ಮಂಗಳೂರು ಆಟೋ ಸ್ಫೋಟ ಪ್ರಕರಣ : ತನಿಖೆ ಮಾಡದೆ ಉಗ್ರಗಾಮಿ ಎಂದು ಹೇಗೆ ಹೇಳಿದ್ರಿ ಎಂದು ಡಿಕೆ ಶಿವಕುಮಾರ ಪ್ರಶ್ನೆ

ಬೆಂಗಳೂರು: ಕಳೆದ ತಿಂಗಳು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ತನಿಖೆ ನಡೆಸದೆ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು “ಭಯೋತ್ಪಾದಕ” ಎಂದು ಕರೆದಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಶ್ನಿಸಿದ್ದಾರೆ.
ಪ್ರೆಸ್‌ ಕ್ಲಬ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣವು ಮುಂಬೈ ದಾಳಿ ಅಥವಾ ಪುಲ್ವಾಮಾ, ಕಾಶ್ಮೀರದಲ್ಲಿ ಆದಂತೆ ಆಗಲಿಲ್ಲ. ಕುಕ್ಕರ್ ಟೆರರಿಸ್ಟ್ ಎಂದು ಹೇಳಿಕೊಂಡು ವೋಟರ್ ಐಡಿ ಹಗರಣವನ್ನು ಮುಚ್ಚಿ ಹಾಕಿದರು. ತನಿಖೆ ನಡೆಸದೇ ಇದು ಉಗ್ರ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹೇಗೆ ಟ್ವೀಟ್ ಮಾಡಿದರು ಎಂದು ಪ್ರಶ್ನಿಸಿದ್ದಾರೆ.

ಯಾರು ಈ ಭಯೋತ್ಪಾದಕರು? ಏನು ಕ್ರಮ ಕೈಗೊಳ್ಳಲಾಗಿದೆ? ತನಿಖೆಯಿಲ್ಲದೆ ಅವರು ಒಬ್ಬರನ್ನು ಭಯೋತ್ಪಾದಕರೆಂದು ಹೇಗೆ ಕರೆಯುತ್ತಾರೆ? ಇದು ಮುಂಬೈ, ದೆಹಲಿ, ಪುಲ್ವಾಮಾದಲ್ಲಿ ನಡೆದಂತಹ ಭಯೋತ್ಪಾದಕ ಕೃತ್ಯವೇ?” ಎಂದು ಡಿ.ಕೆ. ಶಿವಕುಮಾರ ಗುರುವಾರ ಪ್ರಶ್ನಿಸಿದ್ದಾರೆ.
“ಕೆಲವರು ತಪ್ಪು ಮಾಡಿರಬಹುದು. ಆದರೆ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
ಬಿಜೆಪಿ ಈ ಘಟನೆಯನ್ನು ಮತ ಸೆಳೆಯಲು ಬಳಸಿಕೊಂಡಿದೆ. ಮತ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಇದು ಹೆಚ್ಚು ಮತ ಗಳಿಸುವ ಅವರ ತಂತ್ರವಷ್ಟೇ. ಇಂತಹ ಪ್ರಯೋಗವನ್ನು ಯಾರೂ ಮಾಡಿಲ್ಲ, ಇದು ನಾಚಿಕೆಗೇಡು ಎಂದು ಡಿ.ಕೆ. ಶಿವಕುಮಾರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement