ಅಂಬೇಡ್ಕರ, ಮಹಾತ್ಮ ಫುಲೆ ಕುರಿತು ಹೇಳಿಕೆ ನೀಡಿದ ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲಗೆ ಮಸಿ

ಮುಂಬೈ: ಡಾ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಕರ್ಮವೀರ ಭೈರವ್ ಪಾಟೀಲ್ ಅವರ ಬಗ್ಗೆ ಹೇಳಿಕೆ ನೀಡಿದ ಒಂದು ದಿನದ  ನಂತರ ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ ಅವರ ಮೇಲೆ ಪುಣೆಯ ಪಿಂಪ್ರಿ ಉಪನಗರದಲ್ಲಿ ಶನಿವಾರ ಮಸಿ ಎರಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಟೀಲ ಮೇಲೆ ಮಸಿ ಎಸೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಂಪ್ರಿ ಚಿಂಚ್‌ವಾಡಾ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ ತಿಳಿಸಿದ್ದಾರೆ.
ಚಂದ್ರಕಾಂತ ಪಾಟೀಲ ಅವರು ಮೋರ್ಯ ಗೋಸಾವಿ ಹಬ್ಬಕ್ಕೆ ಪಿಂಪ್ರಿ-ಚಿಂಚವಾಡಕ್ಕೆ ಬಂದಿದ್ದರು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕಾರ್ಯಕರ್ತರ ಮನೆಯಲ್ಲಿ ತಂಗಿದ್ದರು. ಕಾರ್ಯಕರ್ತನ ಮನೆಯಿಂದ ಹೊರ ಬರುವಾಗ ಚಂದ್ರಕಾಂತ ಪಾಟೀಲ ಮೇಲೆ ಮಸಿ ಎರಚಲಾಗಿದೆ.

ಪಾಟೀಲ ಶುಕ್ರವಾರ ಸಮಾರಂಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಕರ್ಮವೀರ ಭೈರವ ಪಾಟೀಲ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆದಿದ್ದವು.

ಇಂದು ಶನಿವಾರ, ಪಿಂಪ್ರಿ ಚಿಂಚ್‌ವಾಡ್‌ನ ಕಟ್ಟಡವೊಂದರಿಂದ ಹೊರಬಂದ ಬಿಜೆಪಿ ನಾಯಕನ ಕಡೆಗೆ ನೀಲಿ ಶರ್ಟ್‌ನ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆರೋಪಿಗಳು ಚಂದ್ರಕಾಂತ ಪಾಟೀಲ ಅವರ ಮುಖಕ್ಕೆ ಕಪ್ಪು ಮಸಿ ಎರಚುತ್ತಿರುವುದನ್ನು ಕಾಣಬಹುದು.
ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, ನಾನು ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ನಾನು ಚಳುವಳಿಯ ಮನುಷ್ಯ, ಯಾರಿಗೂ ಹೆದರುವುದಿಲ್ಲ. ಇದು ಹೇಡಿತನ. ಇದೆಲ್ಲವನ್ನೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೋಡುತ್ತಾರೆ ಎಂದು ಚಂದ್ರಕಾಂತ ಪಾಟೀಲ ಹೇಳಿದರು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement