ಧರ್ಮಸ್ಥಳ: ಭಾರತದ ರಕ್ಷಣಾ ಸಚಿವಾಲಯದಿಂದ ಪುಣೆಯ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.
ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ. 1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಟಿ-565 ಟ್ಯಾಂಕ್ ಬಳಕೆಯಾಗಿದೆ.
40 ಟನ್‌ಗಳಷ್ಟು ತೂಕ ಹೊಂದಿರುವ ಟ್ಯಾಂಕ್ 9 ಅಡಿ ಎತ್ತರ, 27.6 ಅಡಿ ಉದ್ದ ಮತ್ತು 10.8 ಅಗಲ ಹೊಂದಿರುವ ಟಿ-565 ಟ್ಯಾಂಕ್ ಗಂಟೆಗೆ ಗರಿಷ್ಠ ಗಂಟೆಗೆ 51 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಈ ಯುದ್ಧ ಟ್ಯಾಂಕ್‌ನ ಸಾಮರ್ಥ್ಯ 500 ಅಶ್ವಶಕ್ತಿಯಾಗಿದೆ. 1968ರಲ್ಲಿ ಭಾರತೀಯ ಸೇನೆಗೆ ಈ ಯುದ್ಧ ಟ್ಯಾಂಕ್ ಅನ್ನು ಸೇರ್ಪಡೆಗೊಳಿಸಲಾಯಿತು. ಇದನ್ನು ಹಿಂದಿನ ಸೋವಿಯತ್ ಒಕ್ಕೂಟ(ಯುಎಸ್‌ಎಸ್‌ಆರ್) ತಯಾರಿಸಿದೆ.
advertisement
ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು
ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ