ಗುಜರಾತಿನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ-ಕಾಂಗ್ರೆಸ್‌ ಹೀನಾಯ ಸೋಲಿಗೆ ಕಾರಣವಾದ ಅಂಶಗಳು..

ಗುಜರಾತಿನ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ 156 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಾರ್ವಕಾಲಿಕವಾಗಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. ಕಾಂಗ್ರೆಸ್‌ ಕೇವಲ 16 ಸ್ಥಾನಗಳಿಗೆ ಕುಸಿಯುವ ಮೂಲಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವೂ ಸಿಗದ ಪರಿಸ್ಥಿತಿ ಎದುರಾಗಿದೆ. ಪ್ರಧಾನಿ ಮೋದಿಯವರ ಜನಪ್ರಿಯತೆಯು ಮತ್ತೊಮ್ಮೆ ಬಿಜೆಪಿ ಪರವಾಗಿ ಕೆಲಸ ಮಾಡಿದ ಪ್ರಮುಖ ಅಂಶವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಮೋದಿ ತಮ್ಮ ಜನಪ್ರಿಯತೆಯನ್ನು ಸಂಪೂರ್ಣವಾಗಿ ಬಳಸಿಕೊಂಡರು. ಅಲ್ಲದೆ, ಕ ಗುಜರಾತ್‌ ಅಸ್ಮಿತೆ ನರೇಂದ್ರ ಮೋದಿ ಎಂಬ ಸಮೀಕರಣದೊಂದಿಗೆ ಗುಜರಾತಿನ ಜನರನ್ನು ಸಂಪೂರ್ಣವಾಗಿ ಮೆಚ್ಚಿಸಿದ್ದಾರೆ. ಪ್ರತಿಪಕ್ಷಗಳು ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಟೀಕಿಸಿದರೆ, ಅದು ಗುಜರಾತಿಗೆ ಆಗುವ ಅವಮಾನವಾಗಿದೆ ಎಂಬ ಮೋದಿ ಮತ್ತು ಅವರ ಪಕ್ಷದಿಂದ ಆಕ್ರಮಣಕಾರಿ ನೀತಿಯಿಂದಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಎಎಪಿಯವರು ಬಿಜೆಪಿಯನ್ನು ಎದುರಿಸಲು ವಿಫಲವಾಗಿದ್ದಾರೆ. ಬಿಜೆಪಿ ಕಳೆದ ಬಾರಿ ಶೇಕಡಾ 49ರಿಂದ ಈ ಬಾರಿ ಶೇಕಡಾ 5 ಕ್ಕೆ ತನ್ನ ಮತಗಳನ್ನು ಹೆಚ್ಚಿಸಿಕೊಂಡಿತು, ಆದರೆ ಕಾಂಗ್ರೆಸ್ ಪಕ್ಷದ ಮತಗಳ ಪ್ರಮಾಣವು ಶೇಕಡಾ 42 ರಿಂದ ಶೇಕಡಾ 27 ಕ್ಕೆ ತೀವ್ರವಾಗಿ ಕುಸಿಯಿತು, ಏಕೆಂದರೆ ಅದರ ಮತದಾರರಲ್ಲಿ ಹೆಚ್ಚಿನ ಭಾಗವು ಎಎಪಿಗೆ ಹೋಯಿತು. ಎಎಪಿ ಶೇ.13 ರಷ್ಟು ಮತ ಪಡೆಯಿತು.
ಬಿಜೆಪಿಯು ಇಲ್ಲಿಯವರೆಗಿನ ಅತ್ಯುತ್ತಮ ಪ್ರದರ್ಶನವ ನೀಡಿದೆ ಹಾಗೂ 156  ಸ್ಥಾನಗಳನ್ನು ಗೆಲ್ಲುವ ಮೂಲಕ 1985 ರಲ್ಲಿ ದಿವಂಗತ ಮಾಧವಸಿಂಹ ಸೋಲಂಕಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು 149 ಸ್ಥಾನಗಳನ್ನು ಗೆದ್ದಾಗ ನಿರ್ಮಿಸಿದ ದಾಖಲೆಯನ್ನೂ ಮುರಿದಿದೆ. ಅಲ್ಲದೆ, ಏಳನೇ ಅವಧಿಗೆ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಸಾಧನೆಯನ್ನು ಅದು ಸರಿಗಟ್ಟಿದೆ.

ಮೋದಿಯವರ ಪ್ರಭಾವ ಮತ್ತು ಗುಜರಾತಿನ ಐಡೆಂಟಿಟಿ…
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯನ್ನು ರಾವಣನಿಗೆ ಹೋಲಿಸಿದ್ದನ್ನು ಬಿಜೆಪಿಯವರು ಬಳಕೆ ಮಾಡಿಕೊಂಡಿದ್ದು, ವಿಶೇಷವಾಗಿ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಮತಗಳಾಗಿ ಪರಿವರ್ತಿಸಲು ಸಹಾಯ ಮಾಡಿದೆ. ಮೋದಿ ಗುಜರಾತ್‌ನಾದ್ಯಂತ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು, ಪ್ರತಿ ಗರಿಷ್ಠ ಸಂಖ್ಯೆಯ ರೋಡ್ ಶೋ ನಡೆಸಿದರು. ಮೋದಿಯವರ ವರ್ಚಸ್ಸು ಮತ್ತು ಜನಪ್ರಿಯತೆ ಮತ್ತು ಬೂತ್ ಮಟ್ಟದ ಸಕ್ರಿಯ ಸಂಘಟನೆಯ ಬಲವಾದ ಸಂಯೋಜನೆಯು ಬಿಜೆಪಿಯ ಪರವಾಗಿ ಫಲಿತಾಂಶಗಳನ್ನು ನೀಡಿತು.
ಧಾರ್ಮಿಕ ಧ್ರುವೀಕರಣ
ಗುಜರಾತ್ ನಲ್ಲಿ ಹಿಂದುತ್ವದ ಪ್ರಭಾವ ಇನ್ನೂ ಇದೆ ಎಂಬುದನ್ನು ಈ ಚುನಾವಣೆಯ ಫಲಿತಾಂಶ ಮತ್ತೊಮ್ಮೆ ಸಾಬೀತು ಮಾಡಿದೆ. ಗುಜರಾತ್ ಅನ್ನು ಹಿಂದುತ್ವದ ಪ್ರಯೋಗಶಾಲೆ ಎಂದು ಕರೆಯಲಾಗುತ್ತದೆ. ಗುಜರಾತ್‌ನಲ್ಲಿ 2002 ರ ಗಲಭೆಯ ನಂತರ, ಧಾರ್ಮಿಕ ಧ್ರುವೀಕರಣವು ವ್ಯಾಪಕವಾಗಿ ಹರಡಿತು ಮತ್ತು ಮತದಾರರನ್ನು ತಮ್ಮ ಪರವಾಗಿ ಸೆಳೆಯಲು ಮುಂದುವರೆಯಿತು. ಈಸಲದ ಚುನಾವಣಾ ಪ್ರಚಾರದಲ್ಲಿ ಹಿಂದುತ್ವವೂ ಒಂದು ಪ್ರಮುಖ ವಿಷಯವಾಗಿತ್ತು.
ಹಿಂದುತ್ವದ ವಿಷಯವು ಕಳೆದ ಎರಡು ದಶಕಗಳಿಂದ ಗುಜರಾತಿ ಮತದಾರರಲ್ಲಿ ಆಳವಾಗಿ ಬೇರೂರಿದೆ ಮತ್ತು ಸಹಜವಾಗಿಯೇ ಈ ಹಿಂದುತ್ವದ ವಿಷಯವು ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನೇರವಾಗಿ ಲಾಭದಾಯಕವಾಗಿದೆ. ಎಲ್ಲಾ ಜಾತಿ ಗುಂಪುಗಳನ್ನು ಹಿಂದುತ್ವದ ಛತ್ರಿಯಡಿಯಲ್ಲಿ ಸೇರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಅಮಿತ್ ಶಾ ಅವರ ಮೈಕ್ರೋ ಮ್ಯಾನೇಜ್ಮೆಂಟ್
ಅಧಿಕಾರ-ವಿರೋಧಿ ಅಲೆ ಅದರ ಚುನಾವಣಾ ಭವಿಷ್ಯವನ್ನು ಹಾಳುಮಾಡಬಹುದು ಎಂದು ಅರಿತುಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಪ್ರವೃತ್ತರಾದರು ಮತ್ತು ಅವರ ಮೈಕ್ರೋ ಮ್ಯಾನೇಜ್‌ಮೆಂಟ್ ಕೆಲವು ಹಾಲಿ ಶಾಸಕರನ್ನು ಬದಲಿಸಿ ಹೊಸ ಶಾಸಕರಿಗೆ ಟಿಕೆಟ್‌ ನೀಡುವುದಕ್ಕೆ ಪ್ರೇರೇಪಿಸಿತು. ಜೆಪಿ ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ, ಗುಜರಾತ್‌ ಚುನಾವಣಾ ನಿರ್ವಹಣಾ ತಂತ್ರವನ್ನು ನಿರ್ಧರಿಸಿದ್ದು ಅಮಿತ್‌ ಶಾ ಅವರು.
ಇದರ ಜೊತೆಗೆ ಬಿಜೆಪಿಯು ಗುಜರಾತ್‌ನಲ್ಲಿ ಕಾಂಗ್ರೆಸ್‌ಗಿಂತ ವಿಶಾಲವಾದ ಮತ್ತು ಬಲಿಷ್ಠವಾದ ಸಂಘಟನಾ ಜಾಲವನ್ನು ಹೊಂದಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಬಿಜೆಪಿಯ ಸಂಘಟನಾ ಶಕ್ತಿ ಅಗಾಧವಾಗಿದೆ. ಇದರೊಂದಿಗೆ ಗುಜರಾತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವೂ ಗಟ್ಟಿಯಾಗಿ ನೆಲೆಯೂರಿದೆ. ಗುಜರಾತಿನ ಗ್ರಾಮೀಣ ಪ್ರದೇಶಗಳಿಗೂ ಹೆಚ್ಚಿನ ಸಂಖ್ಯೆಯ ಶಾಖೆಗಳು ಹರಡಿವೆ. ಕಳೆದ 40 ವರ್ಷಗಳಲ್ಲಿ ಸಂಘವು ಗುಜರಾತ್‌ನಲ್ಲಿ ತನ್ನ ವಿಸ್ತರಣೆಯನ್ನು ಬಹಳ ಎಚ್ಚರಿಕೆಯಿಂದ ಮಾಡಿದೆ ಹಾಗೂ ನಿರ್ವಹಿಸಿದೆ.
ಕಾಂಗ್ರೆಸ್ ದುರ್ಬಲಗೊಳ್ಳಲು ಪ್ರಾರಂಭಿಸಿದಾಗ, ದುರ್ಬಲ ಸಂಘಟನೆ ಕಾಂಗ್ರೆಸ್ ಸೇವಾದಳದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯ ಜಾಲವನ್ನು ಗಟ್ಟಿಗೊಳಿಸುತ್ತ ಸಾಗಿದರೆ ಕಾಂಗ್ರೆಸ್ ಪಕ್ಷವು ತನ್ನ ಸಾಂಸ್ಥಿಕ ಹಿಡಿತವನ್ನು ಕಳೆದುಕೊಳ್ಳುತ್ತ ಹೋಯಿತು. ಜೊತೆಗೆ ಕಾಂಗ್ರೆಸ್‌ ನಾಯಕರ ಒಳಜಗಳದಿಂದಾಗಿ ಪ್ರಬಲ ಪಾಟೀದಾರ ನಾಯಕರಾದ ಹಾರ್ದಿಕ ಪಟೇಲ್‌ ಅವರಂಥ ಯುವ ನಾಯಕರನ್ನು ಚುನಾವಣೆ ಹೊಸ್ತಿಲಲ್ಲಿ ವಿವೇಚನಾರಹಿತವಾಗಿ ಕಳೆದುಕೊಂಡಿತು. ಬಿಜೆಪಿ ಇದರ ಲಾಭ ಪಡೆಯಿತು ಹಾಗೂ ಹಾರ್ದಿಕ ಪಟೇಲ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಜೊತೆಗೆ ಆಮ್ ಆದ್ಮಿ ಪಕ್ಷವು ಪ್ರಮುಖ ಪ್ರಚಾರ ಮತ್ತು ಬೃಹತ್ ಸಭೆಗಳನ್ನು ನಡೆಸಿದರೂ ಅದರ ಸಂಘಟನಾ ಜಾಲವು ಗುಜರಾತ್‌ನಲ್ಲಿ ಅತ್ಯಂತ ಮೂಲಭೂತ ಮಟ್ಟದಲ್ಲಿದೆ. ಹೀಗಾಗಿ ಅದು ಬಹುತೇಕ ಸಂಘಟನಾತ್ಮಕವಾಗಿ ದುರ್ಬಲವಾದ ಕಾಂಗ್ರೆಸ್ ಮತಗಳಿಗೆ ಕೈ ಹಾಕಿತೇ ಹೊರತು ಬಿಜೆಪಿ ಮತವನ್ನು ಸೆಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಇದರ ಜೊತೆಗೆ ಸಂಘಟನಾತ್ಮಕವಾಗಿ ದುರ್ಬಲವಾಗಿದ್ದ ಕಾಂಗ್ರೆಸ್‌ ಮತಕ್ಕೆ ಬಿಜೆಪಿಯೂ ಕೈ ಹಾಕಿ ಒಂದಷ್ಟು ಮತಗಳನ್ನು ಸೆಳೆಯಲು ಸಫಲವಾಯಿತು.

ಆಡಳಿತ ವಿರೋಧಿಗಳ ಲಾಭ ಪಡೆಯಲು ಕಾಂಗ್ರೆಸ್ ವಿಫಲ
ಕಳೆದ ಎರಡೂವರೆ ದಶಕಗಳಿಂದ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಅದರ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಕಾಂಗ್ರೆಸ್‌ಗೆ ಅವಕಾಶವಿತ್ತು. ಆದರೆ ಇದರಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ವಿಫಲವಾಯಿತು. ಅದು ಯಾವಾಗಲೂ ಪರಿಣಾಮಕಾರಿಯಾದ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲೇ ಇಲ್ಲ. 2017ರಲ್ಲಿ ಕಾಂಗ್ರೆಸ್‌ನ ಸಾಧನೆಗಳು ಪಕ್ಷದ ಕಠಿಣ ಪರಿಶ್ರಮ ಮತ್ತು ಸರಿಯಾದ ಕಾರ್ಯತಂತ್ರದಿಂದಾಗಿ ಬಂದಿದ್ದವು. ಆದರೆ, ಈ ಚುನಾವಣೆಯಲ್ಲಿ ಈ ಎರಡೂ ಅಂಶಗಳು ಕಾಣೆಯಾಗಿತ್ತು. ರಾಹುಲ್‌ ಗಾಂಧಿ ತಮ್ಮ ಬಾರತ ಜೋಡೋ ಯಾತ್ರೆಗೆ ಮಹತ್ವ ನೀಡಿದ್ದರಿಂದ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಕಾಟಾರಕ್ಕೆ ಎರಡು ದಿನ ಬಂದು ಎರಡು ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಿ ಹೋಗಿದ್ದನ್ನು ಬಿಟ್ಟರೆ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳದರೆ ಇರುವುದರಿಂದ ಪಕ್ಷವು ಸಂಘಟಾನಾತ್ಮಕವಾಗಿ ಒಗ್ಗೂಡಲು ವಿಫಲವಾಯಿತು. ಬೇರೆ ಯಾವುದೇ ಹಿರಿಯ ನಾಯಕರು ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಲಿಲ್ಲ. ಇದೇವೇಳೆ ಪ್ರಿಯಾಂಕಾ ಗಾಂಧಿ ಅವರು ತಮ್ಮನ್ನು ಕೇವಲ ಹಿಮಾಚಲ ಪ್ರದೇಶಕ್ಕೆ ಮಾತ್ರ ಸೀಮಿತವಾದರು. ಇವೆಲ್ಲವೂ ಬಿಜೆಪಿಯ ಗೆಲುವು ಸುಲಭಗೊಳಿಸಿದೆ. ಅದು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಯಿತು ಹಾಗೂ ವಿಶ್ವಾಸ ಕುಂದುವಂತೆ ಮಾಡಿತು. ಬಿಜೆಪಿಯ ಮತಗಳ ಪ್ರಮಾಣವು 53% ದಾಟಿದರೆ, ಕಾಂಗ್ರೆಸ್ ಪಕ್ಷವು 28.6% ಕ್ಕೆ ಇಳಿಯಿತು. ಯಾಕೆಂದರೆ ಪಕ್ಷವು ಸಂಘಟನೆಯನ್ನು ಪುನಶ್ಚೇತನಗೊಳಿಸಲು ಮತ್ತು ಬಿಜೆಪಿಗೆ ತಾನು ಅಸಾಧಾರಣ ಪರ್ಯಾಯ ಎಂದು ಮತದಾರರಿಗೆ ಮನವರಿಕೆ ಮಾಡಲು ವಿಫಲವಾಯಿತು.
ಕಾಂಗ್ರೆಸ್ ಪಕ್ಷದ ಪ್ರಚಾರವು ಹೆಚ್ಚಾಗಿ ಮೋದಿ ಮತ್ತು ಶಾ ಅವರನ್ನು ಟೀಕಿಸುವುದರ ಸುತ್ತಮತ್ತಲೇ ಇತ್ತು. ಆದರೆ ತಾನು ಹೇಗೆ ಬಿಜೆಪಗೆ ಪರ್ಯಾವ ಎಂದು ಮತದಾರರಲ್ಲಿ ಬಿಂಬಿಸಲು ವಿಫಲವಾಯಿತು. ಜೊತೆಗೆ ಗುಜರಾತ್‌ ಅಭಿವೃದ್ಧಿಗಾಗಿ ಪ್ಲಾನ್ ಮುಂದಿಡಲು ವಿಫಲವಾಯಿತು.
ಕೋವಿಡ್, ಮೊರ್ಬಿ ದುರಂತವನ್ನು ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯದ ವಿಷಯಗಳಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಲಿಲ್ಲ.
ಅಲ್ಲದೆ, ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಭದ್ರಕೋಟೆಯಾದ ಬುಡಕಟ್ಟು ಪ್ರದೇಶಗಳಲ್ಲಿ ತನ್ನ ಕೇಂದ್ರೀಕೃತ ಪ್ರಚಾರ ಮಾಡಲು ಮತ್ತು ಉಳಿಸಿಕೊಳ್ಳಲು ಸಂಪೂರ್ಣವಾಗಿ ವಿಫಲವಾಯಿತು. ಇಲ್ಲಿ ಮತ್ತೊಮ್ಮೆ, ಬಿಜೆಪಿಯ ಪ್ರಚಾರ ಕಾರ್ಯಕ್ರಮವು ಅದರ ಪರವಾಗಿ ಕೆಲಸ ಮಾಡಿತು.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಸೋತ ಕ್ಷೇತ್ರಗಳ ಮೇಲೆ ಬಿಜೆಪಿಯ ವಿಶೇಷ ಗಮನ
2017ರ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳು ಸೋತ ಕ್ಷೇತ್ರಗಳತ್ತ ಬಿಜೆಪಿ ವಿಶೇಷ ಗಮನ ಹರಿಸಿತ್ತು. 2012ರ ಚುನಾವಣೆಯಲ್ಲಿ ಸುರೇಂದ್ರನಗರ, ಸೋಮನಾಥ್ ಮತ್ತು ಅಮ್ರೇಲಿ ಮೊದಲಾದ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ 2017ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ಬಿದ್ದಿತ್ತು. ಈ ಕ್ಷೇತ್ರಗಳತ್ತ ವಿಶೇಷ ಗಮನ ಹರಿಸಲು ಕಾರ್ಯತಂತ್ರ ರೂಪಿಸಲಾಯಿತು. ಈ ಕ್ಷೇತ್ರಗಳಲ್ಲಿ ಪಕ್ಷದ ಸಂಪೂರ್ಣ ಕೇಂದ್ರೀಕೃತವಾಗಿ ವಿಶೇಷವಾಗಿ ಗಮನ ಹರಿಸಿತು. ಇದು ಸಹಜವಾಗಿಯೇ ಬಿಜೆಪಿಗೆ ಲಾಭ ತಂದಿತು, ಇದು ಈ ಚುನಾವಣೆಯಲ್ಲಿ ಬಿಜೆಪಿಗೆ ಈ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಯಿತು.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement