ಬೆಳಗಾವಿ ಸುವರ್ಣಸೌಧದ ವಿಧಾನಸಭೆ ಸಭಾಂಗಣದಲ್ಲಿ ಸಾವರ್ಕರ್‌ ಸೇರಿ 7 ಮಂದಿ ಫೋಟೋ ಅನಾವರಣ : ಕಾಂಗ್ರೆಸ್‌ನಿಂದ ಪ್ರತಿಭಟನೆ

posted in: ರಾಜ್ಯ | 0

ಬೆಳಗಾವಿ: ಬೆಳಗಾವಿ ಸುವರ್ಣ ಸೌಧದ ವಿಧಾನಸಭೆ ಸಭಾಂಗಣದ ಒಳಗಡೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾವರ್ಕರ್, ಇತರ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಾಯಕರ ಭಾವಚಿತ್ರವನ್ನು ಅನಾವರಣಗೊಳಿಸಿದ ನಂತರ ಕರ್ನಾಟಕ ಕಾಂಗ್ರೆಸ್ ಸದಸ್ಯರು ಬೆಳಗಾವಿಯಲ್ಲಿ ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು.
ಮಹಾತ್ಮಾ ಗಾಂಧಿ, ಬಸವಣ್ಣ, ಸುಭಾಷ್ ಚಂದ್ರ ಬೋಸ್‌, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸ್ವಾಮಿ ವಿವೇಕಾನಂದ ಹಾಗೂ ವೀರ ಸಾವರ್ಕರ್ ಅವರ ಭಾವಚಿತ್ರಗಳನ್ನು ಸ್ಪೀಕರ್ ವಿಶ್ವೇಶ್ವರ ಕಾಗೇರಿ ಅನಾವರಣಗೊಳಿಸಿದರು.
ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಲೋಕೋಪಯೋಗಿ ಖಾತೆ ಸಚಿವ ಸಿ.ಸಿ. ಪಾಟೀಲ, ಜಲಸಂಪನ್ಮೂಲ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಇದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. “ನಮ್ಮ ವಿಧಾನಸಭೆ ಕಲಾಪ ನಡೆಯಬಾರದು ಎಂದು ಅವರು ಬಯಸುತ್ತಾರೆ. ಅದಕ್ಕೆ ಅಡ್ಡಿಪಡಿಸಲು ಅವರು ಬಯಸುತ್ತಾರೆ. ನಾವು ಅವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ವಿಷಯಗಳನ್ನು ಎತ್ತಲು ಹೊರಟಿರುವ ಕಾರಣ ಅವರು ಈ ಫೋಟೋವನ್ನು ತಂದಿದ್ದಾರೆ. ಅವರಿಗೆ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ ಹಾಗೂ ಬೇಕಾಗಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಮತ್ತು ಶಾಸಕ ಡಿ.ಕೆ.ಶಿವಕುಮಾರ ಆರೋಪಿಸಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಹೆಂಡತಿ,ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ; ನಂತರ ತಾನೂ ನೇಣಿಗೆ ಶರಣು

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಕರ್ನಾಟಕ ವಿಧಾನಸಭೆ ಸಭಾಂಗಣದಲ್ಲಿ ಎಲ್ಲ ರಾಷ್ಟ್ರ ನಾಯಕರ ಹಾಗೂ ಸಮಾಜ ಸುಧಾರಕರ ಭಾವಚಿತ್ರ ಹಾಕಬೇಕೆಂಬುದು ನಮ್ಮ ಆಗ್ರಹ, ಪ್ರತಿಭಟನೆಯಲ್ಲ. ಆದರೆ ವಿಧಾನಸಭೆಯಲ್ಲಿ ವೀರ್ ಸಾವರ್ಕರ್ ಭಾವಚಿತ್ರ ಹಾಕಲು ಸ್ಪೀಕರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಯಾರ ಭಾವಚಿತ್ರ ಹಾಕುವುದಕ್ಕೂ ನನ್ನ ವಿರೋಧವಿಲ್ಲ, ಸ್ಪೀಕರ್ ಕಚೇರಿಯಿಂದ ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನ್‌ ನಾಯಕರ ಫೋಟೋ ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಇಲ್ಲಿಗೆ ಬಂದ ಮೇಲೆ ಮಾಧ್ಯಮ ಮೂಲಕ ಸಾವರ್ಕರ್ ಫೋಟೋ ಹಾಕುವುದು ಗೊತ್ತಾಯಿತು. ಕಾನೂನು ಮತ್ತು ಸುವ್ಯವಸ್ಥೆಯಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಬಯಸುತ್ತಿದೆ ಎಂದು ಹೇಳಿದರು.
ಸ್ಪೀಕರ್ ಪೀಠದ ಪಕ್ಕದಲ್ಲಿ ಸಾವರ್ಕರ್ ಭಾವಚಿತ್ರವನ್ನು ಹಾಕಲಾಗುವುದು ಮತ್ತು ಸೋಮವಾರ ಅದನ್ನು ಉದ್ಘಾಟಿಸಲಾಗುವುದು ಎಂಬ ವದಂತಿ ಭಾನುವಾರ ಹೊರಹೊಮ್ಮಿತು. ಸೋಮವಾರ ಬೆಳಗಾವಿಗೆ ಬಂದಿಳಿದ ಬಸವರಾಜ ಬೊಮ್ಮಾಯಿ, ವಿಧಾನಸಭೆಯೊಳಗೆ ಫೋಟೋಗಳನ್ನು ಅಳವಡಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈಗಷ್ಟೇ ಬಂದಿದ್ದೇನೆ, ಶಾಸಕಾಂಗ ಸಭೆಯೊಳಗೆ ಏನೇ ಆಗಲಿ ಅದು ಸ್ಪೀಕರ್‌ಗೆ ಬಿಟ್ಟದ್ದು. ಈ ಬಗ್ಗೆ ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಕಾರಿನ ಮೇಲೆ ಉರುಳಿದ ಕಾಂಕ್ರಿಟ್ ಮಿಕ್ಸ್ ಲಾರಿ : ತಾಯಿ-ಮಗಳು ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement