ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದಿಂದ ನಡೆಸಲಾಗಿದ್ದ 2022ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2022) ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗಿದೆ.
ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ತಿಳಿಸಿದ್ದಾರೆ.
ನವೆಂಬರ್‌ 6 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಯಿತು. ಅರ್ಹತಾ ಪರೀಕ್ಷೆ ಪತ್ರಿಕೆ-1 (1 ರಿಂದ 5 ನೇ ತರಗತಿ ಬೋಧಿಸುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು) ಮತ್ತು ಪತ್ರಿಕೆ -2 (6 ರಿಂದ 8ನೇ ತರಗತಿ ಬೋಧಿಸುವ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು) ನಡೆಸಲಾಯಿತು.

ಈ ಪರೀಕ್ಷೆಯ ಪತ್ರಿಕೆ-1ಕ್ಕೆ 1,40,790 ಅಭ್ಯರ್ಥಿಗಳು ಹಾಜರಾಗಿದ್ದು, 20,070 ಆಭ್ಯರ್ಥಿಗಳು ಅರ್ಹರಾಗಿದ್ದಾರೆ. ಪತ್ರಿಕೆ-2ಕ್ಕೆ 1,92,066 ಅಭ್ಯರ್ಥಿಗಳು ಹಾಜರಾಗಿದ್ದು, ಅದರಲ್ಲಿ 41,857 ಅಭ್ಯರ್ಥಿಗಳು ಅರ್ಹರಾಗಿದ್ದಾರೆ ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 3,37,856 ಅಭ್ಯರ್ಥಿಗಳಲ್ಲಿ 61,927 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ವಿಶೇಷ ವರ್ಗಕ್ಕೆ ಶೇ.55 ಅರ್ಹತಾ ಅಂಕ:
ಪ್ರಶ್ನೆ ಪತ್ರಿಕೆಯ ಕೀ-ಉತ್ತರಗಳನ್ನು ಆಧರಿಸಿ, ಒ.ಎಂ.ಆರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶಗಳನ್ನು ಲೆಕ್ಕಾಚಾರ ಮಾಡಿದೆ. ಅದರಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಹತೆ ಪಡೆಯಲು ಶೇ.60 ರಷ್ಟು ಅರ್ಹತಾ ಅಂಕಗಳು ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಹತೆ ಪಡೆಯಲು ಶೇ.55 ರಷ್ಟು ಅರ್ಹತಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸಲಾಗಿದೆ. ವೆಬ್​ ಸೈಟ್​ https://sts.karnataka.gov.in/TET/  ನಲ್ಲಿ TET ಫಲಿತಾಂಶ ನೋಡಬಹುದಾಗಿದೆ

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಫಲಿತಾಂಶ ಚೆಕ್‌ ಮಾಡುವ ವಿಧಾನ
ಶಿಕ್ಷಣ ಇಲಾಖೆಯ http://www.schooleducation.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
ತೆರೆದ ಹೋಮ್ ಪೇಜ್‌ನಲ್ಲಿ’KARTET-2022 Results’  ಎಂಬಲ್ಲಿ ಕ್ಲಿಕ್‌ ಮಾಡಿ.
ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿಯನ್ನು ನೀಡಿ ‘Submit’ ಎಂಬಲ್ಲಿ ಕ್ಲಿಕ್ ಮಾಡಿರಿ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement