ಒಬ್ಬನೇ ಹುಡುಗನನ್ನು ವಿವಾಹವಾದ ಟೆಕ್ಕಿ ಅವಳಿ ಸಹೋದರಿಯರು | ವೀಕ್ಷಿಸಿ

ಮುಂಬೈ: ಮುಂಬೈನಲ್ಲಿ ಐಟಿ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಅವಳಿ ಸಹೋದರಿಯರಿಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ ಎಂಬಲ್ಲಿ ಅತುಲ್‌ ಎಂಬ ಒಬ್ಬನೇ ಹುಡುಗನನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಅವಳಿ ಸಹೋದರಿಯರ ಕುಟುಂಬದವರು ಹಾಗೂ ಹುಡುಗಿಯರು ಮತ್ತು ಮದುಮಗನ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಸೊಲ್ಲಾಪುರ ಜಿಲ್ಲೆಯ ಅಕ್ಲುಜ್ ಗ್ರಾಮದಲ್ಲಿ ವಿವಾಹ ನಡೆದಿರುವುದಾಗಿ ವರದಿಯಾಗಿದೆ.

ಮುಂಬೈನಲ್ಲಿ ಅವಳಿ ಸಹೋದರಿಯಾದ ಪಿಂಕಿ ಮತ್ತು ರಿಂಕಿ ಇಬ್ಬರೂ ಐಟಿ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರಿಯರು ಒಂದೇ ಮನೆಯಲ್ಲಿ ಒಟ್ಟಿಗೆ ಬೆಳೆದ ಕಾರಣ ಅತುಲ್ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಅತುಲ್ ಮಲ್ಶಿರಾಸ್ ತಾಲೂಕಿನ ನಿವಾಸಿಯಾಗಿದ್ದು, ಅತುಲ್‌ ಅವಳಿ ಸಹೋದರಿಯ ಕುಟುಂಬಕ್ಕೆ ಪರಿಚಿತರು. ಕೆಲವು ದಿನಗಳ ಹಿಂದೆ ತಂದೆ ತೀರಿಕೊಂಡ ನಂತರ ಹೆಣ್ಣು ಮಕ್ಕಳಿಬ್ಬರು ತಾಯಿಯೊಂದಿಗೆ ವಾಸವಾಗಿದ್ದರು.

ಅವರ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ಇಬ್ಬರು ಸಹೋದರಿಯರು ಅತುಲ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಹೋಗಲು ಪ್ರಾರಂಭಿಸಿದರು. ಮರಾಠಿ ಆನ್‌ಲೈನ್ ದೈನಿಕ ಮಹಾರಾಷ್ಟ್ರ ಟೈಮ್ಸ್‌ನ ವರದಿಯ ಪ್ರಕಾರ, ಈ ಸಮಯದಲ್ಲಿ ಅತುಲ್ ಇಬ್ಬರು ಯುವತಿಯರಿಗೆ ಹತ್ತಿರವಾದರು. ಅದು ನಂತರ ಇಬ್ಬರೂ ಸಹೋದರಿಯರು ಅತುಲ್‌ ಅವರನ್ನು ಮದುವೆಯಾಗುವುದರಲ್ಲಿ ಪರ್ಯಾವಸನಗೊಂಡಿತು.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement