ಕುಮಟಾ: ಡಾ. ಎ. ವಿ. ಬಳಿಗಾ ವಾಣಿಜ್ಯ ಮಹಾವಿದ್ಯಾಯದ ಕ್ರೀಡಾಂಗಣದಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿಯ ಉದ್ಘಾಟನೆ ನಡೆಯಿತು. ಶಾಸಕ ದಿನಕರ್ ಶೆಟ್ಟಿ ಪಂದ್ಯಾವಳಿ ಉದ್ಘಾಟಿಸಿದರು.
ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿದೆ. ಆದರೂ ಇತರ ಕ್ರೀಡೆಗೆ ಮಹತ್ವ ಬರುತ್ತಿದೆ. ಫ್ಲೋರ್ ಬಾಲ್ ಒಂದು ನೂತನ ಕ್ರೀಡೆ. ರಾಜ್ಯ ಮಟ್ಟದ ಕ್ರೀಡೆ ಜಿಲ್ಲೆಯಲ್ಲಿ ಇದೇ ಮೊದಲು ಬಾರಿಗೆ ನಡೆಯುತ್ತಿರುವುದು ಸಂತಸದ ವಿಷಯ. ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ ಯಶಸ್ವಿಯಾಗಿ ಕ್ರೀಡಾ ಪಟುಗಳು ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಪುರಸಭಾ ಅಧ್ಯಕ್ಷೆ ಅನುರಾಧ ಬಾಳೇರಿ ಮಾತನಾಡಿ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು
ಕೆನರಾ ಕಾಲೇಜು ಸೊಸೈಟಿಯ ಕಾರ್ಯಧ್ಯಕ್ಷ ಡಿ.ಎಂ. ಕಾಮತ್ ಮಾತನಾಡಿ ನೂತನ ಕ್ರೀಡೆ ಯಿಂದ ನಮ್ಮ ಸಂಪ್ರದಾಯಿಕ ಕ್ರೀಡೆಯನ್ನು ಮರೆಯಬಾರದು ಎಂದರು.
ಗೋಳಿ ಅಂತಾರಾಷ್ಟ್ರೀಯ ಕ್ರೀಡಾ ಶಾಲೆ ಮುಖ್ಯಸ್ಥರಾದ ಅಣ್ಣಪ್ಪ ನಾಯಕ ಮೊಬೈಲ್ ಬಳಕೆ ವಿದ್ಯರ್ಥಿಗಳು ಕಡಿಮೆ ಮಾಡಿ ಹೊರಾಂಗಣ ಕ್ರೀಡೆಗೆ ಮಹತ್ವ ನೀಡಬೇಕು ಎಂದರು.ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಉಪನಿರ್ದೇಶಕರಾದ ಹನುಮಂತಪ್ಪ ನಿಟ್ಟೂರು ಮಾತನಾಡಿದರು.
ಜಿಲ್ಲಾ ಪ್ರಾಚಾರ್ಯ ಸಂಘದ ಜಿಲ್ಲಾ ಅಧ್ಯಕ್ಷರು ಸತೀಶ ನಾಯ್ಕ್ ಸ್ವಾಗತಿಸಿದರು. ಎಮ್. ಎಚ್. ಭಟ್ಟ ವಂದಿಸಿದರು ಪ್ರಾಚಾರ್ಯ ಎನ್.. ಜಿ. ಹೆಗಡೆ ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ