40 ಅಡಿ ಆಳದ ಹೊಂಡಕ್ಕೆ ಕಾರು ಉರುಳಿ ಬಿದ್ದು 8 ಅಯ್ಯಪ್ಪ ಭಕ್ತರು ಸಾವು

ತೇಣಿ: ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ, ಅಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ಕಾರು 40 ಅಡಿ ಆಳದ ಹೊಂಡಕ್ಕೆ ಉರುಳಿದ ಪರಿಣಾಮ ಕನಿಷ್ಠ ಎಂಟು ಅಯಪ್ಪ ಭಕ್ತರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರನ್ನು ರಕ್ಷಿಸಿದ್ದಾರೆ. ಭಕ್ತರು ಸನ್ಮುಗಸುಂದರಪುರಂ ಗ್ರಾಮದ ನಿವಾಸಿಗಳಾಗಿದ್ದು, ಶಬರಿಮಲೆಗೆ ಭೇಟಿ ನೀಡಿದ ನಂತರ ಮನೆಗೆ ಮರಳುತ್ತಿದ್ದರು. ಶುಕ್ರವಾರ ತಡರಾತ್ರಿ ಕಾರು ಪಲ್ಟಿಯಾಗಿದೆ.ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ವಿ.ಮುರಳೀಧರನ್, ಗುಡ್ಡಗಾಡು ಮಾರ್ಗದಲ್ಲಿ ತಿರುವಿನಲ್ಲಿ ವಾಹನ ಚಲಾಯಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿರುವ ಶಂಕೆ ಇದೆ. ಥೇಣಿ ಜಿಲ್ಲೆಯ ಕುಮುಲಿ ಮೌಂಟೇನ್ ಪಾಸ್‌ನಲ್ಲಿ ಕಾರು 40 ಅಡಿ ಆಳದ ಹೊಂಡಕ್ಕೆ ಉರುಳಿ ಎಂಟು ಭಕ್ತರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಭೀಕರ ಅಪಘಾತದ ಸಮಯದಲ್ಲಿ, ಏಳು ಜನರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು. ಮೃತರಲ್ಲಿ ಅಪ್ರಾಪ್ತ ಬಾಲಕ ಸೇರಿದ್ದು, ಅವರೆಲ್ಲ ಜಿಲ್ಲೆಯ ಆಂಡಿಪಟ್ಟಿ ನಿವಾಸಿಗಳು. ಅಲ್ಲದೆ, ಗಾಯಗೊಂಡ ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement