ಫ್ಯಾಶನ್‌ ಡಿಸೈನರ್‌ ಪ್ರಸಾದ ಬಿದ್ದಪ್ಪ ಮಗಳ ಜೊತೆ ಅಭಿಷೇಕ ಅಂಬರೀಶ ಮದುವೆ ನಿಶ್ಚಿತಾರ್ಥ

posted in: ರಾಜ್ಯ | 0

ರೆಬೆಲ್‌ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ ಅವರು ಶೀಘ್ರದಲ್ಲಿ ಸಪ್ತಪದಿ ತುಳಿಯಲಿದ್ದು, ಅವರ ಮದುವೆ ನಿಶ್ಚಿತಾರ್ಥವು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಜೊತೆ ಇಂದು, ಭಾನುವಾರ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ನಡೆಯಿತು.
ಆಪ್ತರ ಸಮ್ಮುಖದಲ್ಲಿ ಅಭಿಷೇಕ್‌ ಅಂಬರೀಶ ಮತ್ತು ಅವಿವಾ ಬಿದ್ದಪ್ಪ ಜೊತೆ ಎಂಗೇಜ್‌ಮೆಂಟ್‌ ನಡೆದಿದ್ದು, ತಾಯಿ ಸುಮಲತಾ ಅಂಬರೀಶ, ಅವಿವಾ ಅವರ ತಂದೆ-ತಾಯಿ ಹಾಗೂ ಎರಡೂ ಕುಟುಂಬದ ಸದಸ್ಯರು ಹಾಗೂ ಕೆಲವೇ ಕೆಲವು ಮಂದಿ ಆಪ್ತರು ಮಾತ್ರ ಈ ಸಮಾರಂಭಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದ್ದಾರೆ. ಅವಿವಾ ಮತ್ತು ಅಭಿಷೇಕ ಹಲವು ವರ್ಷಗಳಿಂದ ಸ್ನೇಹಿತರು. ಅವಿವಾ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದು, ಫ್ಯಾಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಮದುವೆಯಾಗುತ್ತಿದ್ದು, ಮದುವೆ ಮುಂದಿನ ವರ್ಷ ನಡೆಯಲಿದೆ ಎಂದು ಹೇಳಲಾಗಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   ಅಂಚೆ ಇಲಾಖೆಯಿಂದ 40,889 ಹುದ್ದೆಗಳಿಗೆ ಅರ್ಜಿ ಆಹ್ವಾನ : ಕರ್ನಾಟಕದಲ್ಲೂ 3036 ಹುದ್ದೆಗಳಿಗೆ ನೇಮಕ: ಎಸ್‌ಎಸ್‌ಎಲ್‌ಸಿ ಆದವರು ಅರ್ಜಿ ಅರ್ಜಿ ಸಲ್ಲಿಸಬಹುದು

3.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement