ಆರತಕ್ಷತೆ ವೇಳೆ ಎಲ್ಲರ ಮುಂದೆಯೇ ವರ ತನಗೆ ಮುತ್ತು ಕೊಟ್ಟಿದ್ದಕ್ಕೆ ಕೋಪಗೊಂಡು ಅಲ್ಲಿಂದಲೇ ಪೊಲೀಸ್ ಠಾಣೆಗೆ ತೆರಳಿ ವರನ ವಿರುದ್ಧ ದೂರು ನೀಡಿದ ವಧು…!

ಸಂಬಲ್‌ : ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ವೇಳೆ ವರ ಮಹಾಶಯ ಎಲ್ಲರ ಸಮ್ಮುಖದಲ್ಲಿಯೇ ತನಗೆ ಮುತ್ತು ಕೊಟ್ಟ ಎಂಬ ಕಾರಣಕ್ಕೆ ವಧು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ.
ದಂಪತಿ ನವೆಂಬರ್ 26 ರಂದು ಉತ್ತರ ಪ್ರದೇಶದ ಸಾಮೂಹಿಕ ವಿವಾಹ ಯೋಜನೆ -2022ರಲ್ಲಿ ವಿವಾಹವಾದರು. ನವೆಂಬರ್ 28 ರಂದು ಪಾವಾಸಾ ಗ್ರಾಮದಲ್ಲಿ ನಡೆದ ವಿವಾಹದ ಆರತಕ್ಷತೆ ಸಮಾರಂಭದಲ್ಲಿ, ವಧು ಮತ್ತು ವರರು ವೇದಿಕೆಯಲ್ಲಿ ಕುಳಿತಿದ್ದರು. ವರನು ಸುಮಾರು 300 ಅತಿಥಿಗಳ ಮುಂದೆ ವಧುವಿಗೆ ಮುತ್ತು ಕೊಟ್ಟ. ಇದರಿಂದ ಕುಪಿತಳಾದ ವಧು ವೇದಿಕೆ ಬಿಟ್ಟು ತನ್ನ ಕೋಣೆಗೆ ತೆರಳಿದ್ದಾಳೆ. ಕುಟುಂಬಸ್ಥರು ಆಕೆಯನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಆಕೆ ಪೊಲೀಸ್ ಠಾಣೆಗೆ ಹೋಗುತ್ತೇನೆಂದು ಹಠ ಹಿಡಿದಿದ್ದಳು. ಕೊನೆಗೂ ಆರತಕ್ಷತೆ ವೇದಿಕೆ ಏರಲು ನಿರಾಕರಿಸಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ..!

ತನ್ನ ದೂರಿನಲ್ಲಿ, “ಇನ್ನು ಮುಂದೆ ನಾನು ಅವನ (ವರ) ಜೊತೆ ಇರಲು ಬಯಸುವುದಿಲ್ಲ, ನಾನು ನನ್ನ ಮನೆಯಲ್ಲಿಯೇ ಇರುತ್ತೇನೆ, ವರನ ನಡವಳಿಕೆ ನನಗೆ ಇಷ್ಟವಿಲ್ಲ, 300 ಜನರ ಮುಂದೆ ಇಂತಹ ಕೃತ್ಯ ಎಸಗುವ ವ್ಯಕ್ತಿ. ಮುಂದೆ ಹೇಗೆ ಸುಧಾರಿಸಬಹುದು? ಈ ಕೃತ್ಯಕ್ಕಾಗಿ ಆತನ (ವರನ)ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾಳೆ.
ಆದರೆ, ವರ ಈ ಆರೋಪಗಳನ್ನು ತಳ್ಳಿಹಾಕಿದ್ದು, ಈ ಕಿಸ್ ತನ್ನ ಮತ್ತು ವಧುವಿನ ನಡುವಿನ ಬಾಜಿಯ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ವಧುವಿಗೆ ಮುತ್ತು ಕೊಟ್ಟರೆ 1500 ರೂಪಾಯಿ ನೀಡುವುದಾಗಿ ವಧು ತನ್ನ ಜೊತೆ ಬೆಟ್ ಕಟ್ಟಿದ್ದಾಳೆ. ಇದು ಸಾಧ್ಯವಾಗದಿದ್ದರೆ ವಧುವಿಗೆ 3000 ರೂ. ಗಳನ್ನು ವಧುವಿಗೆ ಕೊಡಬೇಕು ಎಂಬುದು ಸಹ ಭಾಜಿಯ ಭಾಗವಾಗಿತ್ತು ಎಂದು ವರ ಹೇಳಿಕೊಂಡಿದ್ದಾನೆ. ಇದೇ ವಿಚಾರವಾಗಿ ವಧುವನ್ನು ಠಾಣೆ ಪ್ರಭಾರಿ ಕೇಳಿದಾಗ, ತಾನು ಅಂತಹ ಯಾವುದೇ ಬಾಜಿ ಕಟ್ಟಿಲ್ಲ ಎಂದು ಹೇಳಿದ್ದಾಳೆ.
ಸುದೀರ್ಘ ಚರ್ಚೆ ಮತ್ತು ವಾದದ ನಂತರ, ವಧು ಹಾಗೂ ವರನ ಕಡೆಯವರು ವಧು-ವರರು ಒಟ್ಟಿಗೆ ವಾಸಿಸುವುದಿಲ್ಲ ಎಂದು ಒಪ್ಪಂದಕ್ಕೆ ಬಂದರು. ಅವರ ಮದುವೆ ಇನ್ನೂ ನೋಂದಣಿಯಾಗಿಲ್ಲದ ಕಾರಣ, ಅವರು ಬಯಸಿದರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ಸಾವು, ಅದರಲ್ಲಿ 12 ನವಜಾತ ಶಿಶುಗಳು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement