ನಮಗೆ ನಾಯಿ ಬೇಕು, ಹಣವಲ್ಲ: ಡೋಗೊ ಅರ್ಜೆಂಟಿನೋ ನಾಯಿಗಾಗಿ ಮಾಲೀಕರನ್ನೇ ಅಪಹರಿಸಿದ ಮೂವರು..!

ನವದೆಹಲಿ: ಗ್ರೇಟರ್ ನೋಯ್ಡಾದ ಪ್ರದೇಶದಲ್ಲಿ, ಅಪಹರಣಕಾರರು ಸಾಕು ನಾಯಿಯೊಂದನ್ನು ಇಷ್ಟಪಟ್ಟ ಕಾರಣ ನಾಯಿ ಮಾಲೀಕನನ್ನು ಅಪಹರಿಸಿದ ಘಟನೆ ನಡೆದ ವರದಿಯಾಗಿದೆ.
ನಾಯಿ ಮಾಲೀಕರನ್ನು ಕಿಡ್ನಾಪ್ ಮಾಡಿ ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಅಲಿಗಢಕ್ಕೆ ಕರೆದೊಯ್ಯಲಾಗಿದೆ ಎಂದು ಆರೋಪಿಸಲಾಗಿದೆ. ಬೀಟಾ 2 ಪೊಲೀಸ್ ಠಾಣೆಯ ಆಲ್ಫಾ 2 ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಡೋಗೊ ಅರ್ಜೆಂಟಿನೋ ನಾಯಿ ಸಾಕಿರುವ ನನ್ನ ಸಹೋದರ ಶುಭಂ ವಾಕಿಂಗ್‌ಗೆ ಹೊರಟಿದ್ದಾಗ ಮೂವರು ದಾಳಿಕೋರರು ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಬಂದು ನಾಯಿಯ ಮೇಲಿರುವ ತಮಗೆ ಬೇಕೆಂದು ಕೇಳಿದರು ಹಾಗೂ ನಾಯಿಯನ್ನು ತಮಗೆ ಕೊಡಬೇಕು ಎಂದು ಬಲವಂತಪಡಿಸಿದರು. ಶುಭಂ ನಿರಾಕರಿಸಿದಾಗ, ಮೂವರೂ ವಾಗ್ವಾದಕ್ಕಿಳಿದರು ಮತ್ತು ಹೇಗಾದರೂ ಮಾಡಿ ನಾಯಿಯನ್ನು ತೆಗೆದುಕೊಳ್ಳಬೇಕು ಎಂದು ಯೋಜನೆ ರೂಪಿಸಿದರು ಎಂದು ಗ್ರೇಟರ್ ನೋಯ್ಡಾದ ನಿವಾಸಿ ರಾಹುಲ್ ಹೇಳಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ವಾಗ್ವಾದ ತಾರಕಕ್ಕೇರುತ್ತಿದ್ದಂತೆ ರಾಹುಲ್ ಆಗಮಿಸಿ ಅದನ್ನು ಶಮನಗೊಳಿಸಲು ಯತ್ನಿಸಿದರು. ಇಬ್ಬರೂ ಸಹೋದರರು ತಮ್ಮ ನಾಯಿಯನ್ನು ಕೊಡಲು ನಿರಾಕರಿಸಿದ ನಂತರ, ದಾಳಿಕೋರರು ಪಿಸ್ತೂಲ್‌ಗಳನ್ನು ಹೊರತೆಗೆದು, ರಾಹುಲ್‌ನನ್ನು ಅಪಹರಿಸಿ ಪರಾರಿಯಾಗಿದ್ದಾರೆ. ನಂತರ ಆರೋಪಿ ಶುಭಮ್‌ಗೆ ಕರೆ ಮಾಡಿ ಸಹೋದರನ ಬಿಡುಗಡೆಗೆ ನಾಯಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ಅಪಹರಣಕಾರರ ಬೇಡಿಕೆಗೆ ಮಣಿಯಲು ಶುಭಂ ನಿರಾಕರಿಸಿದ ನಂತರ ಪೊಲೀಸರಿಗೆ ಹೆದರಿ ಅಪಹರಣಕಾರರು ರಾತ್ರಿ 2 ಗಂಟೆ ಸುಮಾರಿಗೆ ಅಲಿಘರ್‌ನಲ್ಲಿ ರಾಹುಲ್‌ನನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ, ಅಂತಿಮವಾಗಿ ರಾಹುಲ್ ಬೆಳಿಗ್ಗೆ ಗ್ರೇಟರ್ ನೋಯ್ಡಾಕ್ಕೆ ಆಗಮಿಸಿ ಬೀಟಾ 2 ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ.
ಮೂವರು ಆರೋಪಿಗಳಾದ ವಿಶಾಲ್, ಲಲಿತ್ ಮತ್ತು ಮಾಂಟಿ ಉತ್ತರ ಪ್ರದೇಶದ ಅಲಿಗಢ ಪ್ರದೇಶದವರು. ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯುವಕನೊಬ್ಬನ ಅಪಹರಣ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬೀಟಾ 2 ಪೊಲೀಸ್ ಠಾಣೆ ಪೊಲೀಸ್ ಠಾಣೆಯ ಮುಖ್ಯಸ್ಥ ಅಂಜನಿ ಸಿಂಗ್ ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಪ್ರಸ್ತುತ ಪರಾರಿಯಾಗಿರುವ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಖಾತೆಯನ್ನು ವಂಚನೆ ಖಾತೆ ಎಂದು ವರ್ಗೀಕರಿಸುವ ಮೊದಲು ಸಾಲಗಾರರು ಹೇಳುವುದನ್ನೂ ಆಲಿಸಬೇಕು : ಸುಪ್ರೀಂ ಕೋರ್ಟ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement