ಹುಲಿಯನ್ನು ಹತ್ತಿರದಿಂದ ನೋಡಲು ಜೀಪ್‌ ನಿಲ್ಲಿಸಿದ ಪ್ರವಾಸಿಗರು… ಮುಂದೇನಾಯ್ತು ನೋಡಿ

ಜಂಗಲ್ ಸಫಾರಿ ವೇಳೆ ಕೆಲವೊಮ್ಮೆ ಕಾಡು ಪ್ರಾಣಿಗಳು ನೋಡಲು ಸಿಗದೆ ನಿರಾಸೆ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಹುಲಿಗಳಂತಹ ಪ್ರಾಣಿಗಳು ಸಫಾರಿ ವೇಳೆ ಕಾಣದೆ ನಿರಾಸೆ ಅನುಭವಿಸಬೇಕಾವುದೇ ಹೆಚ್ಚು. ಆದರೆ ಇತ್ತೀಚಿಗೆ ಒಂದು ಸಫಾರೆ ಗುಂಪಿಗೆ ಹುಲಿಯನ್ನು ನೋಡುವ ಅದೃಷ್ಟ ಸಿಕ್ಕಿದ್ದು, ನಂತರ ಅದು ಅಪಾಯಕಾರಿಯಾಗಿ ಪರಿಣಮಿಸಿದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುರೇಂದರ ಮೆಹ್ರಾ ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ, ತೆರೆದ ಸಫಾರಿಯಲ್ಲಿದ್ದ ಜನರ ಗುಂಪನ್ನು ಕೋಪಗೊಂಡ ಹುಲಿ ಸ್ವಾಗತಿಸಿತು. ಹುಲಿ, ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಸಫಾರಿ ವಾಹನ ಒಳನುಗ್ಗಿದ್ದಕ್ಕೆ ಕೋಪಗೊಂಡಂತೆ ತೋರುತ್ತಿದೆ. ಯಾಕೆಂದರೆ ಅದು ಆ ಪ್ರದೇಶದಲ್ಲಿ ತನ್ನ ಉಪಸ್ಥಿತಿ ತೋರಿಸಲು ಸಫಾರಿ ವಾಹನದ ಮೇಲೆ ದಾಳಿ ಮಾಡಲು ಪ್ರಯತ್ನಿಸಿದೆ.
“ಕೆಲವೊಮ್ಮೆ, ‘ಹುಲಿಗಳ ವೀಕ್ಷಣೆ’ಗಾಗಿ ಹೋಗುವ ನಮ್ಮ ‘ಅತಿಯಾದ’ ಉತ್ಸುಕತೆಯು ಅವುಗಳಿಗೆ ಕಿಕಿರಿಯಾಗುತ್ತದೆ ಎಂದು ಮೆಹ್ರಾ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ತೆರೆದ ಜೀಪ್‌ನಲ್ಲಿದ್ದ ಪ್ರವಾಸಿಗರ ಗುಂಪು ಪೊದೆಗಳ ಹಿಂದೆ ಹುಲಿ ಅಡಗಿರುವುದನ್ನು ಕಂಡು ಅವರು ಅದರ ಚಿತ್ರವನ್ನು ಕ್ಲಿಕ್ಕಿಸುವುದರಲ್ಲಿ ನಿರತರಾಗಿದ್ದಾಗ ಮತ್ತು ಅದರ ಚಲನೆಯನ್ನು ಹತ್ತಿರದಿಂದ ಸೆರೆಹಿಡಿಯಲು ಪ್ರಯತ್ನಿಸುತ್ತಿರುವಾಗ, ಕೋಪಗೊಂಡ ಹುಲಿ ಅವರ ಕಡೆಗೆ ತಿರುಗಿ ಓಡಿಬಂದಿದೆ ಮತ್ತು ಸಫಾರಿಯಲ್ಲಿದ್ದವರಿಗೆ ಜೋರಾಗಿ ಘರ್ಜನೆ ಮಾಡಿ ಹೆದರಿಸಿದೆ. ಈ ವೇಳೆ ಜೀಪ್ ಚಾಲಕ ತರಾತುರಿಯಲ್ಲಿ ವಾಹನವನ್ನು ಮುಂದಕ್ಕೆ ಕೊಂಡೊಯ್ದಿದ್ದು, ಈ ವೇಳೆ ಜೀಪ್‌ನಲ್ಲಿದ್ದವರು ಬೊಬ್ಬೆ ಹೊಡೆದಿದ್ದಾರೆ. ನಂತರ ಹುಲಿ ಯಾರಿಗೂ ನೋವುಂಟು ಮಾಡದೆ ತಿರುಗಿ ಕಾಡಿನತ್ತ ಹೋಗಿದೆ.

ಇಂದಿನ ಪ್ರಮುಖ ಸುದ್ದಿ :-   ಪೊಲೀಸ್ ಕಸ್ಟಡಿಯಲ್ಲಿದ್ದ ಭಗವಾನ್‌ ಹನುಮಾನ 29 ವರ್ಷಗಳ ನಂತರ ಬಿಡುಗಡೆ: ದೇವಸ್ಥಾನದಲ್ಲಿ ಮರು ಪ್ರತಿಷ್ಠಾಪನೆ

ಮೆಹ್ರಾ ಅವರು ಭಾನುವಾರ ಬೆಳಿಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, “ಸಫಾರಿಯಲ್ಲಿ ಜಾಗರೂಕರಾಗಿರಿ. ಪ್ರವಾಸಿಗರಿಗೂ ಸಹ ಕೆಲವು ನಡವಳಿಕೆಯ ಮಾರ್ಗಸೂಚಿಗಳನ್ನು ವಿಧಿಸುವುದು ಮುಖ್ಯವಾಗಿದೆ ಎಂದು ಬರೆದಿದ್ದಾರೆ.
ಕೆಲವು ಬಳಕೆದಾರರು, “ಸಫಾರಿ ಸಮಯದಲ್ಲಿ ಜನರು ಮೌನವಾಗಿರಲು ಏಕೆ ಸಾಧ್ಯವಿಲ್ಲ? ಅವರ ಶಬ್ದಗಳು ಕಾಡು ಪ್ರಾಣಿಗಳಿಗೆ ಅನಾನುಕೂಲತೆಯನ್ನುಂಟುಮಾಡುತ್ತವೆ. ಈ ರೀತಿಯ ಜನರನ್ನು ಕಾಡಿಗೆ ಪ್ರವೇಶಿಸುವುದನ್ನು ನಿಷೇಧಿಸಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.
“ನಿಜ, ಅರಣ್ಯ ಇಲಾಖೆಯು ಹುಲಿಯನ್ನು ಅಜಾಗರೂಕತೆಯಿಂದ ಅನುಸರಿಸುವುದನ್ನು ನಿಲ್ಲಿಸಲು ಮಾರ್ಗದರ್ಶಿಗಳಿಗೆ ಸ್ಪಷ್ಟ ಸೂಚನೆಗಳೊಂದಿಗೆ ಕೋರ್ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು … ವೀಕ್ಷಿಸಲು ಇತರ ಕಾಡು ಪ್ರಾಣಿಗಳಿವೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಘಟನೆ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೋವನ್ನು ಚಿತ್ರೀಕರಿಸಿದ ಸ್ಥಳವೂ ಇನ್ನೂ ತಿಳಿದುಬಂದಿಲ್ಲ.

ಇಂದಿನ ಪ್ರಮುಖ ಸುದ್ದಿ :-   ಕ್ರಿಕೆಟ್‌ನಲ್ಲಿ ಈ ತರಹದ ಬ್ಯಾಟಿಂಗ್‌ ನೋಡಿದ್ದೀರಾ..? | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement