‘ಪಠಾಣ್‌ನ ಬಿಡುಗಡೆ ನಿರ್ಬಂಧಿಸಿ’: ಧಾರ್ಮಿಕ ಭಾವನೆ ಘಾಸಿಗೊಳಿಸಿದ್ದಕ್ಕೆ ಈಗ ಮುಸ್ಲಿಂ ಮಂಡಳಿಯಿಂದ ಶಾರುಖ್ ಖಾನ್ ಸಿನೆಮಾಕ್ಕೆ ವಿರೋಧ

ನವದೆಹಲಿ: ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ‘ಪಠಾಣ್‌’ ಚಿತ್ರವು ಅದರ “ಬೇಷರಂ ರಂಗ್’ ಹಾಡು ಬಿಡುಗಡೆಯಾದಾಗಿನಿಂದ ಹಲವಾರು ವಿವಾದಗಳನ್ನು ಎದುರಿಸುತ್ತಿದೆ.
ಹಿಂದೂ ಸಂಘಟನೆಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಸಿನೆಮಾಕ್ಕೆ ಈಗ, ಮಧ್ಯಪ್ರದೇಶದ ಮುಸ್ಲಿಂ ಉಲೇಮಾ ಮಂಡಳಿಯೂ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಪಠಾಣ್‌ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಮಂಡಳಿ ಒತ್ತಾಯಿಸಿದೆ.
ಚಿತ್ರದಲ್ಲಿನ ಅಸಭ್ಯತೆಯ ಬಗ್ಗೆ ತನಗೆ ಹಲವಾರು ಕರೆಗಳು ಮತ್ತು ದೂರುಗಳು ಬಂದಿವೆ ಎಂದು ಹೇಳಿರುವ ಮಂಡಳಿಯ ಅಧ್ಯಕ್ಷ ಸೈಯದ್ ಅನಸ್ ಅಲಿ, ಚಲನಚಿತ್ರದಲ್ಲಿ ಇಸ್ಲಾಂ ಧರ್ಮವನ್ನು ತಪ್ಪಾಗಿ ಪ್ರಚಾರ ಮಾಡಲಾಗಿದೆ ಎಂದು ಹೇಳಿದ್ದಾರೆ.
ಶಾರುಖ್ ಖಾನ್ ನಾಯಕನಾಗಿ ಪಠಾಣ್ ಎಂಬ ಚಲನಚಿತ್ರವನ್ನು ನಿರ್ಮಿಸಲಾಗಿದೆ, ಜನರು ಅವರನ್ನು ನೋಡುತ್ತಾರೆ, ಆದರೆ ನಮಗೆ ಕರೆಗಳು ಮತ್ತು ದೂರುಗಳು ಬಂದಿವೆ ಮತ್ತು ಈ ಚಿತ್ರದೊಳಗಿನ ಅಶ್ಲೀಲತೆಯ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತು ಇಸ್ಲಾಂ ಅನ್ನು ತಪ್ಪಾಗಿ ಪ್ರಚಾರ ಮಾಡಲಾಗಿದೆ ಎಂದು ಸೈಯದ್ ಅನಾಸ್ ಅಲಿಸ್ ಹೇಳಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಅಖಿಲ ಭಾರತ ಮುಸ್ಲಿಂ ಉತ್ಸವ ಸಮಿತಿಯು ಚಿತ್ರಕ್ಕೆ ಸಂಬಂಧಿಸಿದಂತೆ ನಿಲುವು ತಳೆದಿದೆ ಮತ್ತು ಚಲನಚಿತ್ರವನ್ನು ಬಹಿಷ್ಕರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇಸ್ಲಾಂ ಧರ್ಮವನ್ನು ಯಾರಾದರೂ ಹೇಗೆ ಬೇಕಾದರೂ ಪ್ರಸ್ತುತಪಡಿಸಿದರೆ ಅದರೊಟ್ಟಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸೈಯದ್ ಅನಸ್ ಅಲಿ ಹೇಳಿದ್ದಾರೆ.
ಯಾರಾದರೂ ಇಸ್ಲಾಮಿನ ತಪ್ಪು ವ್ಯಾಖ್ಯಾನವನ್ನು ಪ್ರಸ್ತುತಪಡಿಸಿದರೆ, ನಮ್ಮ ಧರ್ಮದ ಸರಿಯಾದ ವ್ಯಾಖ್ಯಾನವನ್ನು ಪ್ರಸ್ತುತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾನು ಸೆನ್ಸಾರ್ ಮಂಡಳಿಗೆ ಈ ಬಗ್ಗೆ ಪ್ರಬಲವಾಗಿ ಒತ್ತಾಯ ಮಾಡುತ್ತೇನೆ ಮತ್ತು ಈ ಚಿತ್ರವನ್ನು ಎಲ್ಲಿಯೂ ಪ್ರದರ್ಶಿಸಬೇಡಿ ಎಂದು ಭಾರತದಾದ್ಯಂತ ಎಲ್ಲಾ ಚಿತ್ರಮಂದಿರಗಳಿಗೆ ವಿನಂತಿಸಲು ಬಯಸುತ್ತೇನೆ. ಏಕೆಂದರೆ ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ, ಶಾಂತಿ ಕದಡುತ್ತದೆ ಮತ್ತು ಈ ದೇಶದ ಎಲ್ಲಾ ಮುಸ್ಲಿಮರ ಭಾವನೆಗಳಿಗೆ ಘಾಸಿಯಾಗುತ್ತದೆ ಮತ್ತು ನಮ್ಮನ್ನು ಗೇಲಿ ಮಾಡಲಾಗುತ್ತದೆ ಎಂದು ಸೈಯದ್ ಅನಸ್ ಅಲಿ ಹೇಳಿದರು.
ಪಠಾಣ್ ಚಲನಚಿತ್ರ ನೋಡಬೇಡಿ ಎಂದು ‘ಎಲ್ಲರಿಗೂ’ ಮನವಿ ಮಾಡಿದ ಅವರು, “ಇಸ್ಲಾಂ ಮತ್ತು ಮುಸ್ಲಿಮರನ್ನು ಗೇಲಿ ಮಾಡಲು ಇಂತಹ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ, ಅವುಗಳನ್ನು ವಿರೋಧಿಸಬೇಕು. ಪಠಾಣರು ಅತ್ಯಂತ ಗೌರವಾನ್ವಿತ ಸಮುದಾಯ, ಆದರೆ ಸಿನೆಮಾದಲ್ಲಿ ಈ ಸಮುದಾಯವನ್ನು ಅತ್ಯಂತ ತಪ್ಪಾದ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಹೇಳಿದ್ದಾರೆ.
ಶಾರುಖ್ ಖಾನ್‌ಗೆ ಉಮ್ರಾಕ್ಕೆ ಹೋಗಲು ವೀಸಾ ನೀಡದಂತೆ ಹಜ್ ಸಮಿತಿಗೆ ಶಿಫಾರಸು ಮಾಡಿರುವುದಾಗಿ ಸೈಯದ್ ಅನಾಸ್ ಅಲಿ ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಪರಿಸರ ಸ್ನೇಹಿ ಸಂದೇಶ ಸಾರಲು ಪ್ಲಾಸ್ಟಿಕ್‌ ಮರುಬಳಕೆ ಮಾಡಿ ತಯಾರಿಸಿದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3.5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement