‘ನಾಲ್ಕು’ ಕಾಲುಗಳುಳ್ಳ ಹೆಣ್ಣು ಮಗುವಿಗೆ ಜನ್ಮ ನೀಡಿ ಮಹಿಳೆ

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ‘ನಾಲ್ಕು’ ಕಾಲುಗಳುಳ್ಳ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಈ ಮಗು ಜನರ ಕುತೂಹಲದ ಕೇಂದ್ರ ಬಿಂದುವಾಗಿದೆ.
ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಅವರು ಬುಧವಾರ ಇಲ್ಲಿನ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಮಕ್ಕಳ ವಿಭಾಗದಲ್ಲಿ ಈ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೆಣ್ಣು ಮಗುವಿನ ತೂಕ 2.3 ಕೆ.ಜಿ. ಇದೆ. ಜನನದ ನಂತರ, ಗ್ವಾಲಿಯರ್‌ನ ಜಯರೋಗ್ಯ ಹಾಸ್ಪಿಟಲ್ ಗ್ರೂಪ್‌ನ ಸೂಪರಿಂಟೆಂಡೆಂಟ್ ಜೊತೆಗೆ ವೈದ್ಯರ ತಂಡವು ಶಿಶುವನ್ನು ಪರೀಕ್ಷಿಸಿದೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಅಧೀಕ್ಷಕ ಡಾ ಆರ್‌ಕೆಎಸ್ ಧಕಡ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮಗುವಿಗೆ ಜನಿಸುವಾಗ ನಾಲ್ಕು ಕಾಲುಗಳಿವೆ, ದೈಹಿಕ ವಿಕಲತೆ ಇದೆ. ಕೆಲವು ಭ್ರೂಣಗಳು ಹೆಚ್ಚುವರಿಯಾಗುತ್ತವೆ, ಇದನ್ನು ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಭ್ರೂಣವು ಎರಡು ಭಾಗಗಳಾಗಿ ವಿಭಜನೆಯಾದಾಗ, ದೇಹವು ಎರಡು ಸ್ಥಳಗಳಲ್ಲಿ ಬೆಳವಣಿಗೆಯಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ, ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ಮಕ್ಕಳ ವಿಭಾಗದ ವೈದ್ಯರು ಮಗುವಿನ ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ಅಂಗವಿಕಲತೆ ಇದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಪರೀಕ್ಷೆ ಬಳಿಕ ಮಗು ಆರೋಗ್ಯವಾಗಿರುವುದು ಕಂಡುಬಂದರೆ ಶಸ್ತ್ರಚಿಕಿತ್ಸೆ ಮೂಲಕ ಆ ಕಾಲುಗಳನ್ನು ಹೊರತೆಗೆಯಲಾಗುತ್ತದೆ. ಇದರಿಂದ ಆಕೆ ಸಹಜ ಜೀವನ ನಡೆಸಬಹುದು ಎಂದು ಧಕಡ್ ಹೇಳಿದ್ದಾರೆ.
ಸದ್ಯ ಕಮಲರಾಜ ಆಸ್ಪತ್ರೆಯ ಶಿಶುವೈದ್ಯಕೀಯ ವಿಭಾಗದ ವಿಶೇಷ ನವಜಾತ ನಿಗಾ ಘಟಕದಲ್ಲಿ ಹೆಣ್ಣು ಶಿಶುವನ್ನು ದಾಖಲಿಸಲಾಗಿದೆ. ಶಿಶುವಿನ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಆಕೆಯ ಹೆಚ್ಚುವರಿ ಕಾಲುಗಳನ್ನು ತೆಗೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ಹೆಣ್ಣು ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು ಮತ್ತು ಎರಡು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದರು.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement