ಒಂದು ಕಾಲದಲ್ಲಿ ಆಕಾಶವಾಣಿಗೆ ರೇಡಿಯೊ ಜಾಕಿಯಾಗಿ ಅರೆಕಾಲಿಕವಾಗಿ ಕೆಲಸ ಮಾಡಿದ್ದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿಳಿಸಿದರು.
ಗೋವಾದ ಇಂಡಿಯಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಆಫ್ ಲೀಗಲ್ ಎಜುಕೇಶನ್ ಅಂಡ್ ರಿಸರ್ಚ್‌ನ (IIULER) ಪ್ರಥಮ ಶೈಕ್ಷಣಿಕ ಅಧಿವೇಶನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ ನಾನು ನನ್ನ ಇಪ್ಪತ್ತರ ಪ್ರಾಯದಲ್ಲಿ ಆಕಾಶವಾಣಿಯಲ್ಲಿ ರೇಡಿಯೊ ಜಾಕಿಯಾಗಿ ‘ಪ್ಲೇ ಇಟ್ ಕೂಲ್’, ‘ಎ ಡೇಟ್ ವಿತ್ ಯು’ ಅಥವಾ ‘ಸಂಡೇ ರಿಕ್ವೆಸ್ಟ್ಸ್’ ರೀತಿಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದೆ ಎಂದು ಅವರು ನೆನಪಿಸಿಕೊಂಡರು.
ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು
ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189
ಸಂಗೀತದ ಮೇಲಿನ ನನ್ನ ಪ್ರೀತಿ ಇಂದಿಗೂ ಮುಂದುವರೆದಿದ್ದು ಪ್ರತಿ ದಿನವೂ ನಾನು ಸಂಗೀತ ಆಲಿಸುತ್ತೇನೆ ಎಂದು ಹೇಳಿದರು. “ಸಂಗೀತದ ಮೇಲಿನ ನನ್ನ ಪ್ರೀತಿ ಇಂದಿಗೂ ಮುಂದುವರೆದಿದೆ. ಹೀಗಾಗಿ ನಾನು ವಕೀಲರ ಅಷ್ಟಾಗಿ ಇಂಪಾಗಿರದ ಸಂಗೀತ (ವಾದ) ಕೇಳಿಮುಗಿಸಿದ ನಂತರ, ಪ್ರತಿ ದಿನವೂ ಕರ್ಣಕ್ಕೆ ಪ್ರಿಯವೆನಿಸುವ ಸಂಗೀತ ಆಲಿಸುತ್ತೇನೆ ಎಂದು ಅವರು ಚಟಾಕಿ ಹಾರಿಸಿದರು.
ರಾಷ್ಟ್ರೀಯ ಕಾನೂನು ವಿಶ್ವ ವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಎಂದರೆ ಸಿಎಲ್‌ಎಟಿಗೆ ಅಣಿಗೊಳಿಸಲೆಂದೇ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವುದು ಎಂದ ಅವರು, ಆದರೆ ಅವರು ಸಿಎಲ್‌ಎಟಿ ಪರೀಕ್ಷೆ ಉತ್ತೀರ್ಣರಾದ ಮಾತ್ರಕ್ಕೆ ಕಾನೂನು ಕಲಿತಂತಾಗುವುದಿಲ್ಲ ಎಂದು ಹೇಳಿದರು.
ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಟೆಲಿಗ್ರಾಮ್ ಚಾನೆಲ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ