ಕೇರಳದ ನವವಿವಾಹಿತ ದಂಪತಿ ದೇವಾಲಯದೊಳಗೆ ಫೋಟೋ ಶೂಟ್‌ ಮಾಡುತ್ತಿದ್ದ ವೇಳೆ ಆನೆ ದಾಳಿ…ಮುಂದೇನಾಯ್ತು ನೋಡಿ

ನವವಿವಾಹಿತ ದಂಪತಿ ಕೇರಳದ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ ಆನೆ ಮುಂದೆ ಫೋಟೋ ಶೂಟ್‌ ಮಾಡುವ ಸಂದರ್ಭದಲ್ಲಿ ಆನೆಯೊಂದು ಆಕ್ರೋಶಗೊಂಡು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವೀಡಿಯೊ ಛಾಯಾಗ್ರಾಹಕ ವೆಡ್ಡಿಂಗ್ ಮೊಜಿತೋ ಪೋಸ್ಟ್ ಮಾಡಿದ್ದಾರೆ. ಮಾತೃಭೂಮಿಯ ಪ್ರಕಾರ ನವೆಂಬರ್ 10 ರಂದು ಗುರುವಾಯೂರ್ ದೇವಾಲಯವಿರುವ ತ್ರಿಶೂರ್‌ನಲ್ಲಿ ಈ ಘಟನೆ ನಡೆದಿದೆ. ಇದು ದೇವಾಲಯದ ಪ್ರವೇಶ ದ್ವಾರದ ಬಳಿ ಸೇರಿದ್ದ ಭಕ್ತರನ್ನು ಬೆಚ್ಚಿ ಬೀಳಿಸಿದೆ.
ಫೋಟೋಶೂಟ್‌ಗಾಗಿ ನವವಿವಾಹಿತರು ದೇವಾಲಯದ ಒಳ ಪ್ರಾಂಗಣವನ್ನು ತಲುಪುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರ ಹಿಂದೆಯೇ ಆನೆ ನಿಂತಿತ್ತು.

ಕ್ಯಾಮರಾಮನ್ ವಧು ಮತ್ತು ವರನ ಫೋಟೋಗಳನ್ನು ಕ್ಲಿಕ್ ಮಾಡಲು ಪ್ರಾರಂಭಿಸುತ್ತಿದ್ದಂತೆ, ಆನೆ ಆಕ್ರಮಣಕಾರಿಯಾಗಿ ತಿರುಗಿ ಕೆಳಗಿದ್ದ ಮಾವುತನ ಮೇಲೆ ದಾಳಿ ಮಾಡಿದೆ. ನಂತರ ಆನೆಯು ತನ್ನ ಸೊಂಡಿಲಿನಿಂದ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದೆ, ಆದರೆ ಆಗ ಆತ ಗಾಬರಿಯಲ್ಲಿ ತಪ್ಪಿಸಿಕೊಳ್ಳುವ ಭರದಲ್ಲಿ ಕೆಳಗೆ ಬಿದ್ದುದ್ದಾನೆ. ಆದರೆ ಆನೆ ಸೊಂಡಿಲಿನಿಂದ ಆತನನ್ನು ಎತ್ತಲು ಪಪ್ರಯತ್ನಿಸಿದೆ. ಆಗ ಅವರ ಬಟ್ಟೆ ಆನೆ ಸೊಂಡಿಲಿಗೆ ಸಿಲುಕಿದ್ದರಿಂದ ಆತ ತಕ್ಷಣವೇ ಎದ್ದು ತಪ್ಪಿಸಿಕೊಂಡು ಓಡಿದ್ದಾನೆ, ಆದರೆ ಅವನ ಬಟ್ಟೆಗಳು ಆನೆಯ ಹಿಡಿತದಲ್ಲಿತ್ತು. ಕೊನೆಗೂ ಆನೆಯ ಮೇಲೆ ಕುಳಿತ ಎರಡನೇ ಮಾವುತ ಅದನ್ನು ನಿಯಂತ್ರಿಸಲು ಶಕ್ತನಾಗಿದ್ದಾನೆ.

ವರನು ಘಟನೆಯನ್ನು ನೆನಪಿಸಿಕೊಂಡಿದ್ದಾನೆ ಮತ್ತು ವೀಡಿಯೊದಲ್ಲಿ ತನ್ನ ಅನುಭವವನ್ನು ಹೇಳಿಕೊಂಡಿದ್ದಾನೆ. “ನಾವು ಫೋಟೋಗೆ ಪೋಸ್ ನೀಡುತ್ತಿದ್ದೆವು ಮತ್ತು ಇದ್ದಕ್ಕಿದ್ದಂತೆ ಎಲ್ಲರೂ ಕಿರುಚುತ್ತಾ ಓಡಲು ಪ್ರಾರಂಭಿಸಿದರು. ನನ್ನ ಪತ್ನಿ ನನ್ನ ಕೈ ಹಿಡಿದು ಓಡಿದಳು” ಎಂದು ವ್ಯಕ್ತಿ ಹೇಳಿದರು.
ಗುರುವಾಯೂರ್ ದೇವಸ್ಥಾನವು ಹಿಂದೂ ವಿವಾಹ ವಿಧಿಗಳಿಗೆ ಬಹಳ ಜನಪ್ರಿಯವಾಗಿದೆ.
ಕೆಲವು ತಿಂಗಳ ಹಿಂದೆ ಕೇರಳದ ಕೊಲ್ಲಂ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಕಾಡಾನೆಗಳು ತುಳಿದು ಕೊಂದಿದ್ದವು. 50ರ ಆಸುಪಾಸಿನ ವ್ಯಕ್ತಿ ದಟ್ಟ ಅರಣ್ಯದ ಮೂಲಕ ಹಾದುಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೂರು ಆನೆಗಳ ಗುಂಪು ದಾಳಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement