ಬಿಜೆಪಿ ಸಂಸದರ ಎಚ್ಚರಿಕೆ ನಂತರ ಮೈಸೂರು-ಊಟಿ ರಸ್ತೆಯ ಬಸ್ ಶೆಲ್ಟರ್‌ನ ಎರಡು ಗುಮ್ಮಟ ತೆರವು

posted in: ರಾಜ್ಯ | 0

ಮೈಸೂರು: ವಿವಾದಿತ ಗುಂಬಜ್ ಬಸ್ ಶೆಲ್ಟರ್‌ ವಿಚಾರ ಸಂಬಂಧ ಕೆಲ ದಿನಗಳ ಹಿಂದೆ ವಿವಾದ ಭುಗಿಲೆದ್ದ ನಂತರ ಈಗ ಶೆಲ್ಟರ್ ನಲ್ಲಿದ್ದ ಮೂರರಲ್ಲಿ ಎರಡು ಚಿಕ್ಕ ಗೋಪುರಗಳನ್ನು ತೆರವುಗೊಳಿಸಲಾಗಿದೆ.
ಅರಮನೆ ಮಾದರಿಯಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣ ಮಾಡುವುದು ಉದ್ದೇಶವಾಗಿತ್ತು. ಇದು ವಿವಾದದ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಗೋಪುರ ತೆರವುಗೊಳಿಸಿರುವುದಾಗಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ ಹೇಳಿದ್ದಾರೆ.
ಮೈಸೂರಿನ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು, ಭಾರೀ ವಿವಾದ ಸೃಷ್ಟಿಸಿತ್ತು. ಆ ಬಳಿಕ ಬಸ್ ನಿಲ್ದಾಣಕ್ಕೆ ರಾತ್ರೋ, ರಾತ್ರಿ ಜೆಎಸ್‍ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿತ್ತು. ಫಲಕದ ಒಂದು ಬದಿಯಲ್ಲಿ ಸುತ್ತೂರು ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿತ್ತು. ಮತ್ತೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋವನ್ನು ಹಾಕಲಾಗಿತ್ತು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ನಂಜನಗೂಡು ರಸ್ತೆಯ ಜೆಎಸ್‌ಎಸ್‌ ಕಾಲೇಜು ಬಸ್‌ ನಿಲ್ದಾಣದಲ್ಲಿರುವ ಮಸೀದಿಯಂತಿರುವ ಬಸ್‌ ನಿಲ್ದಾಣವನ್ನು ಕೆಡವಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮೈಸೂರು ನಗರ ಪಾಲಿಕೆ ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್‌ಗೆ (ಕೆಆರ್‌ಐಡಿಎಲ್) ನೋಟಿಸ್ ನೀಡಿದ ನಂತರ ಬಸ್ ಶೆಲ್ಟರ್‌ನಲ್ಲಿದ್ದ ಎರಡು ಸಣ್ಣ ಗುಮ್ಮಟಗಳನ್ನು ತೆಗೆಯಲಾಗಿದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಜೆಸಿಬಿ ಮೂಲಕ ಕಟ್ಟಡವನ್ನು ಬುಲ್ಡೋಜ್ ಮಾಡುವುದಾಗಿ ಬೆದರಿಕೆ ಹಾಕಿದ ನಂತರ ಎನ್‌ಎಚ್‌ಎಐನಿಂದ ಸೂಚನೆ ಬಂದಿತ್ತು.
ನವೆಂಬರ್ 13 ರಂದು ಮೈಸೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಪ್ರತಾಪ ಸಿಂಹ, “ನಾನು ಸಾಮಾಜಿಕ ಮಾಧ್ಯಮದಲ್ಲಿ ಬಸ್ ನಿಲ್ದಾಣದ ಮೇಲೆ ಗುಮ್ಮಟಗಳಿರುವ ಚಿತ್ರಗಳನ್ನು ನೋಡಿದ್ದೇನೆ, ಮಧ್ಯದಲ್ಲಿ ದೊಡ್ಡ ಗುಂಬಜ್ (ಗುಮ್ಮಟ) ಇತ್ತು. ಎರಡು ಚಿಕ್ಕ ಗುಂಬಜ್‌ಗಳು ಇದ್ದವು. ಅದನ್ನು 3-4 ದಿನಗಳಲ್ಲಿ ತೆಗೆಯುವಂತೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್‌ನ ಇಂಜಿನಿಯರ್‌ಗಳಿಗೆ ಕೇಳಿದ್ದೇನೆ, ಇಲ್ಲದಿದ್ದರೆ ನಾನು ಅದನ್ನು ಜೆಸಿಬಿ ಮೂಲಕ ಬುಲ್ಡೋಜ್ ಮಾಡುವುದಾಗಿ ಹೇಳಿದ್ದೇನೆ ಎಂದು ಹೇಳಿದ್ದರು.

ಇಂದಿನ ಪ್ರಮುಖ ಸುದ್ದಿ :-   2022ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ 2.75 ಕೋಟಿ ಮಂದಿ ಪ್ರಯಾಣ

ಬಸ್ ನಿಲ್ದಾಣವನ್ನು ನಿರ್ಮಿಸಿದ ಬಿಜೆಪಿ ಶಾಸಕ ರಾಮದಾಸ್ ಅವರು ಮೊದಲು ತಮ್ಮ ಪಕ್ಷದ ಸಹೋದ್ಯೋಗಿಯ ಹೇಳಿಕೆಗಳನ್ನು ನಿರಾಕರಿಸಿದರು, ಬಸ್ ಶೆಲ್ಟರ್ ವಿನ್ಯಾಸವು ಮೈಸೂರು ಅರಮನೆಯಿಂದ ಪ್ರೇರಿತವಾಗಿದೆ ಎಂದು ಹೇಳಿದ್ದರು.
ಬಳಿಕ ಸ್ಥಳೀಯರಿಗೆ ಬರೆದ ಪತ್ರದಲ್ಲಿ ಕ್ಷಮೆ ಯಾಚಿಸಿರುವ ಬಿಜೆಪಿ ಶಾಸಕ ರಾಮದಾಸ್, ‘ಮೈಸೂರಿನ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಬಸ್ ನಿಲ್ದಾಣವನ್ನು ವಿನ್ಯಾಸಗೊಳಿಸಿದ್ದೇನೆ. ಇದು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಅದಕ್ಕಾಗಿಯೇ ನಾನು ಎರಡು ಗುಮ್ಮಟಗಳನ್ನು ತೆಗೆಯುತ್ತಿದ್ದೇನೆ. ಒಂದು ವೇಳೆ ಯಾರ ಭಾವನೆಗಳಿಗೂ ನೋವಾಗಿದ್ದರೆ ಕ್ಷಮಿಸಿ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.  ಬಸ್ ನಿಲ್ದಾಣ ವಿವಾದದ ಕೇಂದ್ರವಾಗದಂತೆ ನೋಡಿಕೊಳ್ಳಲು ಗುಮ್ಮಟಗಳನ್ನು ತೆಗೆಯಲಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದ್ದಾರೆ.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಟ್ವಿಟರ್‌ನಲ್ಲಿ ಗುಮ್ಮಟಗಳನ್ನು ತೆಗೆದಿದ್ದಕ್ಕಾಗಿ ಶಾಸಕರಿಗೆ ಧನ್ಯವಾದ ಹೇಳಿದ್ದಾರೆ. ಮಧ್ಯದಲ್ಲಿ ದೊಡ್ಡ ಗುಮ್ಮಟ, ಅಕ್ಕ ಪಕ್ಕದಲ್ಲಿ ಎರಡು ಚಿಕ್ಕ ಗುಮ್ಮಟಗಳಿದ್ದರೆ ಅದು ಮಸೀದಿ, ಸಮಯಾವಕಾಶ ಕೇಳಿ ಮಾತು ಉಳಿಸಿದ ಜಿಲ್ಲಾಧಿಕಾರಿಗೆ ಹಾಗೂ ವಾಸ್ತವ ಅರಿತು ಸಾರ್ವಜನಿಕ ಅಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಅವರಿಗೆ ಕೃತಜ್ಞತೆಗಳು ಎಂದು ಟ್ವೀಟ್‌ ಮಾಡಿದ್ದಾರೆ. .”

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಚೆನ್ನೈ ಬಂದರಿನಲ್ಲಿ ದೇಶಕ್ಕೆ ಅಕ್ರಮವಾಗಿ ತರುತ್ತಿದ್ದ 114 ಮೆಟ್ರಿಕ್ ಟನ್ ಅಡಿಕೆ ವಶಪಡಿಸಿಕೊಂಡ ಡಿಆರ್‌ಐ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement