮ ಸಮಾರಂಭದಲ್ಲಿ ಮಾತನಾಡಿದ ರೈಲ್ವೆ ಸಚಿವರು 475 ವಂದೇ ಭಾರತ ರೈಲುಗಳ ಉತ್ಪಾದನೆಯ ಯೋಜನೆ ಬಗ್ಗೆ ಹೇಳಿದ್ದಾರೆ ಹಾಗೂ ಅದು ಮುಂದಿನ ಮೂರು ವರ್ಷಗಳಲ್ಲಿ ಆಗಬಹುದು ಎಂದು ತಿಳಿಸಿದ್ದಾರೆ.

475 ವಂದೇ ಭಾರತ ರೈಲುಗಳನ್ನು ಹೊಂದುವ ಗುರಿಯು ಈಗ ದಾರಿಯಲ್ಲಿದೆ. ಕಳೆದ ಬಜೆಟ್‌ನಲ್ಲಿ 400 ರೈಲುಗಳನ್ನು ಮಂಜೂರು ಮಾಡಲಾಗಿತ್ತು ಮತ್ತು ಅದಕ್ಕೂ ಮೊದಲು 75 ರೈಲುಗಳನ್ನು ಮಂಜೂರು ಮಾಡಲಾಗಿತ್ತು. ಮುಂಬರುವ ಮೂರು ವರ್ಷಗಳಲ್ಲಿ ನಾವು ಸಂಪೂರ್ಣ ಗುರಿಯನ್ನು ಸಾಧಿಸುತ್ತೇವೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು. .
ದೆಹಲಿ-ಮುಂಬೈ, ದೆಹಲಿ-ಹೌರಾ ಮತ್ತು ಇತರ ಪ್ರಮುಖ ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ರಾಜಧಾನಿ ಮತ್ತು ಡುರೊಂಟೊ ರೈಲುಗಳನ್ನು ಈ ರೈಲುಗಳು ಬದಲಾಯಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಏತನ್ಮಧ್ಯೆ, ಭಾರತೀಯ ರೈಲ್ವೇಯು 2025-26 ರ ವೇಳೆಗೆ ಯುರೋಪ್, ದಕ್ಷಿಣ ಅಮೆರಿಕಾ ಮತ್ತು ಪೂರ್ವ ಏಷ್ಯಾದ ಮಾರುಕಟ್ಟೆಗಳಿಗೆ ವಂದೇ ಭಾರತ ರೈಲುಗಳ ಪ್ರಮುಖ ರಫ್ತುದಾರನಾಗಲು ಯೋಜಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement