ರಾಜ್ಯದಲ್ಲಿ ಈಗಿನ ಮೀಸಲಾತಿ ವ್ಯವಸ್ಥೆ ಸಂಪೂರ್ಣ ರದ್ದುಪಡಿಸಲಿ: ಕೋಡಿಹಳ್ಳಿ ಚಂದ್ರಶೇಖರ

ಶಿರಸಿ: ದೊಡ್ಡ ಹಾಗೂ ಬಲಿಷ್ಠ ಸಮುದಾಯಗಳು ತಮ್ಮ ಸಮುದಾಯದ ಜನಸಂಖ್ಯೆ ಮುಂದಿಟ್ಟು ಸರ್ಕಾರದ ಮೇಲೆ ಪ್ರಭಾವ ಬೀರಿ ಮೀಸಲಾತಿ ಗಿಟ್ಟಿಸಿಕೊಳ್ಳುತ್ತಿದ್ದರೆ ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಜಾತಿ ಸಂಘರ್ಷಕ್ಕೆ ಕಾರಣವಾಗುವ ಮೀಸಲಾತಿ ತೆಗೆದುಹಾಕಿ ಆರ್ಥಿಕ ಮಾನದಂಡದ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಬೇಕು ಎಂದು ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಒತ್ತಾಯಿಸಿದರು.
ಶಿರಸಿ ಪತ್ರಿಕಾಭವನದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಮಸಾಲಿ, ಒಕ್ಕಲಿಗ ಹೀಗೆ ಹತ್ತು ಹಲವು ಬಲಿಷ್ಠ ಸಮಾಜದವರು ತಮ್ಮ ಸಮುದಾಯದವರ ಸಂಖ್ಯೆ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮೀಸಲಾತಿಗಾಗಿ ಒತ್ತಡ ಹಾಕುತ್ತಿವೆ. ಸರ್ಕಾರ ಮತ ಬ್ಯಾಂಕಿಗಾಗಿ ಅವರ ಒತ್ತಾಯಕ್ಕೆ ಮಣಿದು ಮೀಸಲಾತಿ ನೀಡಿದರೆ ಮೀಸಲಾತಿ ತನ್ನ ನಿಜವಾದ ಅರ್ಥ ಕಳೆದುಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಕೂಗು ಸಹ ಬಲವಾಗಿ ಕೇಳಿ ಬರುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಸಣ್ಣ ಹಾಗೂ ದುರ್ಬಲ ಸಮುದಾಯದವರು ತಮ್ಮ ಸಂವಿಧಾನಬದ್ಧ ಹಕ್ಕಿನಿಂದ ವಂಚಿತರಾಗುತ್ತಾರೆ. ಮೀಸಲಾತಿ ನೀಡುವಾಗ ಸರ್ಕಾರ ಕೆಲವಷ್ಟು ಮಾನದಂಡವನ್ನು ಅನುಸರಿಸಬೇಕು. ಜನಸಂಖ್ಯೆ ಮುಂದಿಟ್ಟು ರಾಜಕೀಯ ಪ್ರಭಾವ ಬೀರಿ ಮೀಸಲಾತಿ ಹೆಚ್ಚಳ ಮಾಡಿಕೊಳ್ಳುವ ಹಾಗೂ ಜಾತಿ ಜಾತಿಗಳ ನಡುವೆ ಕಚ್ಚಾಟಕ್ಕೆ ಕಾರಣವಾಗುವ ಮೀಸಲಾತಿ ನಮಗೆ ಬೇಡ. ಒಂದು ವೇಳೆ ಮೀಸಲಾತಿ ನೀಡಲೇಬೇಕೆಂದರೆ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನೀಡಿದರೆ ಜಾತಿ ಸಂಘರ್ಷಗಳು ಕಡಿಮೆಯಾಗುತ್ತದೆ. ಈ ಬಗ್ಗೆ ಸಂವಿಧಾನದಲ್ಲಿ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೆಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಬೆಳೆ ವಿಮೆ ಬಗ್ಗೆ ಮಾತನಾಡಿದ ಅವರು, ಸರ್ಕಾರ ಬೆಳೆ ವಿಮೆ ನೀಡುವುದರಲ್ಲೂ ತಾರತಮ್ಯ ಮಾಡುತ್ತಿರುವುದು ಈ ಜಿಲ್ಲೆಗೆ ಬಂದ ಬೆಳೆ ವಿಮೆ ನೋಡಿದರೆ ತಿಯುತ್ತದೆ. ಯಾವುದೇ ಸರ್ಕಾರವಾದರೂ ರೈತರ ವಿಷಯದಲ್ಲಿ ಹೀಗೆ ಮಾಡುವುದು ಅಕ್ಷಮ್ಯ. ಮಳೆಯ ಪ್ರಮಾಣದ ಸುಳ್ಳು ಮಾಹಿತಿ ಪಡೆದು ಇಲ್ಲಿನ ರೈತರಿಗೆ ಅನ್ಯಾಯವೆಸಗಿದ್ದಾರೆ. ಬೆಳೆವಿಮೆ ವೈಜ್ಞಾನಿಕವಾಗಿರಬೇಕು. ಬೆಳೆವಿಮೆಗೆ ಇಂತಿಷ್ಟೇ ಪ್ರಮಾಣದಲ್ಲಿ ಬೆಳೆ ನಾಶವಾಗಿರಬೇಕು ಎಂದು ಹೇಳಿದರೆ ಅದ್ಯಾವ ಮಾನದಂಡ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಉತ್ತರ ಕನ್ನಡ ಜಿಲ್ಲೆಗೆ ಬೆಳೆವಿಮೆಯಿಂದಾದ ನಷ್ಟ ಭರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಹಾಗು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಎಲ್ ನಾಯ್ಕ ಕಿರವತ್ತಿ, ರೈತ ಸಂಘದ ಮಹೇಶ ನಾಯ್ಕ ಮೊದಲಾದವರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement