ಗೆಹ್ಲೋಟ್-ಪೈಲಟ್ ಜಗಳ: ‘ಕಠಿಣ ನಿರ್ಧಾರ’ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ-ಕಾಂಗ್ರೆಸ್

ಇಂದೋರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಅಧಿಕಾರದ ಜಗಳದ ನಡುವೆ ಅಗತ್ಯವಿದ್ದರೆ, ಆ ರಾಜ್ಯದಲ್ಲಿ ಸಂಘಟನೆ ಬಲಪಡಿಸಲು ಪಕ್ಷವು “ಕಠಿಣ ನಿರ್ಧಾರಗಳನ್ನು” ತೆಗೆದುಕೊಳ್ಳುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಭಾನುವಾರ ಹೇಳಿದ್ದಾರೆ.
ಕಾಂಗ್ರೆಸ್‌ಗೆ, ರಾಜಸ್ಥಾನದಲ್ಲಿ ಅದರ ಸಂಘಟನೆಯು ಅತ್ಯಂತ ಮುಖ್ಯವಾಗಿದೆ ಎಂದು ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ ಇಂದೋರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪೈಲಟ್ ಒಬ್ಬ ‘ಗದ್ದರ್’ (ದೇಶದ್ರೋಹಿ) ಮತ್ತು ಆತನನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಗೆಹ್ಲೋಟ್ ಗುರುವಾರ NDTV ಜೊತೆ ಮಾತನಾಡುವಾಗ ವಾಗ್ದಾಳಿ ನಡೆಸಿದ ನಂತರ ಅಂತಹ “ಮಣ್ಣು-ಹೊಡೆಯುವಿಕೆ” ಸಹಾಯ ಮಾಡುವುದಿಲ್ಲ ಎಂದು ಸಚಿನ್‌ ಪೈಲಟ್‌ ಸಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
2020ರಲ್ಲಿ ಪೈಲಟ್ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದರು ಮತ್ತು ಅವರು ರಾಜ್ಯ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದರು ಎಂದು ಗೆಹ್ಲೋಟ್ ಹೇಳಿದರು. ಪೈಲಟ್‌ ಅವರು ಸಹ ಗೆಹ್ಲೋಟ್‌ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಮೇಲೆ ದಾಳಿ ಮಾಡಲು ಮತ್ತು ಸಂಪೂರ್ಣವಾಗಿ “ಸುಳ್ಳು ಮತ್ತು ಆಧಾರರಹಿತ” ಆರೋಪಗಳನ್ನು ಮಾಡಲು ಅವರು ಬಳಸಿದ ಭಾಷೆ ಅವರ ಸ್ಥಾನಮಾನಕ್ಕೆ ಯೋಗ್ಯವಾದದ್ದಲ್ಲ ಎಂದು ಹೇಳಿದ್ದಾರೆ.

ಗೆಹ್ಲೋಟ್ ಮತ್ತು ಪೈಲಟ್ ನಡುವಿನ ಜಗಳದ ಬಗ್ಗೆ ಕೇಳಲಾದ ಪ್ರಶ್ನೆಗೆ ಭಾನುವಾರ ಜೈರಾಮ ರಮೇಶ, “ಸಂಘಟನೆ ನಮಗೆ ಅತ್ಯಂತ ಮುಖ್ಯವಾಗಿದೆ, ರಾಜಸ್ಥಾನದ ವಿಷಯದ ಬಗ್ಗೆ, ನಮ್ಮ ಸಂಘಟನೆಯನ್ನು ಬಲಪಡಿಸುವ ಪರಿಹಾರವನ್ನು ನಾವು ನಿರ್ಧರಿಸುತ್ತೇವೆ. ಇದಕ್ಕಾಗಿ, ನಾವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂದರೆ ನಾವು ತೆಗೆದುಕೊಳ್ಳುತ್ತೇವೆ. ರಾಜಿ ಮಾಡಿಕೊಳ್ಳಬೇಕಾದರೆ (ಗೆಹ್ಲೋಟ್ ಮತ್ತು ಪೈಲಟ್ ಅವರ ಬಣಗಳ ನಡುವೆ) ಅದನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕತ್ವವು ರಾಜಸ್ಥಾನ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಪರಿಗಣಿಸುತ್ತಿದೆ. ಆದರೆ, ಈ ಪರಿಹಾರಕ್ಕೆ ನಾನು ಯಾವುದೇ ಸಮಯದ ಚೌಕಟ್ಟನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕತ್ವ ಮಾತ್ರ ಇದಕ್ಕೆ ಸಮಯವನ್ನು ನಿರ್ಧರಿಸುತ್ತದೆ” ಎಂದು ಅವರು ಹೇಳಿದರು.
ಕಾಂಗ್ರೆಸ್‌ಗೆ ಗೆಹ್ಲೋಟ್ ಮತ್ತು ಪೈಲಟ್ ಇಬ್ಬರೂ ಅಗತ್ಯವಿದೆ ಎಂದು ಎಂದು ಹೇಳಿದ ಅವರು ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್‌ ತಮ್ಮ ಸಂದರ್ಶನದಲ್ಲಿ ಕೆಲವು ಪದಗಳನ್ನು ಬಳಸಬಾರದಿತ್ತು ಎಂದೂ ಹೇಳಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿದ ಜೈರಾಮ ರಮೇಶ ಅವರು, ಇತರೆ ರಾಜ್ಯಗಳಂತೆ ರಾಜಸ್ಥಾನದಲ್ಲೂ ಯಶಸ್ವಿಯಾಗಲಿದೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ಕಾಂಗ್ರೆಸ್‌ನ ಜನ ಸಂಪರ್ಕ ಉಪಕ್ರಮವಾದ ಪಾದಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪ್ರಾರಂಭವಾಯಿತು. ಇದು ಪ್ರಸ್ತುತ ಮಧ್ಯಪ್ರದೇಶದಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನಕ್ಕೆ ಡಿಸೆಂಬರ್ 4 ರಂದು ಯಾತ್ರೆ ಪ್ರವೇಶಿಸಲಿದೆ.
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಬಗ್ಗೆ ಭಾರತೀಯ ಜನತಾ ಪಕ್ಷದ ಭರವಸೆಯ ಕುರಿತು ಮಾತನಾಡಿದ ಅವರು, “ಯುಸಿಸಿ ಕುರಿತು ಸಂಸತ್ತಿನ ಒಳಗೆ ಮತ್ತು ಹೊರಗೆ ಚರ್ಚೆ ಮುಂದುವರಿಯಬೇಕು ಎಂದು ಹೇಳಿದರು.
ಆದರೆ, ಬಿಜೆಪಿ ಉದ್ದೇಶಪೂರ್ವಕವಾಗಿ ಮತಗಳ ಧ್ರುವೀಕರಣಕ್ಕಾಗಿ ಚುನಾವಣಾ ಸಂದರ್ಭದಲ್ಲಿ ವಿಭಜಕ ವಿಷಯಗಳನ್ನು ಎತ್ತುತ್ತದೆ ಎಂದು ಅವರು ಆರೋಪಿಸಿದರು.
ಡಿಸೆಂಬರ್ 1 ಮತ್ತು 5 ರಂದು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ಏಕರೂಪ ನಾಗರೀಕ ಸಂಹಿತೆ (ಯುಸಿಸಿ) ವಿಷಯವನ್ನು ಪ್ರಸ್ತಾಪಿಸಿದೆ. ಚುನಾವಣೆ ನಂತರ ಅವರು (ಬಿಜೆಪಿ) ಈ ವಿಷಯವನ್ನು ಮರೆತುಬಿಡುತ್ತಾರೆ” ಎಂದು ಅವರು ಹೇಳಿದರು.
ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಪ್ರಮುಖ ಸ್ಪರ್ಧೆಯಿದೆ ಎಂದು ಪ್ರತಿಪಾದಿಸಿದ ಅವರು ಫಲಿತಾಂಶಗಳು ಪ್ರಕಟವಾದ ನಂತರ ಆಮ್ ಆದ್ಮಿ ಪಕ್ಷದ “ಬಲೂನ್” ಸಿಡಿಯುತ್ತದೆ ಎಂದು ಹೇಳಿದ್ದಾರೆ.
ಮಾಧ್ಯಮಗಳು ಈ ಬಲೂನಿಗೆ ಗಾಳಿ ತುಂಬಿವೆ. ಗುಜರಾತ್‌ನಲ್ಲಿ ಎಎಪಿ ತಳಮಟ್ಟದಲ್ಲಿ ಬಲಶಾಲಿಯಾಗಿ ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement