ವ್ಯಕ್ತಿಯ ಮೇಲೆಯೇ ಹರಿದು ಹೋದ ಬಸ್‌ : ಮ್ಯಾಜಿಕ್‌ ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ಪಾರಾದ ವ್ಯಕ್ತಿ | ವೀಕ್ಷಿಸಿ

ಮುಂಬೈ:ಬೆಚ್ಚಿಬೀಳಿಸುವ ವೀಡಿಯೊದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಕೆಳಗೆ ಸಿಲುಕಿದ ವಯೋವೃದ್ಧನೊಬ್ಬ ಜಾದು ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಮುಂಬೈನ ಪೊವೈ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿಗಳು ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕುರ್ತಾ-ಪೈಜಾಮಾ ಧರಿಸಿದ್ದ ವ್ಯಕ್ತಿಯೊಬ್ಬ ಆ ಪ್ರದೇಶದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ಒಂದು ಕಡೆಯಿಂದ ಬಸ್‌ ಒಂದು ಆತನಿಗೆ ಡಿಕ್ಕಿ ಹೊಡೆದು ಆತ ಬಸ್ಸಿನ ಕೆಳಗೆ ಬೀಳುವುದನ್ನು ವೀಡಿಯೊ ತೋರಿಸುತ್ತದೆ. ನಂತರ ಬಸ್‌ ಆತನ ಮೇಲೆ ಹಾದು ಹೋಗುತ್ತದೆ. ವ್ಯಕ್ತಿ ಬಸ್‌ ಅಡಿಗೆ ಸಿಲುವುದನ್ನು ನೋಡಿ ಜನರು ಬೊಬ್ಬೆ ಹೊಡೆದಿದ್ದಾರೆ. ಬಸ್ಸಿನಡಿ ಸಿಲುಕಿಕೊಂಡ ವ್ಯಕ್ತಿ ಸ್ವಲ್ಪ ಹೊತ್ತಿನ ನಂತರ ಎದ್ದು ಬಂದಿದ್ದಾನೆ. ಮುಂಬೈ ಪೂವೈ ಲೇಕ್ ಸೈಡ್ ಕಾಂಪ್ಲೆಕ್ಸ್ ಬಳಿಯ ಎವರೆಸ್ಟ್ ಹೈಟ್ಸ್ ಕಟ್ಟಡದ ಹೊರಗೆ ಮಂಗಳವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಹಲವಾರು ಬಳಕೆದಾರರು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. 47 ಸೆಕೆಂಡುಗಳ ವೀಡಿಯೊವು ಪೊವೈ ಪ್ರದೇಶದಲ್ಲಿ ಜನನಿಬಿಡ ರಸ್ತೆಯನ್ನು ತೋರಿಸುವುದರೊಂದಿಗೆ ಪ್ರಾರಂಭವಾಗುತ್ತದೆ, ಸಾಕಷ್ಟು ಕಾರುಗಳು ಮತ್ತು ಆಟೋರಿಕ್ಷಾಗಳು ರಸ್ತೆಯನ್ನು ದಾಟುತ್ತವೆ. ಟ್ರಾಫಿಕ್‌ನಿಂದಾಗಿ ಬಸ್ ಕೂಡ ರಸ್ತೆಯ ಒಂದು ಬದಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬರುತ್ತದೆ.
ಕೆಲವು ಸೆಕೆಂಡುಗಳ ನಂತರ, ವಯಸ್ಸಾದ ವ್ಯಕ್ತಿ ರಸ್ತೆ ದಾಟಲು ಪ್ರಯತ್ನಿಸುತ್ತಾನೆ. ಆದರೆ ಟ್ರಾಫಿಕ್ ಹರಿವನ್ನು ನೋಡಿ, ರಸ್ತೆ ಮಧ್ಯೆ ನಿಲ್ಲುತ್ತಾನೆ. ಆದರೆ ಬಸ್ ಚಾಲಕ, ವಾಹನದ ಮುಂದೆ ನಿಂತಿರುವ ವ್ಯಕ್ತಿಯ ಬಗ್ಗೆ ತಿಳಿಯದೆ, ಬಸ್‌ ಅನ್ನು ಚಾಲನೆ ಮಾಡಿಕೊಂಡು ಮುಂದೆ ಬಂದಿದ್ದಾನೆ. ವ್ಯಕ್ತಿ ಬಸ್ಸಿನ ಕೆಳಗೆ ಹೋಗುತ್ತಿರುವುದು ಮತ್ತು ಇತರರು ಹಾಗೂ ಕಾರು ಚಾಲಕರು ಕೂಗುತ್ತಿರುವುದನ್ನು ಕಾಣಬಹುದು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಬಸ್ ಚಾಲಕ ತಕ್ಷಣವೇ ವಾಹನವನ್ನು ನಿಲ್ಲಿಸಿ ಬಾಗಿಲು ತೆರೆದು ವ್ಯಕ್ತಿ ಜೀವಂತವಾಗಿದ್ದಾನೆಯೇ ಎಂದು ಪರಿಶೀಲಿಸಿದ್ದಾನೆ. ಅದ್ಭುತವೆಂಬಂತೆ, ವಯಸ್ಸಾದ ವ್ಯಕ್ತಿ ಬಸ್ಸಿನಡಿಯಿಂದ ಪ್ರಾಣಾಪಾಯದಿಂದ ಪಾರಾಗಿ ಕಾಣಿಸಿಕೊಂಡಿದ್ದಾನೆ ಮತ್ತು ವೀಡಿಯೊದ ಕೊನೆಯಲ್ಲಿ ಚಾಲಕನ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement