ಟ್ರಾಫಿಕ್ ಪೊಲೀಸ್ ಕಾರಿನ ಬಾನೆಟ್‌ ಮೇಲಿದ್ದಾಗಲೇ 4 ಕಿಮೀ ವರೆಗೆ ಕಾರು ಚಲಾಯಿಸಿಕೊಂಡು ಎಳೆದೊಯ್ದ ವ್ಯಕ್ತಿ | ವೀಕ್ಷಿಸಿ

ಇಂದೋರ್ : ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸೋಮವಾರ ಮೊಬೈಲ್ ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಚಾಲಕನನ್ನು ಅಡ್ಡಗಟ್ಟಿದ ನಿಲ್ಲಿಸುವಂತೆ ಹೇಳಿದ ನಂತರ ಕಾರಿನ ಬಾನೆಟ್ ಮೇಲೆ ಪೊಲೀಸ್‌ ಕುಳಿತಿರುವ ಸ್ಥಿತಿಯಲ್ಲಿ ಅಪಾಯಕಾರಿಯಾಗಿ ಕಾರು ಚಾಲನೆ ಮಾಡಿಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸತ್ಯ ಸಾಯಿ ಛೇದಕದಲ್ಲಿ ಈ ಘಟನೆ ನಡೆದಿದ್ದು, ಟ್ರಾಫಿಕ್ ಹೆಡ್ ಕಾನ್‌ಸ್ಟೇಬಲ್ ಶಿವಸಿಂಗ್ ಚೌಹಾಣ್ (50) ಕಾರು ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ ನಂತರ ಕಾರನ್ನು ಕೈಬೀಸಿ ನಿಲ್ಲಿಸಲು ಸೂಚಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ದಂಡ ಪಾವತಿಸುವಂತೆ ಕೇಳಿದಾಗ ಕೋಪಗೊಂಡ ಆರೋಪಿಯು ಕಾರನ್ನು ಸುಮಾರು 4 ಕಿ.ಮೀ ದೂರದವರೆಗೆ ಬಾನೆಟ್‌ ಮೇಲೆ ಪೊಲೀಸ್‌ ಇದ್ದ ಸ್ಥಿತಿಯಲ್ಲಿಯೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ ಎಂದು ಅವರು ಹೇಳಿದರು.
ವೇಗವಾಗಿ ಬಂದ ವಾಹನವನ್ನು ನಿಲ್ಲಿಸಲು ಮತ್ತು ಚಾಲಕನನ್ನು ಹಿಡಿಯಲು ಪೊಲೀಸರು ವಾಹನವನ್ನು ತಮ್ಮ ವಾಹನದ ಮೂಲಕ ಅಡ್ಡಗಟ್ಟಬೇಕಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಆರೋಪಿ ಚಾಲಕನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅದುರಿತ ಚಾಲನೆ), 332 (ಸ್ವಯಂಪ್ರೇರಿತವಾಗಿ ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕನಿಗೆ ಗಾಯಗೊಳಿಸುವುದು) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಲಸುಡಿಯಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆರ್‌.ಎಸ್. ದಂಡೋತಿಯಾ ತಿಳಿಸಿದ್ದಾರೆ.
ಗ್ವಾಲಿಯರ್ ನಿವಾಸಿಯಾಗಿರುವ ಆರೋಪಿಯಿಂದ ಪಿಸ್ತೂಲ್ ಮತ್ತು ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಶಸ್ತ್ರಾಸ್ತ್ರಗಳು ಪರವಾನಗಿ ಪಡೆದಿವೆ ಎಂದು ಆರೋಪಿ ಹೇಳಿಕೊಂಡಿದ್ದಾನೆ ಮತ್ತು ನಾವು ಅದನ್ನು ತನಿಖೆ ಮಾಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.
ಹೆಡ್ ಕಾನ್‌ಸ್ಟೇಬಲ್ ಚೌಹಾಣ್ ಅವರು ಮಾತನಾಡಿ, “ಸತ್ಯ ಸಾಯಿ ಸ್ಕ್ವೇರ್‌ನಲ್ಲಿ ಕರ್ತವ್ಯದಲ್ಲಿರುವಾಗ, ಡ್ರೈವರ್ ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರಿಂದ ಕಾರನ್ನು ನಿಲ್ಲಿಸಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ತೆರಬೇಕಾಗುತ್ತದೆ ಎಂದು ನಾನು ಅವನಿಗೆ ಹೇಳಿದಾಗ, ಅವನು ನಿರಾಕರಿಸಿದ. ಮತ್ತು ನನಗೆ ಬೆದರಿಕೆ ಹಾಕಿದ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

ಆರೋಪಿಯು ಕಾರನ್ನು ಓಡಿಸಲು ಪ್ರಾರಂಭಿಸಿದಾಗ, ತಾನು ಬಾನೆಟ್ ಮುಂದೆ ನಿಂತೆ. ಆದರೂ ಒಮ್ಮೆಲೇ ಚಾಲನೆ ಮಾಡಿದಾಗ ಅನಿವಾರ್ಯವಾಗಿ ಕಾರಿನ ಬಾನೆಟ್‌ ಹಿಡಿದುಕೊಂಡೆ ಎಂದು ಅವರು ಹೇಳಿದರು. ಆದರೆ ಪೊಲೀಸರು ಅಡ್ಡಗಟ್ಟುವ ವರೆಗೆ ಸುಮಾರು 4 ಕಿಮೀ ವರೆಗೆ ನಾನು ಕಾರಿನ ಬಾನೆಟ್‌ ಮೇಲೆ ಇರುವಾಗಲೇ ಕಾರು ಚಲಾಯಿಸಿದ್ದಾನೆ ಎಂದು ತಿಳಿಸಿದರು.
ಆರೋಪಿಯು ಇದ್ದಕ್ಕಿದ್ದಂತೆ ಬ್ರೇಕ್ ಹಾಕುವ ಮೂಲಕ ನನ್ನನ್ನು ಬೀಳುವಂತೆ ಮಾಡಲು ಪ್ರಯತ್ನಿಸಿದನು. ಅವನು ಕಾರನ್ನು ರಸ್ತೆಯ ಇತರ ವಾಹನಗಳಿಗೆ ಬಹಳ ಹತ್ತಿರದಿಂದ ಓಡಿಸಿದನು, ಆದರೆ ನಾನು ಬಾನೆಟ್‌ ಮೇಲಿದ್ದರೂ ಬಿಗಿಯಾಗಿ ಹಿಡಿದಿದ್ದೆ ಎಂದು ಚೌಹಾಣ್ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement