33 ಪಾಕಿಸ್ತಾನಿ ತಾಲಿಬಾನ್ ಉಗ್ರರನ್ನು ಕೊಂದು ಹಾಕಿದ ಪಾಕ್‌ ಸೇನೆ : ಒತ್ತೆಯಾಳು ಬಿಕ್ಕಟ್ಟು ಮುಕ್ತಾಯ

40 ಗಂಟೆಗಳ ಕಾಲ ನಡೆದ ಘರ್ಷಣೆಯ ನಂತರ, ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳು ಮಂಗಳವಾರ ಪೊಲೀಸರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಎಲ್ಲಾ 33 ಭಯೋತ್ಪಾದಕರನ್ನು ಕೊಂದಿವೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ (AFP) ವರದಿ ಮಾಡಿದೆ.
ಈ ಘರಷ್ಣೆಯಲ್ಲಿ ಪಾಕಿಸ್ತಾನಿ ಸೇನೆಯ ವಿಶೇಷ ಪಡೆಗಳ ಇಬ್ಬರು ಸೈನಿಕರೂ ಹತರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಥಳೀಯ ತಾಲಿಬಾನ್ ಉಗ್ರರು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಎಂಬಲ್ಲಿ ಅತ್ಯಂತ ಭದ್ರವಾದ ಭಯೋತ್ಪಾದನಾ ನಿಗ್ರಹ ಕೇಂದ್ರವನ್ನು ವಶಪಡಿಸಿಕೊಂಡಿದ್ದರು.
ವರದಿಗಳ ಪ್ರಕಾರ, ವಿಶೇಷ ಕಾರ್ಯಾಚರಣೆ 15 ನಿಮಿಷಗಳ ಕಾಲ ನಡೆಯಿತು ಎಂದು ಪಾಕಿಸ್ತಾನ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಒತ್ತೆಯಾಳುಗಳಲ್ಲಿ ಸಾವುನೋವುಗಳು ಸಂಭವಿಸಿವೆಯೇ ಎಂಬುದು ಇನ್ನೂ ತಿಳಿದಿಲ್ಲ ಮತ್ತು ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ.
ಕಳೆದ ವಾರ ಭಾನುವಾರದಂದು, ಬನ್ನು ಕಂಟೋನ್ಮೆಂಟ್‌ನೊಳಗಿನ ಭಯೋತ್ಪಾದನಾ ನಿಗ್ರಹ ಕೇಂದ್ರದಲ್ಲಿ ಬಂಧಿತರಾಗಿದ್ದ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಉಗ್ರರು ತಮ್ಮನ್ನು ಮುಕ್ತಗೊಳಿಸಿ ಮತ್ತು ಕೇಂದ್ರದಲ್ಲಿನ ಪೊಲೀಸರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡರು ಹಾಗೂ ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದರು.

ಕನಿಷ್ಠ 30 ಟಿಟಿಪಿ ಭಯೋತ್ಪಾದಕರು ಭಾನುವಾರ ಪೇಶಾವರದಲ್ಲಿ ಭಯೋತ್ಪಾದನಾ ನಿಗ್ರಹ ಕೇಂದ್ರವನ್ನು ವಶಪಡಿಸಿಕೊಂಡರು ಮತ್ತು ಸುಮಾರು 10 ಜನರನ್ನು ಒತ್ತೆಯಾಳಾಗಿ ಇರಿಸಿದ್ದರು. ಪೊಲೀಸರು ತಾಲಿಬಾನ್ ಬಂಧಿತರನ್ನು ವಿಚಾರಣೆ ನಡೆಸುತ್ತಿರುವಾಗ ದಾಳಿ ಮಾಡಿದ್ದ ಅವರು ಪೊಲೀಸ್‌ ಕೇಂದ್ರವನ್ನೇ ವಶಕ್ಕೆ ಪಡೆದಿದ್ದರು. ಒತ್ತೆಯಾಳುಗಳಲ್ಲಿ ಕೆಲವು ಸೈನಿಕರು ಸಹ ಸೇರಿದ್ದಾರೆ, ಮಾತುಕತೆಗಳು ವಿಫಲವಾದರೆ ಅವರು ಮಿಲಿಟರಿ ಸೌಲಭ್ಯದ ಮೇಲೆ ದಾಳಿ ಮಾಡುವ ಬಗ್ಗೆ ಕಳವಳ ವ್ಯಕ್ತವಾಗಿತ್ತು.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ವೀಡಿಯೊ ಸಂದೇಶದಲ್ಲಿ, ಒತ್ತೆಯಾಳುಗಳು ತಮ್ಮನ್ನು ಅಫ್ಘಾನಿಸ್ತಾನಕ್ಕೆ ವಿಮಾನದಲ್ಲಿ ಕಳುಹಿಸುವಂತೆ ಒತ್ತಾಯಿಸಿದರು ಮತ್ತು ತಮ್ಮ ಸುರಕ್ಷಿತ ಮಾರ್ಗವನ್ನು ವ್ಯವಸ್ಥೆಗೊಳಿಸದಿದ್ದರೆ ಒತ್ತೆಯಾಳಾಗಿರುವ ಅಧಿಕಾರಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.
ಅಧಿಕಾರಿಗಳು ಕೇಂದ್ರವನ್ನು ಸುತ್ತುವರಿದು ಒತ್ತೆಯಾಳುಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು ಹಾಗೂ ಭಯೋತ್ಪಾದಕರನ್ನು ಶರಣಾಗುವಂತೆ ಕೇಳಿಕೊಂಡರು. ಒತ್ತೆಯಾಳು ಬಿಕ್ಕಟ್ಟನ್ನು ಶಾಂತಿಯುತ ರೀತಿಯಲ್ಲಿ ಪರಿಹರಿಸಲು ಕೆಲವು ಪಾಕಿಸ್ತಾನಿ ಧರ್ಮಗುರುಗಳು ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ತಾಲಿಬಾನ್ ನಾಯಕತ್ವದೊಂದಿಗೆ ಮಾತುಕತೆ ನಡೆಸುತ್ತಿದ್ದರು.

ಮಂಗಳವಾರ ಪೊಲೀಸ್‌ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಸ್ಫೋಟಗಳು ಕೇಳಿಬಂದವು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ನಂತರ, ಎಲ್ಲಾ 33 ಪಾಕಿಸ್ತಾನೀ ತಾಲಿಬಾನ್‌ ಭಯೋತ್ಪಾದಕರು ಮತ್ತು ಇಬ್ಬರು ವಿಶೇಷ ಪಡೆಗಳು ಘರ್ಷಣೆ ವೇಳೆ ಕೊಲ್ಲಲ್ಪಟ್ಟರು ಎಂದು ದೃಢಪಡಿಸಲಾಯಿತು.
ಏತನ್ಮಧ್ಯೆ, ಟ್ವಿಟರ್‌ನಲ್ಲಿ ಪರಿಶೀಲಿಸದ ವೀಡಿಯೊವು ಖೈಬರ್ ಪಖ್ತುಂಕ್ವಾ ಪೊಲೀಸರು ಮತ್ತು ಟಿಟಿಪಿ ಉಗ್ರರ ನಡುವೆ ಗುಂಡಿನ ದಾಳಿಯನ್ನು ತೋರಿಸಿದೆ.
ಪಾಕಿಸ್ತಾನಿ ತಾಲಿಬಾನ್ ಪ್ರತ್ಯೇಕ ಗುಂಪಾಗಿದೆ, ಆದರೆ ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ನ್ಯಾಟೋ ಪಡೆಗಳ ವಾಪಸಾತಿ ಅಂತಿಮ ಹಂತದಲ್ಲಿದ್ದ ಕಾರಣ ಕಳೆದ ವರ್ಷ ನೆರೆಯ ದೇಶದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಅಫ್ಘಾನ್ ತಾಲಿಬಾನ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಕಳೆದ ತಿಂಗಳಿನಿಂದ ಪಾಕಿಸ್ತಾನಿ ತಾಲಿಬಾನ್‌ಗಳು ಏಕಪಕ್ಷೀಯವಾಗಿ ಪಾಕಿಸ್ತಾನ ಸರ್ಕಾರದೊಂದಿಗೆ ಒಂದು ತಿಂಗಳ ಕಾಲ ಕದನ ವಿರಾಮ ಕೊನೆಗೊಳಿಸಿದ ನಂತರ ಭದ್ರತಾ ಪಡೆಗಳ ಮೇಲೆ ದಾಳಿಗಳನ್ನು ಹೆಚ್ಚಿಸಿವೆ.

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement