ಮತ್ತೊಂದು ಭೀಕರ ಹತ್ಯೆ: ಹೆಂಡತಿಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಪತಿಯ ಬಂಧನ

ರಾಂಚಿ : ದೇಶವು ಶ್ರದ್ಧಾ ವಾಕರ್‌ ಭೀಕರ ಹತ್ಯೆ ಮರೆಯಾಗುವ ಮುನ್ನ, ಜಾರ್ಖಂಡ್‌ನಲ್ಲಿ ಅಂತಹುದೇ ಪ್ರಕರಣವು ವಿಲಕ್ಷಣ ಸಾಮ್ಯತೆಯ ಪ್ರಕರಣವೊಂದು ನಡೆದಿದೆ.
ಬೋರಿಯೊ ಪೊಲೀಸ್ ಠಾಣಾ ವ್ಯಾಪ್ತಿಯ ಜಾರ್ಖಂಡ್‌ನ ಸಾಹೇಬ್‌ಗಂಜ್‌ನಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಇದುವರೆಗೆ ಮೃತದೇಹದ 18 ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೃತಳನ್ನು ರೂಬಿಕಾ ಪಹಾಡಿನ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ದಿಲ್ದಾರ್ ಅನ್ಸಾರಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರುಬಿಕಾ ಮತ್ತು ದಿಲ್ದಾರ್ ಕಳೆದ ಎರಡು ವರ್ಷಗಳಿಂದ ಲಿವ್-ಇನ್-ಸಂಬಂಧದಲ್ಲಿದ್ದರು ಮತ್ತು ಒಂದು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಮಹಿಳೆಯನ್ನು ಕೊಂದ ನಂತರ ಆರೋಪಿ ಮತ್ತು ಆತನ ಕುಟುಂಬದವರು ಬಂಧನದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಾಪತ್ತೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಪತ್ತೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ ನಂತರ ಶನಿವಾರ ಸಂಜೆ ಸಂತಾಲಿ ಮೊಮಿನ್ ತೋಲಾ ಪ್ರದೇಶದ ಹಳೆಯ ಮನೆಯಿಂದ ರುಬಿಕಾ ಅವರ ವಿರೂಪಗೊಂಡ ಶವವನ್ನು ವಶಪಡಿಸಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ.

ಪ್ರಮುಖ ಸುದ್ದಿ :-   ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?
ಬೋರಿಯೊ ಸಂತಾಲಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ಹಿಂದೆ ಮಾನವ ಕಾಲು ಮತ್ತು ದೇಹದ ಇತರ ಭಾಗಗಳು ಪತ್ತೆಯಾದ ನಂತರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಮಾಹಿತಿ ಪಡೆದ ಪೊಲೀಸ್ ಅಧೀಕ್ಷಕ ಅನುರಂಜನ್ ಕಿಸ್ಪೊಟ್ಟ ಮತ್ತು ಇತರ ಪೊಲೀಸ್ ಅಧಿಕಾರಿಗಳು ಶನಿವಾರ ರಾತ್ರಿ ಅಪರಾಧ ಸ್ಥಳಕ್ಕೆ ತಲುಪಿದರು ಮತ್ತು ಸ್ನಿಫರ್ ಡಾಗ್ ಸಹ ಕಾರ್ಯಾಚರಣೆಗೆ ಇಳಿದರು. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಾರ್ಖಂಡ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಪ್ರಕಾರ, ಸಾಹಿಬ್‌ಗಂಜ್‌ನಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 22 ವರ್ಷದ ಮಹಿಳೆಯ ದೇಹದ 18 ಭಾಗಗಳು ಪತ್ತೆಯಾಗಿವೆ. “ದೇಹದ ಕೆಲವು ಭಾಗಗಳು ಇನ್ನೂ ಕಾಣೆಯಾಗಿದ್ದು, ಅವುಗಳನ್ನು ಹುಡುಕಲಾಗುತ್ತಿದೆ. ಆಕೆಯ ಪತಿ ದಿಲ್ದಾರ್ ಅನ್ಸಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳು ಆತನ ಎರಡನೇ ಪತ್ನಿ.”
ಆರೋಪಿ ಎಲೆಕ್ಟ್ರಿಕ್ ಕಟರ್‌ನಂತಹ ಹರಿತವಾದ ವಸ್ತುವನ್ನು ಬಳಸಿ ಮಹಿಳೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ತನ್ನ ಮಗಳ ದೇಹವನ್ನು 50 ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ರುಬಿಕಾ ಅವರ ತಂದೆ ಹೇಳಿಕೊಂಡಿದ್ದಾರೆ, ಆದರೂ ಪೊಲೀಸರು ಇದುವರೆಗೆ 18 ತುಂಡುಗಳನ್ನು ಮಾತ್ರ ಪಡೆದುಕೊಂಡು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಪೊಲೀಸರ ಪ್ರಕಾರ, ಪ್ರಕರಣದ ಪ್ರಾಥಮಿಕ ಶಂಕಿತ ಆರೋಪಿ ದಿಲ್ದಾರ್ ಅನ್ಸಾರಿ, ಆದರೆ ಕ್ರೂರ ಹತ್ಯೆಯಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯೂ ಇದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

 

 

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement