ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬೆಂಬಲ

ನವದೆಹಲಿ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದನ್ನು ಬೆಂಬಲಿಸಿದ್ದಾರೆ ಮತ್ತು ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಯಾರೇ ಆದರೂ ಅದನ್ನು ಎಂದಿಗೂ ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ಕುರಿತು ಅಭಿಪ್ರಾಯ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಂವಿಧಾನದ ಮೇಲೆ ಪ್ರಮಾಣ ಮಾಡಿದವರು ಏಕರೂಪ ನಾಗರಿಕ ಬೇಡ ಎಂದು ಹೇಳುವುದಿಲ್ಲ ಎಂದರು. “ಹಿಂದೂ ಕೋಡ್ ಈಗಾಗಲೇ ಇದೆ, ಅದು ಹಿಂದೂಗಳು, ಸಿಖ್ ಮತ್ತು ಜೈನರಲ್ಲಿ ಏಕರೂಪತೆಯನ್ನು ತಂದಿದೆಯೇ? ನಮ್ಮದು ವೈವಿಧ್ಯತೆಯ ದೇಶ ಎಂದು ಅಜೆಂಡಾ ಆಜ್ ತಕ್ ಕಾರ್ಯಕ್ರಮದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದರು.
“ಏಕರೂಪ ನಾಗರಿಕ ಸಂಹಿತೆ ಮದುವೆಗಳು ಅಥವಾ ಸಂಪ್ರದಾಯಗಳ ಬಗ್ಗೆ ಅಲ್ಲ … ಇದು ಸಮಾನ ನ್ಯಾಯದ ಬಗ್ಗೆ.” ‘ಇಬ್ಬರು ಪತ್ನಿಯರನ್ನು ಮದುವೆಯಾಗಲು ಮತಾಂತರಗೊಂಡ ಪ್ರಕರಣಗಳಿವೆ, ನಾನು ಯಾರ ಹೆಸರನ್ನೂ ಹೇಳುವುದಿಲ್ಲ’ ಎಂದು ಅವರು ಹೇಳಿದರು.
ಹಿಜಾಬ್ ಬಗ್ಗೆ ಇತ್ತೀಚಿನ ವಿವಾದದ ಕುರಿತು ಅವರು, “ಬುರ್ಖಾ ಧರಿಸುವುದನ್ನು ನಿಲ್ಲಿಸುವವರು ಯಾರು? ಇದು ಸ್ವತಂತ್ರ ರಾಷ್ಟ್ರವಾಗಿದೆ. ಆದರೆ ಸಂಸ್ಥೆಗಳಿಗೆ ತಮ್ಮ ಡ್ರೆಸ್ ಕೋಡ್ ಅನ್ನು ಹೊಂದುವ ಹಕ್ಕಿದೆ ಎಂದು ಹೇಳಿದರು. ಹಿಜಾಬ್ ಅನ್ನು ಅನುಮತಿಸುವ ಸಂಸ್ಥೆಗಳಿವೆ, ಹಿಜಾಬ್‌ ಧರಿಸುವವರು ಅಲ್ಲಿಗೆ ಹೋಗಬಹುದು” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

ಕಾನೂನು ರಚಿಸುವುದು ದೊಡ್ಡ ವಿಷಯವಲ್ಲ, ಭವಿಷ್ಯದಲ್ಲಿ ಸಂಸತ್ತಿನಲ್ಲಿ ಕಾನೂನನ್ನು ಬದಲಾಯಿಸಬಹುದು ಎಂದು ನಾನು ಹೇಳಿದ್ದೆ … ಆದರೆ ದೇಶದ ವಿರುದ್ಧ ಮಾತನಾಡುವವರು, ಹಿಂಸೆಯನ್ನು ಬೆಂಬಲಿಸುವವರು, ಅವರಿಗೆ ತಲೆಬಾಗುವುದು ನನ್ನ ಪ್ರಕಾರ ರಾಷ್ಟ್ರದ ವಿರುದ್ಧದ ಅಪರಾಧ ಎಂದು ಅವರು ಹೇಳಿದರು.
1947ರ ಮೊದಲು, ಅವರು ಎರಡು ರಾಷ್ಟ್ರಗಳಿವೆ ಎಂದು ಹೇಳಿದರು, 1986ರಲ್ಲಿ ಆ ಚಿಂತನೆಯ ಉತ್ತರಾಧಿಕಾರಿಗಳು ನಮಗೆ ಪ್ರತ್ಯೇಕ ಗುರುತು ಇದೆ ಎಂದು ಹೇಳಿದರು. ನನ್ನ ನಿಲುವು ಆ ಪ್ರತ್ಯೇಕ ಗುರುತಿನ ವಿರುದ್ಧವಾಗಿತ್ತು. ನಾನು ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ನನ್ನ ಆಲೋಚನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇರಳದ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಹೇಳಿದರು.
ಇದು ತುಷ್ಟೀಕರಣದ ರಾಜಕಾರಣವೇ ಎಂದು ಪ್ರಶ್ನಿಸಿದಾಗ ಅವರು, ಇದು ಒಂದು ನಿರ್ದಿಷ್ಟ ವರ್ಗದ ತುಷ್ಟೀಕರಣವಾಗಿದೆ, ಸಮುದಾಯವು ಒಟ್ಟಾರೆಯಾಗಿ ಅದರಿಂದ ಬಳಲುತ್ತಿದೆ ಎಂದು ಹೇಳಿದರು.

ಇತ್ತೀಚೆಗೆ ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯಿಂದ ಅವರನ್ನು ತೆಗೆದುಹಾಕಿದ್ದಕ್ಕೆ ಮತ್ತು ಮಲ್ಲಿಕಾ ಸಾರಾಭಾಯ್ ಅವರನ್ನು ನೇಮಿಸಿದ್ದಕ್ಕೆ ಪ್ರತಿಕ್ರಿಯಿಸಿದ ಖಾನ್, ತಮ್ಮ ಉತ್ತರಾಧಿಕಾರಿಯನ್ನು ಅಭಿನಂದಿಸಿದರು ಮತ್ತು ರಾಜ್ಯ ಸರ್ಕಾರವು ಅವರ ಕೆಲಸದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಅವರು ಕಲಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಅವರ ಯಶಸ್ಸನ್ನು ಬಯಸುತ್ತೇನೆ ಮತ್ತು ಅವರ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕೇರಳದಲ್ಲಿ 15 ವಿಶ್ವವಿದ್ಯಾಲಯಗಳಿದ್ದು, ನಾನೇ ಕುಲಪತಿ, ಇದೊಂದು ಚಿಕ್ಕ ಸಂಸ್ಥೆಯಾಗಿತ್ತು. ಸರ್ಕಾರದ ಕೆಲಸದಲ್ಲಿ ನಾನು ಮಧ್ಯಪ್ರವೇಶಿಸಿದ್ದಕ್ಕೆ ನನಗೆ ಒಂದು ನಿದರ್ಶನ ನೀಡಿ, ನಾನು ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement