ಜರ್ಮನಿಯಲ್ಲಿ ಸಂಭವಿಸಿದ ಮೊಬೈಲ್‌ ಸ್ಫೋಟದಿಂದ ದಾವಣಗೆರೆ ಮೂಲದ ವಿದ್ಯಾರ್ಥಿ ಸಾವು

ಬೆಂಗಳೂರು: ಜರ್ಮನಿಯಲ್ಲಿ ಸಂಭವಿಸಿದ ಮೊಬೈಲ್ ಸ್ಫೋಟದಿಂದ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿ ಕರ್ನಾಟಕದ ದಾವಣಗೆರೆ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ.
ದಾವಣಗೆರೆಯ ಸರಸ್ವತಿ ನಗರದ ಶಿಕ್ಷಕ ದಂಪತಿಯಾದ ರೇವಣಸಿದ್ದಪ್ಪ, ಇಂದಿರಮ್ಮ ಅವರ ಪುತ್ರ ಸಂತೋಷ ಮೃತ ವಿದ್ಯಾರ್ಥಿ.
ಸಂತೋಷ, ಜರ್ಮನ್ ನ ಕೆಮ್ನೀಟ್ಜ್ (CHIMNITZ) ವಿಶ್ವ ವಿದ್ಯಾಲಯದಲ್ಲಿ ಕೆಮ್ನೀಟ್ಜ್ (CHIMNITZ) ಟೆಕ್ನಾಲಜೀಸ್ ನಲ್ಲಿ ಎಂಎಸ್‌ ಓದುತ್ತಿದ್ದ ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ಸಂತೋಷ್ ವಿದ್ಯಾಭ್ಯಾಸಕ್ಕೆ ಜರ್ಮನಿಗೆ ತೆರಳಿದ್ದು, ಕೆಮ್ನೀಟ್ಜ್ ಸಿಟಿಯಲ್ಲಿ ವಾಸವಿದ್ದ ಎನ್ನಲಾಗಿದೆ.. ನವೆಂಬರ್ 30 ರಂದು ಆತನು ವಾಸಿಸುತ್ತಿದ್ದ ರೂಂನಲ್ಲಿ ಚಾರ್ಜಿಂಗ್‌ಗೆ ಇಟ್ಟಿದ್ದ ವೇಳೆ ಮೊಬೈಲ್ ಬ್ಲಾಸ್ಟ್ ಆಗಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ಆಗಿ ದಟ್ಟ ಹೊಗೆ ಆವರಿಸಿದೆ. ಹೀಗಾಗಿ ಉಸಿರುಗಟ್ಟಿ ಸಂತೋಷ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಸಂತೋಷ ಮೃತಪಟ್ಟ 16ನೇ ದಿನಕ್ಕೆ ಮೃತದೇಹ ತವರಿಗೆ ರಾವಾನೆಯಾಗಿದೆ. ನವೆಂಬರ್ 30 ರಂದು ಈ ಘಟನೆ ಸಂಭವಿಸಿದೆ ಎಂದು ಜರ್ಮನಿಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನವೆಂಬರ್ 30 ರ ಬುಧವಾರದಂದು ತಡರಾತ್ರಿ ಅವಘಡ ನಡೆದಿದೆ ಎಂದು ಹೇಳಲಾಗಿದೆ. ಬೆಳಗ್ಗೆ 7:35 ರ ಸಮಯದಲ್ಲಿ ಕೆಮ್ನೀಟ್ಜ್ ಸಿಟಿಯ ಅಪಾರ್ಟ್‌ಮೆಂಟ್‌ನ 6 ನೇ ಮಹಡಿಯಲ್ಲಿನರುವ ವಿದ್ಯಾರ್ಥಿ ರೂಂನಲ್ಲಿ ದಟ್ಟವಾದ ಹೊಗೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ, ರಕ್ಷಣಾ ಸೇವೆಗಳು ಹಾಗೂ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಸಂತೋಷ ಮೃತಪಟ್ಟಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸಂತೋಷ ಸಾವು ಅನುಮಾನಕ್ಕೆಡೆ ಮಾಡಿಕೊಟ್ಟಿದ್ದರಿಂದ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆಂದು ಬ್ಲಿಕ್ ಡಾಟ್ ಡಿ ಎಂಬ ವೆಬ್ ಸೈಟ್ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement