ಉಪಚುನಾವಣೆ: ಆರು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ತಲಾ 2 ಕ್ಷೇತ್ರಗಳಲ್ಲಿ ಗೆಲುವು

ನವದೆಹಲಿ: ಗುರುವಾರ ಪ್ರಕಟವಾದ ಡಿಸೆಂಬರ್ 5 ರ ಉಪಚುನಾವಣೆಯ ಫಲಿತಾಂಶದಲ್ಲಿ ಸಮಾಜವಾದಿ ಪಕ್ಷವು ಮುಲಾಯಂ ಸಿಂಗ್‌ ಯಾದವ್‌ ಅವರ ನಿಧನದಿಂದ ತೆರವಾಗಿದ್ದ ಮೈನ್‌ಪುರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಂಡಿದೆ, ಆದರೆ ಬಿಜೆಪಿಯು ಉತ್ತರ ಪ್ರದೇಶದ ರಾಂಪುರ ಸದರ್ ವಿಧಾನಸಭಾ ಕ್ಷೇತ್ರವನ್ನು ಸಮಾಜವಾದಿ ಪಕ್ಷದಿಂದ ಕಸಿದುಕೊಂಡಿದೆ. ಹಾಗೂ ಆಡಳಿತಾರೂಢ ನಿತೀಶಕುಮಾರ್ ನೇತೃತ್ವದ ಮೈತ್ರಿ ಕೂಟದಲ್ಲಿ ತೆಕ್ಕೆಯಲ್ಲಿದ್ದ ಬಿಹಾರದ ಕುರ್ಹಾನಿ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಿದೆ.
ಇದೇವೇಳೆ ಆಡಳಿತಾರೂಢ ಬಿಜೆಪಿ, ಸಮಾಜವಾದಿ ಪಕ್ಷದ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ವಿರುದ್ಧ ಖತೌಲಿ ಕ್ಷೇತ್ರವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ತನ್ನ ಎರಡು ವಿಧಾನಸಭಾ ಸ್ಥಾನಗಳನ್ನು ಉಳಿಸಿಕೊಂಡಿದೆ – ಛತ್ತೀಸ್‌ಗಢದ ಭಾನುಪ್ರತಾಪುರ್ ಮತ್ತು ರಾಜಸ್ಥಾನದ ಚುರು ಜಿಲ್ಲೆಯ ಸರ್ದರ್ಶಹರ್ ವಿಧಾನಸಭಾ ಸ್ಥಾನವನ್ನು ಅದು ಉಳಿಸಿಕೊಂಡಿದೆ.
ಒಡಿಶಾದಲ್ಲಿ ಬಿಜೆಡಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ, ಬರ್ಗಢ್ ಜಿಲ್ಲೆಯ ಪದಂಪುರ ವಿಧಾನಸಭಾ ಕ್ಷೇತ್ರವನ್ನು ಗೆದ್ದಿದೆ.
ಸೋಮವಾರ ಉಪಚುನಾವಣೆ ನಡೆದ ಐದು ರಾಜ್ಯಗಳ ಆರು ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಎರಡನ್ನು ಗೆದ್ದರೆ, ಬಿಜೆಡಿ ಮತ್ತು ಆರ್‌ಎಲ್‌ಡಿ ತಲಾ ಒಂದು ಸ್ಥಾನವನ್ನು ಗೆದ್ದಿವೆ.

ಮೈನ್‌ಪುರಿ ಕ್ಷೇತ್ರದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು 2,88,461 ಮತಗಳಿಂದ ಸೋಲಿಸಿದರು.
ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಮತ್ತು ಜೂನ್ ಉಪಚುನಾವಣೆಯಲ್ಲಿ ಬಿಜೆಪಿಗೆ ಅಜಂಗಢ ಮತ್ತು ರಾಂಪುರ ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡ ನಂತರ ಅಖಿಲೇಶ್ ಯಾದವ್‌ಗೆ ತನ್ನ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರಿಂದ ತೆರವಾಗಿದ್ದ ಸ್ಥಾನದಲ್ಲಿ ನಡೆದ ಉಪಚುನಾವಣೆ ಗೆಲುವು ಸ್ವಲ್ಪ ಸಮಾಧಾನ ತಂದಿದೆ.
ಸಮಾಜವಾದಿ ಪಕ್ಷದ ಮಿತ್ರಪಕ್ಷ ರಾಷ್ಟ್ರೀಯ ಲೋಕದಳದ ಮದನ್ ಭಯ್ಯಾ ಅವರು ಖತೌಲಿಯಲ್ಲಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ರಾಜಕುಮಾರಿ ಸೈನಿ ಅವರನ್ನು 22,000 ಮತಗಳ ಅಂತರದಿಂದ ಸೋಲಿಸಿದರು. ಸೈನಿ ಬಿಜೆಪಿಯ ಮಾಜಿ ಶಾಸಕ ವಿಕ್ರಮ್ ಸಿಂಗ್ ಅವರ ಪತ್ನಿಯಾಗಿದ್ದು, 2013 ರ ಮುಜಾಫರ್‌ನಗರ ಗಲಭೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ರಾಜ್ಯ ವಿಧಾನಸಭೆಯಿಂದ ಅನರ್ಹಗೊಂಡಿದ್ದರಿಂದ ಉಪಚುನಾವಣೆ ನಡೆದಿತ್ತು. ಮದನ್ ಭಯ್ಯಾ 97,071 ಮತಗಳನ್ನು ಪಡೆದರೆ, ಸೈನಿ 74,996 ಮತಗಳನ್ನು ಪಡೆದಿದ್ದಾರೆ.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ಆದಾಗ್ಯೂ, ಬಿಜೆಪಿಯು ಮೊದಲ ಬಾರಿಗೆ ಎಸ್‌ಪಿ ನಾಯಕ ಅಜಂ ಖಾನ್ ಅವರ ಭದ್ರಕೋಟೆಯಾದ ರಾಮ್‌ಪುರ್ ಸದರ್‌ನಿಂದ ಗೆದ್ದಿದೆ, ಅವರು ದ್ವೇಷ ಭಾಷಣದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಶಾಸಕತ್ವದಿಂದ ಅನರ್ಹರಾಗುವ ಮೊದಲು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿ ಕೇದಾರ್ ಪ್ರಸಾದ್ ಗುಪ್ತಾ ಅವರು ಕುರ್ಹಾನಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುನ ಮನೋಜ್ ಸಿಂಗ್ ಕುಶ್ವಾಹಾ ಅವರನ್ನು 3,645 ಮತಗಳಿಂದ ಸೋಲಿಸಿದರು. ನಾಲ್ಕು ತಿಂಗಳ ಹಿಂದೆ ಜೆಡಿಯು ಬಿಜೆಪಿ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿತ್ತು. ತುರುಸಿನ ಸ್ಪರ್ಧೆಯಲ್ಲಿ ಗುಪ್ತಾ 76,653 ಮತಗಳನ್ನು ಪಡೆದರೆ, ಕುಶ್ವಾಹಾ 73,008 ಮತಗಳನ್ನು ಪಡೆದರು.
ಆರ್‌ಜೆಡಿ ಶಾಸಕ ಅನಿಲಕುಮಾರ ಸಹಾನಿ ಅವರನ್ನು ಅನರ್ಹಗೊಳಿಸಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು. ಆರ್‌ಜೆಡಿ ಆಡಳಿತಾರೂಢ ಮಹಾಘಟಬಂಧನ (ಮಹಾ ಮೈತ್ರಿ) ಯ ಒಂದು ಘಟಕವಾಗಿದೆ.

ರಾಜಸ್ಥಾನದ ಸರ್ದರ್ಶಹರ್ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಅನಿಲ್ ಶರ್ಮಾ ಅವರು ಬಿಜೆಪಿಯ ಅಶೋಕಕುಮಾರ ಪಿಂಚಾ ಅವರನ್ನು 26,850 ಮತಗಳ ಅಂತರದಿಂದ ಸೋಲಿಸಿದರು. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಈ ಕ್ಷೇತ್ರದಲ್ಲಿ 10ನೇ ಬಾರಿ ಗೆದ್ದಿದೆ. ಅನಿಲ್ ಶರ್ಮಾ ಅವರ ತಂದೆಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಶಾಸಕ ಭನ್ವರ್‌ಲಾಲ್ ಶರ್ಮಾ ಅವರ ನಿಧನದ ನಂತರ ಉಪಚುನಾವಣೆ ನಡೆದಿತ್ತು.
ಭಾನುಪ್ರತಾಪುರ್ ವಿಧಾನಸಭೆಯಿಂದ ಕಾಂಗ್ರೆಸ್ ಅಭ್ಯರ್ಥಿ ಸಾವಿತ್ರಿ ಮಾಂಡವಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬ್ರಹ್ಮಾನಂದ್ ನೇತಮ್ ವಿರುದ್ಧ 21,171 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನಿಧನರಾಗಿದ್ದ ಕಾಂಗ್ರೆಸ್ ಶಾಸಕ ಮನೋಜ್ ಸಿಂಗ್ ಮಾಂಡವಿ ಅವರ ಪತ್ನಿ ಮಾಂಡವಿ ಅವರು 65,479 ಮತಗಳನ್ನು ಪಡೆದರೆ, ಬಿಜೆಪಿಯ ನೇತಮ್ 44,308 ಮತಗಳನ್ನು ಪಡೆದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಕ್ಬರ್ ರಾಮ್ ಕೊರ್ರಂ 23,417 ಮತಗಳನ್ನು ಪಡೆದರು.
ಒಡಿಶಾದ ಪದಂಪುರದಲ್ಲಿ ಆಡಳಿತಾರೂಢ ಬಿಜೆಡಿಯ ಬರ್ಶಾ ಸಿಂಗ್ ಬರಿಹಾ 42,679 ಮತಗಳ ಅಂತರದಿಂದ ಬಿಜೆಪಿಯ ಪ್ರದೀಪ ಪುರೋಹಿತ್ ಅವರನ್ನು ಸೋಲಿಸಿದರು. ಬರ್ಷಾ ಅವರು ದಿವಂಗತ ಶಾಸಕ ಬಿಜಯ್ ರಂಜನ್ ಸಿಂಗ್ ಬರಿಹಾ ಅವರ ಪುತ್ರಿಯಾಗಿದ್ದು, ಅಕ್ಟೋಬರ್‌ನಲ್ಲಿ ನಿಧನರಾದ ಉಪಚುನಾವಣೆ ಅಗತ್ಯವಾಗಿತ್ತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement