ಲಂಚ ಪ್ರಕರಣ: ವಿಚಕ್ಷಣ ದಳದ ಕೈಗೆ ಸಿಕ್ಕಿಬಿದ್ದ ತಕ್ಷಣ ನೋಟು ನುಂಗಿದ ಪೊಲೀಸ್‌ | ದೃಶ್ಯ ವೀಡಿಯೊದಲ್ಲಿ ಸೆರೆ

ಹರ್ಯಾಣದ ಫರಿದಾಬಾದ್‌ನಲ್ಲಿ ವಿಚಕ್ಷಣದ ದಳದ (ವಿಜಿಲೆನ್ಸ್) ಅಧಿಕಾರಿಗಳ ತಂಡವು ಎಮ್ಮೆ ಕಳ್ಳತನ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ನಂತರ ನಡೆದಿದ್ದು ತನಿಖಾ ಸಂಸ್ಥೆಗೂ ಅಚ್ಚರಿ ಮೂಡಿಸಿದೆ.
ಘಟನೆಯ ವೀಡಿಯೋ ಹೊರಬಿದ್ದಿದ್ದು, ಸಬ್ ಇನ್ಸ್‌ಪೆಕ್ಟರ್  ಅವರನ್ನು ವಿಜಿಲೆನ್ಸ್ ಇಲಾಖೆ ಅಧಿಕಾರಿಗಳು ಹಿಡಿದಿದ್ದಾರೆ. ಆದರೆ ಆ ಸಬ್ ಇನ್ಸ್‌ಪೆಕ್ಟರ್ ವಿಚಕ್ಷಣ ದಳದ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಲಂಚ ಪಡೆದಿದ್ದ ನೋಟುಗಳನ್ನೆಲ್ಲ ನುಂಗಿದ್ದಾರೆ..! ಆಗ ವಿಚಕ್ಷಣ ದಳದ ಅಧಿಕಾರಿಗಳು ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ಅವರನ್ನು ನೆಲಕ್ಕೆ ಕೆಡಹಿ ನುಂಗಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸುವುದು ವೀಡಿಯೊದಲ್ಲು ಕಂಡುಬರುತ್ತದೆ.

ವೀಡಿಯೊದಲ್ಲಿ, ಪೊಲೀಸ್ ಅಧಿಕಾರಿಯನ್ನು ನೆಲದ ಮೇಲೆ ಬೀಳಿಸಿದ ನಂತರ ವಿಚಕ್ಷಣದ ದಳದ ಅಧಿಕಾರಿಯೊಬ್ಬರು ನುಂಗಿದ ಹಣವನ್ನು ವಾಪಸ್‌ ಪಡೆಯಲು ಸಬ್ ಇನ್ಸ್‌ಪೆಕ್ಟರ್ ಬಾಯಿಗೆ ಬೆರಳು ಹಾಕುವುದು ಕಂಡುಬರುತ್ತದೆ. ಆದರೆ ಸಬ್ ಇನ್ಸ್‌ಪೆಕ್ಟರ್‌ನ ತೀವ್ರ ಪ್ರತಿರೋಧದಿಂದಾಗಿ ಆ ಅಧಿಕಾರಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ, ಆಗ ಇನ್ನೊಬ್ಬ ವ್ಯಕ್ತಿ ಈ ವೇಳೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆಗ ಇನ್ನೊಬ್ಬ ವಿಜಿಲೆನ್ಸ್ ಅಧಿಕಾರಿ ಆತನನ್ನು ತಳ್ಳುವುದು ಕಂಡುಬರುತ್ತದೆ.
ಎಮ್ಮೆ ಕಳ್ಳತನ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ ವ್ಯಕ್ತಿಯೊಬ್ಬರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ತನ್ನ ಮನೆಯ ಎಮ್ಮೆ ಕಳುವಾದ  ರೈತ  ಶುಭನಾಥ್‌ ಎಂಬಾತನ ಬಳಿ ಈ ಪೊಲೀಸ್‌ ಅಧಿಕಾರಿ ₹ 10,000 ಬೇಡಿಕೆ ಇಟ್ಟಿದ್ದರು ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

ಈಗಾಗಲೇ ಅಧಿಕಾರಿಗೆ ₹ 6,000 ನೀಡಲಾಗಿತ್ತು, ಆದರೆ ಉಳಿದ ಮೊತ್ತವನ್ನು ನೀಡುವ ಮೊದಲು, ಶುಭನಾಥ್ ಅಧಿಕಾರಿ ವಿರುದ್ಧ ವಿಜಿಲೆನ್ಸ್ ಇಲಾಖೆಗೆ ದೂರು ನೀಡಿದ್ದರು.ವಿಜಿಲೆನ್ಸ್ ಅಧಿಕಾರಿಗಳು ಈ ಪೊಲೀಸ್‌ ಅಧಿಕಾರಿಯನ್ನು ಹಿಡಿಯಲು ಯೋಜಿಸಿದ್ದರು ಹಾಗೂ ಯೋಜನಾ ಬದ್ಧವಾಗಿ ಅದಕ್ಕೆ ಬಲೆ ಬೀಸಲಾಯಿತು ಮತ್ತು ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು.

3.5 / 5. 2

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement